ವರದಿ : ನ.ಲಿ.ಕೃಷ್ಣ
ಒಕ್ಕಲಿಗ ಜನಾಂಗದ ಸಾಮಾಜಿಕ ರಾಜಕೀಯ ಹಾಗೂ ಆರ್ಥಿಕ ಆಭಿವೃದ್ದಿಗಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷನಾಗಿ ಶ್ರಮಿಸಲಿದ್ದೇನೆ ಎಂದು ಕೆ ಸಿ ರವೀಂದ್ರ ತಿಳಿಸಿದರು
ಮದ್ದೂರಿನ ಪೀಕಾರ್ಡ್ ಬ್ಯಾಂಕ್ ನ ಕುವೆಂಪು ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಘದ ರಾಜ್ಯಧ್ಯಕ್ಷ ನಾಗಣ್ಣ ಬಾಣಸವಾಡಿ ಅವರ ನಿಧನ ನಂತರ ನೂತನವಾಗಿ ರಾಜ್ಯಮಟ್ಟದಲ್ಲಿ ಕಾರ್ಯಕಾರಿ ಮಂಡಳಿ ರಚನೆ ಆಗಿದ್ದು, ಅದರಂತೆ ರಾಜ್ಯಾದ್ಯಂತ ಜಿಲ್ಲೆ ಹಾಗು ತಾಲ್ಲೂಕು ಕಮಿಟಿ ಗಳನ್ನು ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮಿಜೀಯವರ ಆಶೀರ್ವಾದದೊಂದಿಗೆ ರಚಿಸಲಾಗುತ್ತಿದೆ, ನೂತನ ಕಾರ್ಯಕಾರಿ ಮಂಡಳಿಯು ಒಕ್ಕಲಿಗ ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.
ಇದೀಗ ಸಂಘದ ವತಿಯಿಂದ ಸದಸತ್ವ ಅಭಿಯಾನ ಕೈಗೊಳ್ಳಲಾಗಿದ್ದು, ಜನಾಂಗದ ಬಂಧುಗಳು ಸದಸತ್ವ ಪಡೆಯಲು ಕೋರಿದರು. ನಾಗಣ್ಣ ಬಾಣಸವಾಡಿಯವರ ಆಶಯದಂತೆ ಮಂಡ್ಯದಲ್ಲಿ ಅಶ್ವರೂಢ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಲಾಗುವುದು, ಸಂಘವನ್ನು ಹೋಬಳಿ ಹಾಗೂ ಗ್ರಾಮ ಮಟ್ಟಕ್ಕೆ ವಿಸ್ತರಿಸಿ ಯುವಜನರನ್ನು ಸಂಘದ ಚಟುವಟಿಕೆಗೆ ಪ್ರೇರೇಪಿಸಲಾಗುವುದು ಎಂದರು.

ತಾಲ್ಲೂಕು ಅಧ್ಯಕ್ಷ ಶಿವಲಿಂಗೇಗೌಡ ಅವರು ಜನಾಂಗದ ಏಳಿಗೆಗಾಗಿ ಎಲ್ಲಾ ಕುಲ ಬಾಂಧದವರು ಶ್ರಮಿಸಬೇಕು, ಸಂಘದ ಬಲವರ್ಧನೆಗೆ ಮುಂದಾಗಬೆಕೆಂದರು.
ಮುಖಂಡ ಬಸರಾಳು ಕೃಷ್ಣೇಗೌಡ ಮಾತನಾಡಿ, ಸಂಘದ ಬೈಲಾದನ್ವಯ ಕಾರ್ಯನಿರ್ವಹಿಸುತ್ತ ರಾಜ್ಯದ್ಯಾಂತ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯ ಜಾಲ ಹೊಂದಲಾಗುವುದು ಎಂದರು
ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುಜಾತ ಕೃಷ್ಣ ಮಾತನಾಡಿ, ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿಯು ಮಹಿಳಾ ಘಟಕ ಸ್ಥಾಪಿಸಿ ಸಂಘದ ಚಟುವಟಿಕೆ ಕ್ರೀಯಾಶೀಲಗೊಳಿಸಲಾಗುವುದು ಎಂದರು
ಸಭೆಯಲ್ಲಿ ಸಂಘದ ಮಾರ್ಗದರ್ಶಕರಾದ ಬಿ ವಿ ಶಂಕರೇಗೌಡ ಕೊತ್ತನಹಳ್ಳಿ, ಮಲ್ಲಿಕಾರ್ಜುನ, ತಾಲ್ಲೂಕು ಗೌರವಾಧ್ಯಕ್ಷ ನಾರಾಯಣ, ಪ್ರಧಾನ ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜ್, ನ.ಲಿ.ಕೃಷ್ಣ, ದಯಾನಂದ್, ತಾಲ್ಲೂಕು ಮಹಿಳಾ ಅಧ್ಯಕ್ಷೆ ಕರಡಕೆರೆ ವಸಂತಮ್ಮ, ವಿ ಸಿ ಉಮಾಶಂಕರ್, ಅವಿನಾಶ್ ಉಪಸ್ಥಿತರಿದ್ದರು




