Friday, September 20, 2024

ಪ್ರಾಯೋಗಿಕ ಆವೃತ್ತಿ

ಸುಳ್ಳು ಸಮೀಕ್ಷೆ ನೀಡಿ ಜನರೆದುರು ಬೆತ್ತಲಾದ ಪ್ರಶಾಂತ್ ಕಿಶೋರ್

ದೇಶದ ಅತ್ಯಂತ ದೊಡ್ಡ ರಾಜಕೀಯ ತಂತ್ರಗಾರ ಎಂದು ಗರ್ವ ಪಡುತ್ತಿದ್ದ ಪ್ರಶಾಂತ್ ಕಿಶೋ‌ರ್ ಬಿಜೆಪಿ ಪಕ್ಷದ ಪರವಾಗಿ ಸುಳ್ಳು ಸಮೀಕ್ಷೆ ಹೇಳಿದ್ದಾನೆ ಎಂದು ದೇಶದ ಜನರೇ ಆತನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚೆನ್ನಾಗಿ ಬೆಂಡೆತ್ತುತ್ತಿದ್ದಾರೆ.

ಈ ಬಾರಿ ಎನ್‌ಡಿಎ ಮಿತ್ರಕೂಟ 300ರ ಗಡಿ ದಾಟುವುದು ಕಷ್ಟ ಎಂದು ಹಲವು ರಾಜಕೀಯ ಪಂಡಿತರು, ಯೂಟ್ಯೂಬ್ ಮಾಧ್ಯಮಗಳು ತಿಳಿಸಿದ್ದವು. ದೇಶದ್ಯಾಂತ ಈ ಬಾರಿ ಮೋದಿ ಅಲೆ ಇಲ್ಲದ ಕಾರಣ ಬಿಜೆಪಿ 240-250 ಸ್ಥಾನ ಪಡೆಯಬಹುದು ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದರು.

ಈ ಸಂದರ್ಭದಲ್ಲಿ ದಿಢೀರ್ ಎಂದು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ ಪ್ರಶಾಂತ್ ಕಿಶೋರ್ ಬಿಜೆಪಿ ಸ್ವತಂತ್ರವಾಗಿ 303 ಸ್ಥಾನ ತಲುಪುತ್ತದೆ. ಎನ್‌ಡಿಎ ಮೈತ್ರಿ ಕೂಟ 370 ಸ್ಥಾನ ಪಡೆಯುತ್ತದೆ ಎಂದು ಹೇಳುತ್ತಿದ್ದ. ಆತ ಬಿಜೆಪಿ ಪರವಾಗಿ ಸುಳ್ಳು ನರೇಟಿವ್ ಸಿದ್ಧ ಮಾಡಲು ಬಂದಿದ್ದಾರೆ ಎಂದು ಜನರು ಮಾತನಾಡಲು ಆರಂಭಿಸಿದರು. ಆದರೂ ಪ್ರಶಾಂತ್ ಕಿಶೋರ್ ದಿನಕ್ಕೆರಡು ಟಿವಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಬಿಜೆಪಿ ಸ್ವತಂತ್ರವಾಗಿ ಕಳೆದ ಬಾರಿಯಷ್ಟೇ 303 ಸ್ಥಾನಗಳಿಸುತ್ತದೆ. ಎನ್‌ಡಿಎ ಮೈತ್ರಿ ಕೂಟ 370 ಸ್ಥಾನಗಳಿಸುತ್ತದೆ. ಕಾಂಗ್ರೆಸ್ ಮಿತ್ರ ಪಕ್ಷಗಳು 150 ಸ್ಥಾನ ಪಡೆಯುವುದು ಕಷ್ಟ ಎಂದೆಲ್ಲಾ ಬಳಾಂಗ್ ಬಿಟ್ಟಿದ್ದ.

ಅದರಂತೆ ಬಿಜೆಪಿ ಮಿತ್ರಪಕ್ಷಗಳ ಕೂಟ 370 ಸ್ಥಾನವಿರಲಿ 293 ಸ್ಥಾನಗಳನ್ನು ಗಳಿಸಲು ತಿಣುಕಾಡುವಂತಾಯಿತು. ಅದರಲ್ಲೂ ಬಿಜೆಪಿ 303 ಸ್ಥಾನಗಳ ಬದಲು 240 ಸ್ಥಾನಗಳಿಗೆ ಸೀಮಿತವಾಯ್ತು. ಇದು ಬಿಜೆಪಿ ಪಕ್ಷದ ಪರವಾಗಿ ಜನರ ಮನಸ್ಸನ್ನು ಬದಲಾಯಿಸಲು ಪ್ರಶಾಂತ್ ಕಿಶೋರ್ ಹೇಳಿದ ಸುಳ್ಳು ಎಂದು ಜನರೇ ಕಟುವಾಗಿ ಟೀಕಿಸಲು ಶುರು ಮಾಡಿದ್ದಾರೆ. ಹಲವು ನೆಟ್ಟಿಗರು, ಈ ರೀತಿ ಸುಳ್ಳು ಸಮೀಕ್ಷೆ ಮಾಡಲು ಬಿಜೆಪಿ‌ ನಿಮಗೆ ಎಷ್ಟು ಹಣ ನೀಡಿದೆ ಎಂದು ಪ್ರಶಾಂತ್ ಕಿಶೋರ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.

ಚುನಾವಣೆ ಮಗಿಯಲು‌ ಹದಿನೈದು ದಿನವಿರುವಾಗ ದಿಢೀರ್ ಎಂದು ಮಾಧ್ಯಮಗಳಿಗೆ ಸಂದರ್ಶನ ನೀಡುವ ಮೂಲಕ ಚುನಾವಣೆ ಕೊನೆಯಲ್ಲಿ ಆಡಿದ ಮಾತುಗಳು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಎರಡು ವರ್ಷದ ಕೆಳಗೆ ನಾನು ಇನ್ನು ಮುಂದೆ ರಾಜಕೀಯ ಪಕ್ಷಗಳಿಗೆ ಕನ್ಸಲ್ವೆನ್ಸಿ ಮಾಡುವುದಿಲ್ಲವೆಂದು ಹೇಳಿ ಬಿಹಾರದಲ್ಲಿ ಆಂದೋಲನ ಮಾಡುತ್ತಿದ್ದ ವ್ಯಕ್ತಿ ದಿಢೀರ್ ಎಂದು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ಮೋದಿಜೀ 303 ಸೀಟು ಗೆಲ್ಲುತ್ತಾರೆ ಎಂದು ಹೇಳಿದ್ದ. ಜೊತೆಗೆ ರಾಮಮಂದಿರ ಒಂದು ವೋಟನ್ನು ತರುವುದಿಲ್ಲ. ಮೋದಿಯ ಪ್ರಭಾವ ಕಡಿಮೆಯಾಗಿದೆ ಎಂದು ಹೇಳಿ, ಆದರೂ 303 ಸೀಟು ಗೆಲ್ಲುತ್ತಾರೆ ಎಂದಿದ್ದ.

ಆತನ ಪ್ರಕಾರ ದೇಶದಲ್ಲಿ ಬೆಲೆಯೇರಿಕೆ, ನಿರುದ್ಯೋಗ, ಆರ್ಥಿಕ ಅಸಮಾನತೆ, ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ ಇವೆಲ್ಲಾ ಚುನಾವಣೆಯ ವಿಷಯಗಳಾಗಿರಲಿಲ್ಲ. ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಈ ಹಿಂದಿನ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಮಾಧ್ಯಮಗಳು, ರಾಜಕೀಯ ಪರಿಣಿತರು ಹೇಳಿದ್ದರಲ್ಲದೆ, ಆರ್ ಎಸ್ ಎಸ್ ಸರ್ವೆ ಪ್ರಕಾರ ಬಿಜೆಪಿ 230 ರಿಂದ 240 ರ ಗಡಿ ದಾಟಲ್ಲ ಎಂದು ಹೇಳಿತ್ತು. ಈಗ ಫಲಿತಾಂಶ ಬಂದಿದೆ. ಪ್ರಶಾಂತ್ ಕಿಶೋರ್ ಜನರ ಎದುರು ಬೆತ್ತಲಾಗಿದ್ದಾನೆ. ಇವನ ಹಾಗೂ ಇವನ ಎಕ್ಸಿಟ್ ಪೋಲ್ ಮುಖ್ಯಸ್ಥರ ಮಾತು ಕೇಳಿ ಷೇರು ಮಾರುಕಟ್ಟೆಯಲ್ಲಿ ಸಣ್ಣ ಪುಟ್ಟ ಹೂಡಿಕೆದಾರರು ಲಕ್ಷಾಂತರ ಕೋಟಿ ಹಣ ಕಳೆದು ಕೊಂಡು ಬೀದಿಗೆ ಬಂದಿದ್ದಾರೆ. ಹೀಗೆ ಸುಳ್ಳು ಸಮೀಕ್ಷೆಗಳನ್ನು ರಾಜಕೀಯ ಪಕ್ಷಗಳಿಗೆ ಸಿದ್ದಪಡಿಸಿ ಕೊಡುವ ಈತ ಮಾತ್ರ ತನ್ನ  ತಿಜೋರಿ ತುಂಬಿಸಿಕೊಂಡಿದ್ದಾನೆಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!