Sunday, October 20, 2024

ಪ್ರಾಯೋಗಿಕ ಆವೃತ್ತಿ

ಉತ್ತಮ ಜೀವನ ಶೈಲಿಯಿಂದ ಹೃದ್ರೋಗ ಸಾಧ್ಯತೆ ಕಡಿಮೆ: ಬೆನ್ನೂರ

ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಹೃದ್ರೋಗ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಹೃದ್ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ಹೃದ್ರೋಗ ಬಾರದ ಹಾಗೆ ತಡೆಯುವುದು ಮುಖ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ದರಸಗುಪ್ಪೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಭಾಗವಹಿಸಿ ವಿಶ್ವ ಹೃದಯ ದಿನ ಆಚರಣೆ ಕುರಿತು ಮಾತನಾಡಿದರು.

ಜನರಲ್ಲಿ ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹೃದಯ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಹೊತ್ತು ಗೊತ್ತಿಲ್ಲದೇ ಅನಿರೀಕ್ಷಿತ ಸಂದರ್ಭಗಳಲ್ಲಿ ಎದುರಾಗುವ ಹಾರ್ಟ್ ಅಟ್ಟ್ಯಾಕ್, ಹೃದಯ ಸಂಬಂಧಿ ಕಾಯಿಲೆಗಳು ಸದ್ಯದ ಜಗತ್ತನ್ನು ಅಲುಗಾಡಿಸುತ್ತಿರುವ ಸೈಲೆಂಟ್ ಕಿಲ್ಲರ್ ಆಗಿದೆ, ಇದರ ಬಗ್ಗೆ ಎಚ್ಚರಿಕೆ ಅಗತ್ಯವೆಂದರು.

ನಿಯಮಿತ ವ್ಯಾಯಾಮ, ಆರೋಗ್ಯರ ಆಹಾರ ಸೇವನೆ,ಯೋಗ,ಮದ್ಯಪಾನ, ಧೂಮಪಾನ ತ್ಯಜಿಸಿ,ಆಲಸ್ಯ ಬಿಟ್ಟು ಚಟುವಟಿಕೆಯಿಂದರಿ,ಹೆಚ್ಚು ಒತ್ತಡಕ್ಕೆ ಒಳಗಾಗಬೇಡಿ,ರೋಗ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಪ್ರತಿ ದಿನ ಕನಿಷ್ಠ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಿ, ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಮುಂತಾದ ಆರೋಗ್ಯಕರ ಅಭ್ಯಾಸ ಅಳವಡಿಸಿಕೊಳ್ಳುವುದರ ಮೂಲಕ ನಿಮ್ಮ ಹೃದಯ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ ನನ್ನ ಹೃದಯದ ಆರೋಗ್ಯಕ್ಕಾಗಿ ನನ್ನ ಸಾಮರ್ಥ್ಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಗ್ರಾ ಪಂ ಅಧ್ಯಕ್ಷೆ ರಂಜಿನಿ ಎಂ ಬಿ,ಉಪಾಧ್ಯಕ್ಷ ಮೋಹನಕುಮಾರ ಆರ್ ಟಿ, ಸದಸ್ಯರಾದ ಸುಜಯ್,ಶ್ರೀಧರ, ಶಿವಮ್ಮ,ಮಾದೇಶ,ಮಾಲತಿ,ಸರಿತಾ, ಕುಮಾರ,ವೈದ್ಯಾಧಿಕಾರಿ ಎಸ್ ಕೆ ಗೋಪಾಲ,ಪಿಡಿಒ ಕೃಷ್ಣಪ್ಪಗೌಡ ಕೆ ಆರ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ ಮೋಹನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಪುಷ್ಪಾ, ಆರೋಗ್ಯ ನಿರೀಕ್ಷಣಾಧಿಕಾರಿ ಸುವರ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನೇತ್ರಾವತಿ,ಪಂಚಾಯತಿ ಕಾರ್ಯದರ್ಶಿ ಭವ್ಯ ಹಾಗೂ ಆಶಾ,ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!