Tuesday, November 24, 2026

ಪ್ರಾಯೋಗಿಕ ಆವೃತ್ತಿ

ಗಮನ ಸೆಳೆದ ಚಿಣ್ಣರ ರಾಧಾಕೃಷ್ಣ ವೇಷಭೂಷಣ ಕಾರ್ಯಕ್ರಮ 

ರಾಧಾಕೃಷ್ಣರ ವೇಷಭೂಷಣದೊಂದಿಗೆ ಆಗಮಿಸಿದ ಮಕ್ಕಳಿಗೆ ಪೂಜೆ ಸಲ್ಲಿಸಿ ಬೆಣ್ಣೆ ತಿನಿಸಿ, ಸಾಕ್ಷ್ಯತ್ ಶ್ರೀಕೃಷ್ಣ ಬಾಲ ಲೀಲೆಗಳನ್ನು ಕಣ್ತುಂಬಿಕೊಳ್ಳುವಂತೆ ಮಾಡಿದ ಪ್ರಸಂಗ ಮದ್ದೂರು ತಾಲ್ಲೂಕಿನ ಭಾರತೀನಗರದ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಮುದ್ದು ಮುದ್ದಾಗಿದ್ದ ಮಕ್ಕಳು ಕೃಷ್ಣರಾಧೆಯರ ವೇಷದಲ್ಲಿ ಕಂಗೊಳಿಸಿದರು. ಚಿಣ್ಣರನ್ನ ದೇವಸ್ಥಾನದ ಪದ್ಮಾವತಿ ಮಂಟಪದಲ್ಲಿ ಕೂರಿಸಿ ದೇವರಿಗೆ ಪೂಜೆ, ನೈವೇದ್ಯ ನಂತರ ದೇವರ ಸಮಾನರೆಂದು ಭಾವಿಸಿ ಮಕ್ಕಳಿಗೂ ಬೆಣ್ಣೆ ತಿನಿಸಿ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಪದ್ಮಾವತಿ ಮಂಟಪದಲ್ಲಿ ಶ್ರೀಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ತುಳಸಿ ಮತ್ತು ವಿವಿಧ ಬಗೆಯ ಹೂಗಳಿಂದ ಪುಷ್ಪಾರ್ಚನೆ ಮಾಡಿ ಬೆಣ್ಣೆ, ಹಾಲು, ತುಪ್ಪದಿಂದ ಅಭಿಷೇಕ ಮಾಡಲಾಯಿತು. ಕೃಷ್ಣರಾಧೆ ಉಡುಪು ತೊಟ್ಟಿದ್ದ ಪುಟ್ಟ ಮಕ್ಕಳು ದೇವಸ್ಥಾನದ ಅಂಗಳದಲ್ಲಿ ಓಡಾಡುತ್ತಿದುದ್ದು ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕಿ ಎಚ್.ಪಿ.ಪ್ರತಿಮಾ ಮಾತನಾಡಿ, ದೇವಸ್ಥಾನದಲ್ಲಿ ಮಕ್ಕಳೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ. ಶ್ರೀಕೃಷ್ಣನ ವೃತ್ತಾಂತ ತಿಳಿಯಲು ಮಕ್ಕಳಿಗೆ ಕೃಷ್ಣನ ಉಡುಪುಗಳನ್ನು ತೊಡಿಸುವುದು ಅತ್ಯವಶ್ಯಕ. ಜೊತೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ ಎಂದರು.

ಇದೇ ವೇಳೆ ನಿವೃತ್ತ ಮುಖ್ಯಶಿಕ್ಷಕ ಎಂ.ಮಾಯಪ್ಪ ಹಾಗೂ ಎಚ್.ಪಿ.ಪ್ರತಿಮಾ ಅವರಿಗೆ ಅಭಿನಂದಿಸಲಾಯಿತು.
ಪೂಜಾಕಾರ್ಯಕ್ರಮದ ನೇತೃತ್ವವನ್ನು ಅರ್ಚಕರಾದ ಗೋಪಾಲಕೃಷ್ಣ ಭಟ್ ಹಾಗೂ ಅನಂತಕೃಷ್ಣಭಟ್ ವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀವೆಂಕಟೇಶ್ವರ ಸೇವಾಟ್ರಸ್ಟ್ನ ಅಧ್ಯಕ್ಷ ಪೂಜೂರಿ ವೆಂಕಟೇಗೌಡ, ಕಾಯರ್ಾಧ್ಯಕ್ಷ ವೆಂಕಟೇಶ್, ಕೆಂಚೇಗೌಡರ ಶ್ರೀನಿವಾಸ್, ಅಣ್ಣೂರು ಸತೀಶ್, ವಿಶ್ವ, ಜವರೇಗೌಡ, ಪುಟ್ಟರತ್ನ, ಸಿದ್ದಮ್ಮ, ಶಿಕ್ಷಕಿಯರಾದ ರೇಖಾ, ಅಪರ್ಿತ, ಶೀಲಾ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ