Friday, June 21, 2024

ಪ್ರಾಯೋಗಿಕ ಆವೃತ್ತಿ

ಹಡಗು ಮುಳುಗುವ ಮುನ್ಸೂಚನೆ ಇಲಿಗಳಿಗೆ ಸಿಕ್ಕಿದೆ !!

ಮುಂಬೈನ ದೊಡ್ಡ ದೊಡ್ಡ ಕಾರ್ಪೊರೇಟ್ ವಲಯದಲ್ಲಿ ಸದ್ದಿಲ್ಲದೆ ಗುಸು ಗುಸು ಚರ್ಚೆ ಶುರುವಾಗಿದೆ.

ಅದೇನಪ್ಪ ಅಂದರೆ, ಪ್ರಧಾನಿ ಮೋದಿಜೀ ಅವರ ನೇತೃತ್ವದಲ್ಲಿ ಬಿಜೆಪಿ 220 ರಿಂದ 230 ಲೋಕಸಭಾ ಸೀಟುಗಳನ್ನಷ್ಟೇ ಗೆಲ್ಲಲು ಸಾಧ್ಯ ಎಂಬ ಅಂದಾಜಿದೆ. ಈ ಬಾರಿ‌ ದೇಶದಲ್ಲಿ ಮೋದಿಯವರ ಅಲೆ ಇಲ್ಲ ಎಂಬುದನ್ನು ಅರಿತ ಕಾರ್ಪೊರೇಟ್ ಕುಳಗಳು ತಮ್ಮ ವ್ಯಾಪಾರ, ವ್ಯವಹಾರಗಳಿಗೆ ತೊಂದರೆಯಾಗದ ಹಾಗೆ ತಮ್ಮ ಆರ್ಥಿಕ ನೀತಿಗಳನ್ನು ಮುಂದುವರೆಸುವ ಪ್ರಧಾನಿಯ ಹೆಸರಿಗಾಗಿ ಬಿಸಿ ಬಿಸಿ ಚರ್ಚೆ ನಡೆಸುತ್ತಿದ್ದಾರೆಂಬ ಸುದ್ದಿ ಮುಂಬೈನಲ್ಲಿ‌ ಚಾಲ್ತಿಯಲ್ಲಿದೆ.

ಅದಕ್ಕಾಗೇ ಮೋದಿಯವರು ಈಗ ಮುಸ್ಲಿಂ ಸಮುದಾಯದ ವಿರುದ್ಧ ಬಹಿರಂಗವಾಗಿಯೇ ಆರೋಪ ಮಾಡಿಕೊಂಡು ದೇಶಾದ್ಯಂತ ತಿರುಗುತ್ತಿದ್ದಾರೆ.ಹಿಂದೂಗಳ ವೋಟ್ ಬ್ಯಾಂಕ್ ಅನ್ನು ಸಾಲಿಡ್ಡಾಗಿ‌ ಬಿಜೆಪಿಯತ್ತ ತಿರುಗಿಸಲು ನಿಂತಿರುವ ಮೋದಿಯವರ ಚುನಾವಣಾ ಭಾಷಣ ಸುಳ್ಳೆಂಬುದನ್ನು ಜನರು ಅರಿತಿದ್ದಾರೆ.

ಬಿಸಿನೆಸ್ ವ್ಯಕ್ತಿಗಳ ನೆಚ್ಚಿನ‌ ಆಯ್ಕೆ ಎನ್ ಡಿ ಎ ಮೈತ್ರಿಕೂಟ. ಬೇರೆ ಬೇರೆ ಪಕ್ಷಗಳ ಬೆಂಬಲ‌ ಪಡೆದು ಸರ್ಕಾರ ರಚಿಸಲು ಸಾಧ್ಯವಾದರೆ ನಿತಿನ್ ಗಡ್ಕರಿ ಎನ್ ಡಿ ಎ ಪ್ರಧಾನಮಂತ್ರಿ. ಅವರ ಕೈಯಲ್ಲಿ ಆಗದೆ ಹೋದರೆ ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ ಪ್ರಧಾನಿ ಆದರೆ ಒಳ್ಳೆಯದು ಎಂಬ ಅಭಿಪ್ರಾಯಗಳು ಕಾರ್ಪೋರೇಟ್ ಕಂಪನಿಗಳ ಕಾರಿಡಾರ್ ಗಳಲ್ಲಿ ಹರಿದಾಡುತ್ತಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!