Tuesday, September 17, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿದ್ಯಾನಗರ ಉದ್ಯಾನವನದಲ್ಲಿ ಮರಗಳ ಹನನ

ಮಂಡ್ಯನಗರದ ವಿದ್ಯಾನಗರದ ಪಾರ್ಕಿನಲ್ಲಿ ನಿರಂತರವಾಗಿ ಮರಗಳ ಹನನ ನಡೆಸಿ ಪರಿಸರ ನಾಶಪಡಿಸುವ ಕಾರ್ಯ ಎಗ್ಗಿಲ್ಲದಂತೆ ನಡೆಯುತ್ತಿದೆ.

ಮೊದಲೇ ಈ ಉದ್ಯಾನವನ ಅನೇಕ ಸಮಸ್ಯೆಗಳಿಂದ ನರಳುತ್ತಿದೆ. ಪಾದಚಾರಿಗಳ ಪಥ ಸ್ಚಚ್ಚತೆಯ ನಿರ್ಲಕ್ಷ್ಯ, ನಾಯಿಗಳ ಕಾಟ, ಬೀಡಾಡಿ ದನಗಳ ಸಂಚಾರ ಇತ್ಯಾದಿಗಳಿಂದ ಅಪಾರ ಸಂಖ್ಯೆಯಲ್ಲಿ ವಾಕಿಂಗ್ ನ ಆಗಮಿಸುವ ನಾಗರೀಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ಇಂದು ಬೆಳಿಗ್ಗೆಯಿಂದಲೇ ಮರಗಳ ಕಡಿಯುವ ಕೆಲಸ ನಡೆಯುತ್ತಿದ್ದು ಪರಿಸರ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ. ಎಗ್ಗಿಲ್ಲದೆ ಮರಗಳನ್ನು ಕಡಿಯುತ್ತಿರುವುದರಿಂದ ಉದ್ಯಾನವನದಲ್ಲಿ ಅಳವಡಿಸಲಾಗಿದ್ದ ಅನೇಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮರಗಳನ್ನು ಬೆಳೆಸಿ ಉಳಿಸುವ ಕಾರ್ಯ ಎಷ್ಟು ಮಹತ್ವದೆಂದು ಇವರಿಗೆ ತಿಳಿದಂತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತತ ಮರಗಳ ಹನನದಿಂದ ಈಗ ಹಳೆಯ ಬೃಹತ್ ಮರಗಳು ನಾಶವಾಗಿ ಉದ್ಯಾನವನ ಬೋಳಾಗಿ ವಿಕಾರವಾಗಿ ಕಾಣುತ್ತಿದೆ. ಇದ್ಯಾವುದು ನಗರ ಸಭೆಗೆ ಗೋಚರಿಸುತ್ತಿಲ್ಲವೇ … ? ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದಾರೆ. ಆಕ್ರೋಶವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!