ಅಂಗವಿಕಲರು ಮತ್ತು ಪಾಲಕರ ಒಕ್ಕೂಟ ಮಂಡ್ಯ ತಾಲ್ಲೂಕು 3ನೇ ಸಮ್ಮೇಳನ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಹೊರಟ ಜಾಥ, ಸಮ್ಮೇಳನವು ಮಂಡ್ಯದ ಹೊಸಹಳ್ಳಿ ಗುರು ಮಠದ ಆವರಣದಲ್ಲಿ ಜರುಗಿತು.
ಅಂಗವಿಕಲರು ಮತ್ತು ಪಾಲಕರ ಒಕ್ಕೂಟದ ಉಪಾಧ್ಯಕ್ಷರಾದ ಸಿ.ಕುಮಾರಿ ಮಾತನಾಡಿ ಅಂಗವಿಕಲರ ವೇತನ ಬಿಡುಗಡೆಯಾಗಬೇಕು. ವಿಆರ್ ಡ್ಯೂ, ಯುಆರ್ ಡ್ಯೂ, ಎಮ್ ಆರ್ ಡ್ಯೂ ರವರ ಕೆಲಸಗಳು ನೇಮಕವಾಗಬೇಕು. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಮಾತನಾಡಿದರು.
ಸರ್ಕಾರಗಳು ಬಜೆಟ್ನಲ್ಲಿ ಹತ್ತು ಪರ್ಸೆಂಟ್ ಹಣವನ್ನು ಅಂಗವಿಕಲರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಸಮಾವೇಶದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಡಿಜೆ ಯೋಗಾನಂದ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪೂರ್ಣಿಮಾ ಎಸ್.ಎಸ್ ಅವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾದ ಮಲ್ಲೇಶ್, ವೆಂಕಟೇಶ್ ಪ್ರಸಾದ್, ಪುಟ್ಟಲಿಂಗಮ್ಮ, ಮಹೇಶ್, ರಾಜು, ಲಕ್ಷ್ಮಿ ಮತ್ತು ಅನೇಕರು ಇದ್ದರು.