ಮದ್ದೂರು ತಾಲ್ಲೂಕಿನ ಮಠದ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಬಸವಪ್ಪ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಪೂಜಾರಿ ನೇಮಿಸುವುದರ ಮೂಲಕ ಪಾವಾಡ ಮೆರೆದ ಘಟನೆ ತಾಲ್ಲೂಕಿನ ಲಿಂಗಣಾಪುರ ಗ್ರಾಮದಲ್ಲಿ ನಡೆದಿದೆ.
ಲಿಂಗಾಣಾಪುರದ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಹಿಂದಿನಿಂದಲೂ ಪೂಜೆ ಮಾಡಿಕೊಂಡು ಬರುತ್ತಿದ್ದ ಪೂಜಾರಿ ನಿಧನ ಹೊಂದಿದ್ದರು. ನಂತರದ ದಿನದಲ್ಲಿ ಸರಿಯಾಗಿ ಪೂಜೆ ನೆರೆವೇರದ ಹಿನ್ನೆಲೆಯಲ್ಲಿ ಹೊಸ ಪೂಜಾರಿ ನೇಮಿಸಲು ಲಿಂಗಣಾಪುರ ಗ್ರಾಮಕ್ಕೆ ಆಗಮಿಸಬೇಕೆಂದು ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಮಠಕ್ಕೆ ಬಂದು ಮುಖಂಡರು ಮನನಿ ಮಾಡಿಕೊಂಡಿದ್ದರು.
ಬಸವಪ್ಪ ಗ್ರಾಮಕ್ಕೆ ಬರುವುದಾಗಿ ಮುಖಂಡರಿಗೆ ಪಾದ ನೀಡಿದ್ದರು. ಅದರಂತೆ ಲಿಂಗಾಣಾಪುರಕ್ಕೆ ಆಗಮಿಸಿ ಬಸವಪ್ಪ ಹಾಗೂ ಸಿದ್ದಪ್ಪಾಜಿ ಕಂಡಾಯಕ್ಕೆ ಹೂವು ಹೊಂಬಾಳೆ ಕಾಯ೯ಕ್ರಮವು ನಡೆದ ಬಳಿಕ ಗ್ರಾಮದ ಮುಖಂಡರು ನೀವು ಯಾರನ್ನು ತಿಳಿಸುತ್ತೀರೋ ಅವರು ಪುಜಾರಿಯಾಗಿ ಸಿದ್ದಪ್ಪಾಜಿ ದೇವರನ್ನು ಪೂಜೆ ಮಾಡಿಕೊಂಡು ಹೋಗಲಿ ಎಂದು ಬಸವಪ್ಪ ಅವರಿಗೆ ಕೈ ಮುಗಿದರು.
ಕುಳಿತಿದ್ದ ಲಿಂಗಣಾಪುರದ ಯುವಕರನ್ನು ಪರಿಶೀಲಿಸಿದ ಬಸವಪ್ಪ ನಾಗೇಂದ್ರ ಎಂಬ ಯುವಕನ್ನು ಕೊಂಬಿನಿಂದ ನೀರಿಗೆ ತಳ್ಳುವುದರ ಮೂಲಕ ಪೂಜಾರಿಯನ್ನು ನೇಮಿಸಿತು.
ಹೊಸ ಪೂಜಾರಿ ನಾಗೇಂದ್ರ ಕಂಡಾಯವನ್ನು ಹೊತ್ತು ಸಿದ್ದಪ್ಪಾಜಿ ದೇವಸ್ಥಾನಕ್ಕೆ ತಂದ ನಂತರ ಮಂಟೇಸ್ವಾಮಿ ಬಸವಪ್ಪನಿಗೆ ಪೂಜೆ ಸಲ್ಲಿಸಿದರು. ಹೊಸ ಪೂಜಾರಿ ನೇಮಕ ಮಾಡಿ ಪವಾಡ ಮೆರೆದ ಬಸವಪ್ಪನಿಗೆ ಊರಿನ ಗ್ರಾಮಸ್ಥರು ಪೂಜೆ ಸಲ್ಲಿಸಿ ಧನ್ಯತೆ ಮರೆದರು.




