Tuesday, November 24, 2026

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗರಿಗೆ ಆಗಬಹುದಾದ ಬಹುದೊಡ್ಡ ಮೋಸವೊಂದು ತಪ್ಪಿದಂತಾಗಿದೆ… ಆದಿಚುಂಚನಗಿರಿ ಶ್ರೀಗಳಿಗೆ ಶರಣು

ಆದಿಚುಂಚನಗಿರಿ ಶ್ರೀಗಳಿಗೆ ಶರಣು,
ನಾಥ ಪರಂಪರೆಯ ಇತಿಹಾಸವನ್ನು ಹೊಂದಿರುವ ದೇಶದ ಮಹತ್ವದ ಕ್ಷೇತ್ರಗಳಲ್ಲಿ ಆದಿಚುಂಚನಗಿರಿಯೂ ಒಂದು. ಒಕ್ಕಲಿಗರ ಮಠವೆಂದೇ ಗುರುತಿಸಿಕೊಂಡಿದ್ದರೂ ಈ ಮಠಕ್ಕೆ ಒಕ್ಕಲಿಗೇತರರೂ ಇಂದಿಗೂ ಬಹು ದೊಡ್ಡ ಪ್ರಮಾಣದಲ್ಲಿ ನಡೆದುಕೊಳ್ಳುತ್ತಾರೆ. ಈ ಮೊದಲಿನ ಶ್ರೀಗಳು, ಮಠದ ಎಲ್ಲಾ ಸಮುದಾಯದ ಭಕ್ತರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಅಲ್ಲದೆ, ರಾಜಕೀಯವಾಗಿಯೂ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಅಲ್ಲದೆ, ಸಮುದಾಯದ ಪ್ರಶ್ನೆ ಬಂದಾಗ ಯಾವ ಮುಲಾಜಿಲ್ಲದೆ ತಮ್ಮ ಅಭಿಪ್ರಾಯ ಹೇಳುತ್ತಿದ್ದರು.

ಆದರೆ, ಅದೇಕೋ, ತಾವು (ನಿರ್ಮಲಾನಂದನಾಥ ಸ್ವಾಮೀಜಿ) ಈ ಮಠದ ಪೀಠಾಧ್ಯಕ್ಷರಾದ ಮೇಲೆ, ನನಗೆ ತಿಳಿದ ಮಟ್ಟಿಗೆ ಹೇಳುವುದಾದರೆ ತಾವು ರಾಜ್ಯದ ಅನೇಕ ವಿಷಯಗಳಲ್ಲಿ ಅಂದರೆ ರಾಜ್ಯದ ಶೂದ್ರ ಸಮುದಾಯಗಳ ಮಠವೊಂದರ ಪೀಠಾಧ್ಯಕ್ಷರಾಗಿ ಯಾವೆಲ್ಲ ವಿಷಯಗಳಲ್ಲಿ ತಾವು ಅನಿವಾರ್ಯವಾಗಿ ಮಾತನಾಡಬಹುದಿತ್ತೋ ಅಂತಹ ಎಲ್ಲಾ ವಿಚಾರಗಳಲ್ಲಿಯೂ ತಾವು ಏಕೋ ಮೌನ ತಾಳಿಬಿಟ್ಟಿರಿ. ಅದರಲ್ಲೂ ಪಠ್ಯಪುಸ್ತಕದ ಪರಿಷ್ಕರಣೆ ನೆಪದಲ್ಲಿ ನಡೆದ ಅದ್ವಾನಗಳ ವಿರುದ್ಧದ ಹೋರಾಟದಲ್ಲಿ ನೀವು ವಹಿಸಿದ ಮೌನ, ಕುವೆಂಪು ಅವರ ವಿಚಾರದಲ್ಲಾದರೂ ನೀವು ಮಾತನಾಡುತ್ತಾರೆಂದು ನಿರೀಕ್ಷಿಸಿದ್ದ ನನ್ನಂತವರಿಗೆ ನಿಮ್ಮ ನಡೆ ಬೇಸರ ತರಿಸಿತು.

ಇತ್ತೀಚಿಗೆ ಭಾಜಪ, ಟಿಪ್ಪು ಕೊಂದವರು ಉರಿ ಗೌಡ – ದೊಡ್ಡ ನಂಜೇಗೌಡ ಎಂಬ ಇಬ್ಬರು ಒಕ್ಕಲಿಗ ಸೈನಿಕರೆಂದು, ಒಕ್ಕಲಿಗ ಸಮುದಾಯವನ್ನು ಖಳನಾಯಕ ರಂತೆ ಬಿಂಬಿಸಲು ಹೊರಟಾಗ, ಈ ಬಗ್ಗೆ ನೀವು ಪ್ರತಿಕ್ರಿಯಿಸುತ್ತಾರೆಂದು ನನಗಾವ ನಿರೀಕ್ಷೆಗಳೂ ಇರಲಿಲ್ಲ.‌ ಆದರೂ ತಾವೂ ಇಂದು ಈ ಬಗ್ಗೆ ಸಮಯೋಚಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಲಹೆ ನೀಡಿದ್ದೀರಿ. ಇದರಿಂದಾಗಿ ಇತಿಹಾಸಕ್ಕೆ ಮತ್ತು ಒಕ್ಕಲಿಗರಿಗೆ ಆಗಬಹುದಾದ ಬಹುದೊಡ್ಡ ಮೋಸವೊಂದು ತಪ್ಪಿದಂತಾಗಿದೆ….. ನಾಡಿನ ಅವೈದಿಕ ಪರಂಪರೆಯ ಶ್ರದ್ಧಾಕೇಂದ್ರವಾದ ಚುಂಚನಗಿರಿ ಎಂದಿಗೂ ವೈದಿಕ ಪರಂಪರೆಯತ್ತ ಸಾಗದಿರಲೆಂದು ಆಶಿಸುತ್ತಾ, ಜನ – ಸಮುದಾಯದ ಪ್ರಶ್ನೆ ಬಂದಾಗ ತಾವು ದಯವಿಟ್ಟು ಅದು ಯಾವುದೇ ಪಕ್ಷವಿದ್ದರೂ ಇಂದಿನ ತಮ್ಮ ನಿಲುವಿನಂತೆ ಸಮುದಾಯದೊಂದಿಗೆ ನಿಲ್ಲಿರೆಂದು ನಿರೀಕ್ಷಿಸುತ್ತಾ ನಿಮ್ಮ ನಿಲುವಿಗೇ ನಿಮಗಿದೋ ಶರಣು, ಶರಣಾರ್ಥಿಗಳು ಎಂದು ನ್ಯಾಯವಾದಿ ಜೀರಹಳ್ಳಿ ರಮೇಶ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ