ಮೈಸೂರಿನ ಸಂಸದ ಪ್ರತಾಪ್ ಸಿಂಹ ವಕೀಲರನ್ನು ಕ್ಷಮೆ ಕೇಳಬೇಕೆಂದು ಅಖೀಲ ಭಾರತ ವಕೀಲರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಖೀಲ ಭಾರತ ವಕೀಲರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್ ಮಾತನಾಡುತ್ತಾ ಸಂಸದ ಪ್ರತಾಪ್ ಸಿಂಹ ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ತಾಲ್ಲೂಕು ಕೋರ್ಟ್ ನಲ್ಲಿ ವಕೀಲಗಿರಿ ಮಾಡಿದ್ದವರಿಗೆ ಎಕಾನಮಿ ಬಗ್ಗೆ ಏನು ಗೊತ್ತು ಎಂದು ಬಯ್ಯುವ ಮೂಲಕ ತಾಲ್ಲೂಕಿನಲ್ಲಿ ಪ್ರಾಕ್ಟೀಸ್ ಮಾಡುವ ವಕೀಲರನ್ನು ಅವಮಾನಿಸಿದ್ದಾರೆ.
ವಕೀಲರನ್ನು ಸಮಾಜ ವಿಜ್ಞಾನಿ ಎಂದು ಕರೆಯುತ್ತಾರೆ. ತಾಲ್ಲೂಕು ಮಟ್ಟದಲ್ಲಿ ಪ್ರಾಕ್ಟೀಸ್ ಮಾಡುವ ವಕೀಲರ ಪರಿಶ್ರಮದ ಬಗ್ಗೆ ಉಚ್ಚನ್ಯಾಯಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ವಕೀಲರು ಮತ್ತು ನ್ಯಾಯಾಧೀಶರುಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವಕೀಲಗಿರಿ ಬಗ್ಗೆ ಈತನಿಗೆ ಏನು ಗೊತ್ತು? ಎಂದು ಪ್ರಶ್ನಿಸಿದರು.
ಇವರ ರಾಜಕೀಯ ಏನೇ ಇರಲಿ, ಇವರು ತಾಲ್ಲೂಕು ಮಟ್ಟದಲ್ಲಿ ವೃತ್ತಿ ಮಾಡುವ ವಕೀಲರನ್ನು ಕೇವಲವಾಗಿ ಅವಹೇಳನ ಮಾಡಿ ಮಾತನಾಡಿರುವುದು ಖಂಡನೀಯ ಪ್ರತಾಪ್ ಸಿಂಹ ರವರು ವಕೀಲರನ್ನು ಕ್ಷಮೆ ಕೇಳಬೇಕೆಂದು ಅಖೀಲ ಭಾರತ ವಕೀಲರ ಒಕ್ಕೂಟ ಈ ಮೂಲಕ ಒತ್ತಾಯಿಸುತ್ತದೆ ಎಂದು ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ.
ಶ್ರೀನಿವಾಸ್ ಕುಮಾರ್
ರಾಜ್ಯ ಕಾರ್ಯದರ್ಶಿ
ಅಖಿಲ ಭಾರತ ವಕೀಲರ ಒಕ್ಕೂಟ(AILU)