Thursday, September 19, 2024

ಪ್ರಾಯೋಗಿಕ ಆವೃತ್ತಿ

SSLC ರಿಸಲ್ಟ| ಪ್ರಾತಮಿಕ ಮತ್ತು ಪ್ರೌಡ ಶಿಕ್ಶಣ ವ್ಯವಸ್ತೆಯ ಗುಣಮಟ್ಟ

ನಾಗೇಗ್ವಡ ಕೆ.ಎಸ್

ಈ ಸಲದ SSLC ರಿಸಲ್ಟ ನೋಡಿದರೆ ಗೊತ್ತಾಗುತ್ತದೆ ನಮ್ಮ ರಾಜ್ಯದ ಪ್ರಾತಮಿಕ ಮತ್ತು ಪ್ರೌಡ ಶಿಕ್ಶಣ ವ್ಯವಸ್ತೆಯ ಗುಣಮಟ್ಟ ಯಾವ ರೀತಿ ಇದೆ ಅನ್ನೋದು.

53860 ಸರ್ಕಾರಿ ಟೀಚರ್ ಗಳ ಪೋಸ್ಟ್ ಇವತ್ತಿಗೂ ಕಾಲಿ ಇವೆ. ಇದರ ಜೊತೆಗೆ ಕನ್ನಡ ಮತ್ತು ಇಂಗ್ಲಿಶ್ ಮಾದ್ಯಮಗಳಲ್ಲಿ ಪಾಟ ಮಾಡಲು 11,124 ಟೀಚರ್ ಗಳು ಬೇಕು. ಆದರೆ ಈಗ ಕೆಲಸ ಮಾಡುತ್ತಿರುವವರು 7,276 ಟೀಚರ್ ಗಳು ಮಾತ್ರ. 3,848 ಟೀಚರ್ ಗಳ ಪೋಸ್ಟ್ ಕಾಲಿ ಇದೆ.

ಸರ್ಕಾರ ಯಾವುದೇ ಯೋಜನೆ ಅನೌನ್ಸ ಮಾಡುವ ಮೊದಲು ಆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಸರ್ಕಾರಕ್ಕೆ capacity ಇದೆಯೇ ಅನ್ನುವುದನ್ನು ಚೆಕ್ ಮಾಡಬೇಕು. ಈಗ ಮಕ್ಕಳಿಗೆ ಕನ್ನಡ ಇಂಗ್ಲಿಶ್ ಮಾದ್ಯಮಗಳಲ್ಲಿ ಪಾಟ ಮಾಡಿಸುತ್ತೇವೆ ಅನ್ನುತ್ತಾರೆ. ಆದರೆ ರಾಜ್ಯ ಸರ್ಕಾರದ ಶಿಕ್ಶಣ ವ್ಯವಸ್ತೆಯ capacity ನೋಡಿದರೆ ಇದು ಸಾದಿಸಲು ಸಾದ್ಯವಾಗದ ಸಂಗತಿ ಅನ್ನುವುದು ಅರ್ತವಾಗುತ್ತದೆ.

ಇಂಗ್ಲಿಶ್ ಮಾದ್ಯಮ ಬೇಕೆ ಬೇಡವೇ ಅನ್ನೋದು ಮತ್ತೊಂದು ಚರ್ಚೆ. ಇಂಗ್ಲಿಶ್ ಬೇಕು ಅಂದರೂ, ಸರ್ಕಾರ ಯಾವುದೇ capacity building ಮಾಡದೇ ಇಂಗ್ಲೀಶ್ ನಲ್ಲಿ ಪಾಟ ಕಲಿಸಿತಿವಿ ಅಂತ ಜನರನ್ನು ದಾರಿ ತಪ್ಪಿಸುತ್ತಿದೆ.

ಇಂಗ್ಲಿಶ್ ಮಾದ್ಯಮ ಬೇಕು ಅನ್ನುವವರು ಕೂಡ ಮೊದಲು ಸರ್ಕಾರ ತನ್ನ capacity ಹೆಚ್ಚಿಸಿಕೊಂಡಿದಿಯೇ ಅಂತ ತಿಳಿಯೋದು ಒಳ್ಳೆಯದು. ಇಂಗ್ಲಿಶ್ ಮಾದ್ಯಮದಲ್ಲಿ ಪಾಟ ಮಾಡುವ ಟೀಚರ್ ಗಳೇ ಇಲ್ಲ ಅಂದ ಮೇಲೆ ಇಂಗ್ಲಿಶ್ ಮಾದ್ಯಮದ ಮಕ್ಕಳು ತಪ್ಪು ತಪ್ಪಾಗಿ ಕನ್ನಡ ಇಂಗ್ಲಿಶ್ ನಲ್ಲಿ ಕಲಿಯುತ್ತಾರೆ. ಹಿಂಗೇ ಕಲಿತ ಮಕ್ಕಳ ಮುಂದಿನ ಬವಿಶ್ಯ ಹೇಗಿರುತ್ತೆ ಅಂತ ಯಾರು ಬೇಕಾದರೂ ಊಹಿಸಬಹುದು.

ಆದ್ದರಿಂದ ಸರ್ಕಾರದ ಯೋಜನೆಗಳ ಅನೌನ್ಸ ಮೆಂಟ್ ಗೆ ರೊಚ್ಚಿಗೆದ್ದು ತ್ರಿಲ್ ಆಗದೆ, ಸರ್ಕಾರಕ್ಕೆ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಸಾದ್ಯವೇ ಅನ್ನುವುದನ್ನು ಅಲೋಚಿಸಬೇಕು. ಶಿಕ್ಶಣ ಅನ್ನೋದು ಮಾನವ ಸಂಪನ್ಮೂಲ ಅಬಿವೃದ್ದಿಯ ವಿಚಾರ. ಅಬಿವೃದ್ದಿ ಆಗಬೇಕು ಅಂದ್ರೆ ಅದಕ್ಕೆ ಒಂದು basic infrastructure ಇರಬೇಕು. ಇದು ಇಲ್ಲದೆ ಅಬಿವೃದ್ದಿ ಮಾಡುತ್ತೇವೆ ಅಂತ ಸರ್ಕಾರ ಅಂದಾಗ ಅದನ್ನು ನಾವುಗಳು ನಂಬೋದು ನಮ್ಮ ಅಜ್ನಾನ ಆಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!