ಮದ್ದೂರಿನಲ್ಲಿ ಇಂದು ಮಧ್ಯಾಹ್ನ ಸುರಿದ ಭಾರೀ ಮಳೆಗೆ ಹಾಗೂ ಬಿರುಗಾಳಿಗೆ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬೆಲೆಬಾಳುವ ಮರಗಳು ಧರೆಗುರುಳಿವೆ.
ಮಳೆಯ ಆರ್ಭಟಕ್ಕೆ ಅನೇಕ ಮನೆಗಳ ಮೇಲ್ಛಾವಣಿಯ ಸಿಮೆಂಟು ಸೀಟುಗಳು ಬಹು ದೂರಕ್ಕೆ ಹಾರಿ ಹೋಗಿದೆ. ಬೀಸಿದ ಬಾರಿ ಗಾಳಿಗೆ ಮನೆಯ ಹೆಂಚುಗಳು ಒಡೆದು ಪುಡಿಪುಡಿಯಾಗಿದೆ.ತೆಂಗಿನ ಮರಗಳು ಸೇರಿದಂತೆ ಇತರೆ ಬೆಲೆ ಬಾಳುವ ಮರಗಳು ಬುಡಸಮೇತ ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿದೆ.
ವಳಗೆರೆಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆ ಕಾಂಪೌಂಡಿನ ಒಳಗಿದ್ದ ಭಾರಿ ಗಾತ್ರದ ಮರ ಪಕ್ಕದ ಸರ್ಕಾರಿ ಶಾಲೆಯ ಮೇಲ್ಚಾವಣಿಗೆ ಬಿದ್ದು ಸೀಮೆ ಹೆಂಚುಗಳು ನುಚ್ಚುನೂರಾಗಿ ಗೋಡೆ ಶಿಥಿಲಗೊಂಡು ನೆಲಕ್ಕುರುಳಿವೆ. ಸೊಳ್ಳೆಪುರ ಗೊರವನಹಳ್ಳಿ,ನಗರಕೆರೆ, ಸೋಂಪುರ, ಗೆಜ್ಜಲಗೆರೆ, ಬೆಸಗರಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ ವಳಗೆರೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ ಹೊಸಹಳ್ಳಿ ಅಂಗನವಾಡಿ ಕೇಂದ್ರ ಇಂದು ಮಧ್ಯಾಹ್ನ ಸುರಿದ ಭಾರಿ ಮಳೆಗೆ ಹಾಗೂ ಬಿರುಗಾಳಿಗೆ ಮೇಲ್ಚಾವಣಿ ಹಾಗೂ ಸುತ್ತಲೂ ಹೊದಿಕೆ ಮಾಡಿದ್ದ ಸೀಟುಗಳು ಬಿರುಗಾಳಿಗೆ ಅಸ್ತವ್ಯಸ್ತಗೊಂಡು ಮುರಿದುಬಿದ್ದಿವೆ
ಚೆನ್ನಾಗಿ ಬೆಳೆದಿದ್ದ ರಾಗಿ ಬೆಳೆ,ತೆಂಗು, ಅಡಿಕೆ, ಬಾಳೆ ಸೇರಿದಂತೆ ಬೆಲೆಬಾಳುವ ಬೆಳೆಗಳು ನೆಲಕಚ್ಚಿವೆ. ಗಾಯದ ಮೇಲೆ ಬರೆ ಎಳೆದಂತಾಗಿರುವ ರೈತನ ಬಾಳು ಹೀನಾಯ ಸ್ಥಿತಿಯಲ್ಲಿದೆ. ಆದ್ದರಿಂದ ಸರ್ಕಾರ ಮತ್ತು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೂಡಲೇ ಸರ್ವೆ ಮಾಡಿ ಪ್ರಾಕೃತಿಕ ವಿಕೋಪದಡಿ ಪರಿಹಾರ ಒದಗಿಸಿ ಕೊಡಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಕೆ. ಉಮಾಶಂಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.