Friday, September 20, 2024

ಪ್ರಾಯೋಗಿಕ ಆವೃತ್ತಿ

ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ವಿರುದ್ದ ನಾಳೆ ಪ್ರತಿಭಟನೆ

ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿಯ ಹೊಂಗಳ್ಳಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ ನಿವೇಶನ ಹಂಚುತ್ತಿದ್ದರೂ ಅಧಿಕಾರಿಗಳು ಮತ್ತು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ನಾಳೆ ಮಂಗಳವಾರ (ಆ.8) ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಶನಿಮಠದ ಧರ್ಮದರ್ಶಿ ಡಾ.ಕೆ.ಎನ್ ರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಂಗಳ್ಳಿ ಸರ್ವೆ ನಂ. 291ರ ಪೈಕಿ ಪಿ 43ರಲ್ಲಿನ 3.28 ಎಕರೆ ಕಂದಾಯ ಭೂಮಿಯ ಜೊತೆಗೆ ಸರ್ಕಾರಿ ಭೂಮಿಯನ್ನು ಮೈಸೂರಿನ ಸೂರ್ಯ ನಾರಾಯಣ ಎಂಬುವರು ಒತ್ತುವರಿ ಮಾಡಿಕೊಂಡು ಕಾನೂನು ಬಾಹಿರ ಮತ್ತು ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚಿಕೆ ಮಾಡುತ್ತಿದ್ದಾರೆ. ಜೊತೆಗೆ ಪಕ್ಕದಲ್ಲಿರುವ ನಮ್ಮ ಜಾಗವನ್ನೂ ತೆರವುಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಶ್ರೀರಂಗಪಟ್ಟಣ ತಹಸೀಲ್ದಾರ್, ಹುಲಿಕೆರೆ ಗ್ರಾ.ಪಂ. ಪಿಡಿಓ, ತಾಲೂಕು ಪಂಚಾಯಿತಿ ಇಓ, ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯಪಾಲರು, ಭಾರತದ ಪ್ರಧಾನಮಂತ್ರಿಗಳು, ರಾಷ್ಟçಪತಿ ಮುಂತಾದವರಿಗೆ 20220ರಿಂದಲೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಶ್ರೀಕ್ಷೇತ್ರ ಶನಿಮಠದ ಉಪಯೋಗಕ್ಕಾಗಿ ನಮೂನೆ 57ರ ಫಾರಂ ಅರ್ಜಿಯ ಮೂಲಕ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಹಾಕಿಕೊಳ್ಳಲಾಗಿದೆ. ಈ ಭೂಮಿಗೆ ಸೂರ್ಯನಾರಾಯಣ ಎಂಬಾತ ನಕಲಿ ದಾಖಲೆಗಳನ್ನು ಸೃಷ್ಠಿಸಿ ಪ್ರಬಾವಿಯೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಹುಲಿಕೆರೆ ಗ್ರಾಮ ಪಂಚಾಯಿತಿಯಲ್ಲಿ 11 ಬಿ ಖಾತೆ ಮಾಡಿರುತ್ತಾರೆ. ಜೊತೆಗೆ ಕಾಂಪೌAಡ್ ನಿರ್ಮಾಣಕ್ಕೆ ಕೈ ಹಾಕಿರುತ್ತಾರೆ. ಇದರಿಂದ ಶ್ರೀಕ್ಷೇತ್ರ ಶನಿಮಠದ ವೃದ್ಧಾಶ್ರಮ ಮತ್ತು ಗೋಶಾಲೆಗಳಿಗೆ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಮಠಾಧೀಶ ರುದ್ರೇಶ್, ಪದಾಧಿಕಾರಿಗಳಾದ ಚಂದ್ರಕಲಾ, ರವೀಂದ್ರ, ಎನ್. ಸಾವಿತ್ರಿ, ಜ್ಞಾನಪ್ರಕಾಶ್, ಲೋಕೇಶ, ರಕ್ಷಿತ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!