Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಮೀಸಲಾತಿ ಮಸೂದೆ| ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ‘ಬೇಷರತ್ ಬೆಂಬಲ’

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಬಹುಕಾಲದಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವ ಕೇಂದ್ರ ಸಚಿವ ಸಂಪುಟದ ಕ್ರಮವನ್ನು ಕಾಂಗ್ರೆಸ್ ಸ್ವಾಗತಿಸಿದೆ. ಸಂವಿಧಾನ ತಿದ್ದುಪಡಿ ಮಸೂದೆಯು ಒಮ್ಮೆ ಅಂಗೀಕಾರವಾದರೆ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಖಚಿತಪಡಿಸುತ್ತದೆ.

ಮಹಿಳೆಯರಿಗೆ ಶಾಸಕಾಂಗ ಮೀಸಲಾತಿ ಒದಗಿಸುವ ಮಸೂದೆಯನ್ನು ಅಂಗೀಕರಿಸಲು ‘ಬೇಷರತ್ತಾದ ಬೆಂಬಲ’ ನೀಡುವ ಕುರಿತು ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರವು ಇದೀಗ ವೈರಲ್ ಆಗುತ್ತಿದೆ.

“>

”ನಮ್ಮ ಪ್ರಧಾನಿ ಅವರು ಮಹಿಳಾ ಸಬಲೀಕರಣದ ಹೋರಾಟಗಾರ ಎಂದು ಹೇಳುತ್ತಾರೆ. ಅವರು ತಮ್ಮ ಮಾತಿನಂತೆ ನಡೆದುಕೊಳ್ಳಬೇಕು ಎಂದಾದರೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸಮಯ ಬಂದಿದೆ. ಕಾಂಗ್ರೆಸ್ ಅವರಿಗೆ ತನ್ನ ಬೇಷರತ್ ಬೆಂಬಲವನ್ನು ನೀಡುತ್ತದೆ” ಎಂದು 2018ರಲ್ಲಿ ರಾಹುಲ್ ಗಾಂಧಿ ಅವರು ಬರೆದಿರುವ ಪತ್ರವನ್ನು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹಂಚಿಕೊಂಡಿದ್ದಾರೆ.

”ಮಹಿಳೆಯರಿಗೆ ಶಾಸಕಾಂಗ ಮೀಸಲಾತಿಗಾಗಿ ಕಾನೂನನ್ನು ರೂಪಿಸಲು 1996ರಿಂದ ಹಲವಾರು ಪ್ರಯತ್ನಗಳನ್ನು ಮಾಡಲಾಗಿದೆ, ಆದರೆ ವಿಫಲವಾಗಿದೆ. 2010ರಲ್ಲಿ ಯುಪಿಎ ಸರ್ಕಾರವು ರಾಜ್ಯಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಯಿತು, ಆದರೆ ಮಿತ್ರಪಕ್ಷಗಳ ಕೆಲವು ಒತ್ತಡದಿಂದಾಗಿ ಲೋಕಸಭೆಯಲ್ಲಿ ಅದನ್ನು ಮಂಡಿಸಲು ವಿಫಲವಾಯಿತು” ಎಂದು ಹೇಳಿದ್ದಾರೆ.

ಈ ಹಿಂದೆ ಬಿಜೆಪಿಯು ಈ ಮಸೂದೆಯನ್ನು ಹೇಗೆ ಬೆಂಬಲಿಸಿತ್ತು ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ಇದನ್ನು ‘ಐತಿಹಾಸಿಕ ಮತ್ತು ಮಹತ್ವಪೂರ್ಣ’ ಎಂದು ಕರೆದಿದ್ದರು ಎಂಬುದನ್ನು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಸೂಚಿಸಿದ್ದಾರೆ.

ಹೊಸ ಮಸೂದೆಯು 2010ರ ಮಸೂದೆಗೆ ಹೋಲುವಂತಿಲ್ಲ ಮತ್ತು ಮೀಸಲಾತಿಯ ವ್ಯಾಪ್ತಿಯು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳನ್ನು ಮೀರಿ ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಲವು ಪ್ರಾದೇಶಿಕ ಪಕ್ಷಗಳ ಪ್ರಮುಖ ಬೇಡಿಕೆಯಾದ ಕೋಟಾದೊಳಗೆ ಕೋಟಾದ ನಿಬಂಧನೆಯನ್ನು ಹಿಂದಿನ ಮಸೂದೆಯು ಉಲ್ಲೇಖಿಸಿಲ್ಲ.

ಸಂಸತ್ತಿನ ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷದ ನಾಯಕರು ಮಹಿಳಾ ಮೀಸಲಾತಿಗೆ ಒತ್ತಾಯಿಸಿದರು. ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾಯಿತ ಪ್ರತಿನಿಧಿಗಳ ಲಿಂಗ ಅನುಪಾತವನ್ನು ಎತ್ತಿ ತೋರಿಸಿದರು. ಸಂಸತ್ತಿನಲ್ಲಿ ಕೇವಲ 14% ಮಹಿಳೆಯರಿದ್ದರೆ, ರಾಜ್ಯ ವಿಧಾನಸಭೆಗಳಲ್ಲಿ ಅವರ ಸಂಖ್ಯೆ ಕೇವಲ 10% ಆಗಿದೆ ಎಂದು ಹೇಳಿದರು.

ಲೋಕಸಭೆಯಲ್ಲಿ 431 ಮತ್ತು ರಾಜ್ಯಸಭೆಯಲ್ಲಿ 175 ಸಂಸದರನ್ನು ಒಟ್ಟುಗೂಡಿಸಿ ಎನ್‌ಡಿಎ, ಬೆಂಬಲಿಗರಾದ ಬಿಜೆಡಿ ಮತ್ತು ಪ್ರಮುಖ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಈ ಬಾರಿ ಮಸೂದೆ ಸುಗಮ ಅಂಗೀಕಾರಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!