Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿವಿಧ ಬೇಡಿಕೆಗಳ ಮಂದಿಟ್ಟು ; ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಡ್ಯನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದರು.

ಉದ್ಯೋಗ ಖಾತ್ರಿ ಅಡಿ ಇಂದಿನಿಂದಲೇ ಕೆಲಸ ನೀಡಬೇಕು. ಬಾಕಿ ಕೂಲಿ ಪಾವತಿಸಬೇಕು 94 ಸಿ ಅಡಿಯಲ್ಲಿ ಹಕ್ಕುಪತ್ರ, ನಿವೇಶನ ಮತ್ತು ನಿವೇಶನ ರೈತರಿಗೆ ವಸತಿ ಬ್ಯಾಂಕ್ ಸಾಲ ನೀಡಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಮಂಡ್ಯ ಜಿಲ್ಲೆಯಾದ್ಯಂತ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳು ಸಮರ್ಪಕವಾಗಿ ಜಾರಿಯಾಗದೆ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಾದ್ಯಂತ ಬಹುತೇಕ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಇರುವುದಿಲ್ಲ. ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು ಹಳ್ಳಿಗೊಂದು ಸ್ಮಶಾನ ನಿರ್ಮಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.

nudikarnataka.com

ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕಾಗಿ 80ಕ್ಕೂ ಹೆಚ್ಚಿನ ಪಂಚಾಯಿತಿಗಳಲ್ಲಿ ಕೂಲಿಕಾರರನ್ನು ಸೇರಿಸಿ 500ಕ್ಕೂ ಹೆಚ್ಚು ಕಾಯಕ ಸಂಘಗಳನ್ನು ರಚಿಸಿ, 10 ಸಾವಿರಕ್ಕೂ ಹೆಚ್ಚಿನ ಕೂಲಿಕಾರ್ಮಿಕರಿಗೆ ನಮ್ಮ ಸಂಘವು ಕೆಲಸ ಕೊಡಿಸುವಲ್ಲಿ ಯಶಸ್ವಿಯಾಗಿದೆ. ನಿವೇಶನ ರಹಿತರ ಮತ್ತು ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವವರನ್ನು ಸಂಘಟಿಸಿ ಅರ್ಜಿ ಹಾಕಿಸಲಾಗಿದೆ. ಬಡವರು ಆರ್ಥಿಕವಾಗಿ ಪ್ರಬಲಗೊಳ್ಳಲು ಬ್ಯಾಂಕ್ ಸಾಲ ಕೊಡಿಸಲು ಅರ್ಜಿ ಸಲ್ಲಿಸಲಾಗಿದೆ. ಸಮಸ್ಯೆಗಳ ಇತ್ಯರ್ಥಕ್ಕಾಗಿ ಇವರೆಲ್ಲ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ .ಆದ್ದರಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೃಷಿ ಕೂಲಿಕಾರರ ರಕ್ಷಣೆಗೆ ಮುಂದಾಗಬೇಕೆಂದರು.

ಜಾಹೀರಾತು

ಕಳೆದ ಏಪ್ರಿಲ್ ಒಂದರಿಂದ ಹಲವು ಸಬೂಬು ಹೇಳಿಕೊಂಡು ಕೃಷಿ ಕೂಲಿಕಾರರಿಗೆ ಕೆಲಸ ನಿರಾಕರಿಸುವ ಮದ್ದೂರು ತಾಲೂಕಿನ ಟಿಬಿ ಹಳ್ಳಿ, ಮೆಣಸಗೆರೆ, ಸಿ.ಎ.ಕೆರೆ, ಕ್ಯಾತಘಟ್ಟ, ಬಿದರಹಳ್ಳಿ, ಕೆ ಶೆಟ್ಟಹಳ್ಳಿ, ಕಾಡುಕೊತ್ತನಹಳ್ಳಿ, ಮಾದರಹಳ್ಳಿ, ಬೆಳ್ಳೂರು, ಕೂಳಗೆರೆ, ಅಣ್ಣೂರು, ನಿಡಗಟ್ಟ, ಕದಲೂರು, ಆತನೂರು, ಹೆಮ್ಮನಹಳ್ಳಿ ಗ್ರಾ.ಪಂ.ಗಳು ಕೆಲಸ ಕೊಡದೇ ಅಲೆಸುತ್ತಿದ್ದಾರೆ.

ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿ, ಡಿ ಹಲಸನಹಳ್ಳಿ, ಪಂಡಿತಹಳ್ಳಿ, ಲಿಂಗಾಪಟ್ಟಣ., ಬ್ಯಾಡ್ರಹಳ್ಳಿ, ಟಿ ಕೆ ಹಳ್ಳಿ, ನಾಗೇಗೌಡನ ದೊಡ್ಡಿ ಗ್ರಾ.ಪಂ.ಗಳು, ನಾಗಮಂಗಲ ತಾಲೂಕಿನ ಕರಡಳ್ಳಿ ಪಂಚಾಯ್ತಿಗಳಲ್ಲಿ ಇದುವರಗೆ ಕೂಲಿಕಾರರರಿಗೆ ಕೆಲಸ ಕೊಡದೆ ಅಲೆಸುತ್ತಿದ್ದಾರೆ. ಒಂದೆರಡು ಗುಂಪುಗಳಿಗೆ ಒಂದರಿಂದ ಎರಡು ವಾರ ಮಾತ್ರ ಕೆಲಸ ಕೊಟ್ಟು ಕೈ ತೊಳೆದುಕೊಂಡಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಹನುಮೇಶ್, ಮಳವಳ್ಳಿ ತಾಲೂಕು ಅಧ್ಯಕ್ಷ ಬಿಎಂ ಶಿವಮಲ್ಲಯ್ಯ, ಕಾರ್ಯದರ್ಶಿ ಸರೋಜಮ್ಮ, ಮದ್ದೂರು ತಾಲೂಕು ಅಧ್ಯಕ್ಷೆ ಅನಿತಾ, ಕಾರ್ಯದರ್ಶಿ ಅರುಣ್ ಕುಮಾರ್, ಮಂಡ್ಯ ತಾಲೂಕು ಅಧ್ಯಕ್ಷ ರಾಜು, ಕಾರ್ಯದರ್ಶಿ ಬಿ ಎ ಮಧು ಕುಮಾರ್, ಶುಭವತಿ, ರಾಮಯ್ಯ, ಟಿಎಚ್ ಆನಂದ್, ಮಹಾದೇವ, ಮಾರಯ್ಯ ನಾಗರತ್ನ, ನಾಗಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!