Tuesday, September 17, 2024

ಪ್ರಾಯೋಗಿಕ ಆವೃತ್ತಿ

ಮೇ 31 ಕ್ಕೆ ಎಸ್ಐಟಿ ಮುಂದೆ ಹಾಜರಾಗ್ತೇನೆ: ವೀಡಿಯೋ ಮೂಲಕ ಪ್ರಜ್ವಲ್ ಪ್ರತ್ಯಕ್ಷ

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಳೆದ ಒಂದು ತಿಂಗಳಿಂದ ನಾಪತ್ತೆಯಾಗಿ ವಿದೇಶದಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ವೀಡಿಯೋ ಮೂಲಕ ದಿಢೀರ್ ಪ್ರತ್ಯಕ್ಷನಾಗಿ ಮಾತನಾಡಿದ್ದಾನೆ.

“>

ವಿದೇಶದಲ್ಲಿದ್ದುಕೊಂಡೇ‌ವೀಡಿಯೋ ಮೂಲಕ ಮಾತನಾಡಿರುವ ಪ್ರಜ್ವಲ್ ರೇವಣ್ಣ, ಮೊದಲಿಗೆ ನಾನು ನನ್ನ ತಂದೆ-ತಾಯಿ, ತಾತ, ಕುಮಾರಣ್ಣ,ನಾಡಿನ ಜನತೆ ಹಾಗೂ ನನ್ನೆಲ್ಲ ಕಾರ್ಯಕರ್ತರಲ್ಲಿ ಕ್ಷಮೆ ಕೇಳುತ್ತೇನೆ.26 ನೇ ತಾರೀಖು ಚುನಾವಣೆ ನಡೆಯಿತು. ನಾನು 26ರಂದು ಪೂರ್ವ ನಿಯೋಜಿತ ಕಾರ್ಯಕ್ರಮದಂತೆ ವಿದೇಶಕ್ಕೆ ತೆರಳಿದೆ. ಆ ಸಂದರ್ಭದಲ್ಲಿ ನನ್ನ ಮೇಲೆ ಯಾವುದೇ ಪ್ರಕರಣ ಇರಲಿಲ್ಲ,ಎಸ್ಐಟಿ ಕೂಡ ರಚನೆಯಾಗಿರಲಿಲ್ಲ.ನಾನು ವಿದೇಶಕ್ಕೆ ತೆರಳಿದ ಮೂರು ನಾಲ್ಕು ದಿನದ ನಂತರ ಯುಟ್ಯೂಬ್,ಮಾಧ್ಯಮಗಳಲ್ಲಿ ನನಗೆ ಪೆನ್ ಡ್ರೈ ಮಾಹಿತಿ ದೊರಕಿತು. ಎಸ್ಐಟಿ ಕೂಡ ನೋಟಿಸ್ ಕೊಡುವ ಕೆಲಸ ಮಾಡಿತು. ನಾನು ನಮ್ಮ ವಕೀಲರ ಮುಖಾಂತರ ಏಳು ದಿನ ಸಮಯ ಕೇಳಿದೆ. ಅದರ ಮಾರನೆ ದಿನ ಕಾಂಗ್ರೆಸ್ಸಿನ ಹಿರಿಯ ನಾಯಕರು, ರಾಹುಲ್ ಗಾಂಧಿಯವರು, ಎಲ್ಲ ಹಿರಿಯ ನಾಯಕರುಗಳು ಬಹಿರಂಗ ವೇದಿಕೆಗಳಲ್ಲಿ ಈ ವಿಚಾರವನ್ನು ಪ್ರಚಾರ ಮಾಡಲು, ಚರ್ಚೆ ಮಾಡುವುದು ನೋಡಿ ಸಾಕಷ್ಟು ಖಿನ್ನತೆಗೆ ಒಳಗಾಗಿ ಆಘಾತಕ್ಕೊಳಗಾದೆ.

ಹಾಸನದಲ್ಲೂ ಕೂಡ ಕೆಲವು ಶಕ್ತಿಗಳು ಎಲ್ಲರೂ ಒಟ್ಟಿಗೆ ಸೇರಿ ರಾಜಕೀಯ ಪಿತೂರಿ ಮಾಡಿದರು.ನನ್ನ ಮೇಲೆ ಷಡ್ಯಂತ್ರ ನಡೆದಿದ್ದು, ನಾನು ರಾಜಕೀಯವಾಗಿ ಬೆಳಿತಾ ಇದ್ದೀನಿ ಎಂಬ ಕಾರಣಕ್ಕೆ ಇಂತಹ ಪ್ರಕರಣಗಳಲ್ಲಿ ಸಿಲುಕಿಸಲು ಕೆಲವು ಶಕ್ತಿಗಳು ಒಂದಾಗಿ ಕೆಲಸ ಮಾಡಿವೆ. ಹಾಗಾಗಿ ಇವೆಲ್ಲವನ್ನು ನೋಡಿದ ನನಗೆ ಅಘಾತವಾಯಿತು. ಹಾಗಾಗಿ ನಾನೇ ದೂರ ಇದ್ದೆ. ಹಾಗಾಗಿ ಯಾರು ಕೂಡ ಈ ಬಗ್ಗೆ ತಪ್ಪು ತಿಳಿಯಬೇಡಿ. ನಾನೇ ಖುದ್ದಾಗಿ ಶುಕ್ರವಾರ 31ನೇ ತಾರೀಕು ಬೆಳಿಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಬಂದು ವಿಚಾರಣೆಗೆ ಹಾಜರಾಗಿ ಸಂಪೂರ್ಣ ಮಾಹಿತಿ ನೀಡುತ್ತೇನೆ.ಅವರ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವಂತ ಕೆಲಸ ಮಾಡುತ್ತೇನೆ. ಈ ಸುಳ್ಳು ಪ್ರಕರಣಗಳಿಂದ ಆಚೆ ಬರುವ ಕೆಲಸವನ್ನು ನ್ಯಾಯಾಂಗದ ಮುಖಾಂತರ ಮಾಡುತ್ತೇನೆ. ದೇವರ ಆಶೀರ್ವಾದ, ಜನರ ಆಶೀರ್ವಾದ,ಕುಟುಂಬದ ಆಶೀರ್ವಾದ ನನ್ನ ಮೇಲಿದ್ದು,ಈ ಪ್ರಕರಣದಿಂದ ಹೊರ ಬರತ್ತೇನೆ ಎಂದು ವೀಡಿಯೋ Ship ತಿಳಿಸಿರುವ ಪ್ರಜ್ವಲ್ ರೇವಣ್ಣ ಮೇ 31 ರಂದು ಎಸ್ಐಟಿ ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾನೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!