Sunday, November 22, 2026

ಪ್ರಾಯೋಗಿಕ ಆವೃತ್ತಿ

ಪ್ರಧಾನಿ ಮೋದಿಯನ್ನು ಕಾಡುತ್ತಿರುವ ರಾಹುಲ್ ಗಾಂಧಿ

ಚುನಾವಣೆ ಘೋಷಣೆಯಾದ ನಂತರ ರಾಹುಲ್ ಗಾಂಧಿ ಅದಾನಿ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಅದಾನಿಯಿಂದ ಟೆಂಪೋಗಳಲ್ಲಿ ಹಣ ಪಡೆದಿದ್ದಾರೆ ಎಂದೆಲ್ಲಾ ಸುಳ್ಳು ಹೇಳಿದ್ದ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಬಿಟ್ಟೂ ಬಿಡದೆ ಕಾಡುತ್ತಿದ್ದಾರೆ.

ಅದಾನಿಯಿಂದ ಟೆಂಪೋಗಳಲ್ಲಿ ಹಣ ಕಾಂಗ್ರೆಸ್ ಪಡೆದಿದೆ ಎಂದ ನಂತರವಂತೂ ಮೋದಿಯ ಮೇಲೆ ಮುಗಿಬಿದ್ದ ರಾಹುಲ್ ಗಾಂಧಿ ಟೆಂಪೋಗಳಲ್ಲಿ ಹಣ ಬರುತ್ತದೆ ಎಂಬುದು ನಿಮ್ಮ ಸ್ವಂತ ಅನುಭವನಾ ಎಂದು ಪ್ರಶ್ನೆ ಮಾಡುವ ಮೂಲಕ ಇಡಿ, ಸಿಬಿಐ ಸಂಸ್ಥೆಗಳನ್ನು ಬಿಟ್ಟು ಅದಾನಿ ಮೇಲೆ‌ ಶೀಘ್ರ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕುವ ಮೂಲಕ ದೇಶದ ಜನರಿಗೆ ಮೋದಿ ಉತ್ತರ ಕೊಡಬೇಕೆಂದು ಆಗ್ರಹಿಸಿದ್ದರು.

ಈಗ ಮತ್ತೊಮ್ಮೆ ಅದಾನಿಗೆ ಮೋದಿಯವರು ನೀಡಿರುವ ಏಳು ವಿಮಾನ ನಿಲ್ದಾಣಗಳ ಬಗ್ಗೆ ಮಾತನಾಡುವ ಮೂಲಕ ರಾಹುಲ್ ಗಾಂಧಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದು, ಇದಕ್ಕೆ ಮೋದಿಯವರು ಉತ್ತರ ನೀಡುತ್ತಾರಾ ? ಎಂಬುದನ್ನು ದೇಶದ ಜನರು ಕಾಯುತ್ತಿದ್ದಾರೆ.

ರಾಹುಲ್ ಗಾಂಧಿ ಲಕ್ನೋ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ವೀಡಿಯೋದಲ್ಲಿ‌ ಹಲವು ಪ್ರಶ್ನೆಗಳನ್ನು ಮೋದಿಯವರಿಗೆ ಕೇಳಿದ್ದಾರೆ.

ಇಂದು ನಾನು ಚರಣ್ ಸಿಂಗ್ ಜಿ ಅವರ ಹೆಸರಿನ ಲಕ್ನೋ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದೇನೆ. ಲಕ್ನೋ ಸೇರಿದಂತೆ ಮುಂಬೈ, ಅಹಮದಾಬಾದ್, ತಿರುವನಂತಪುರಂ, ಮಂಗಳೂರು, ಗುವಾಹಟಿ ಮತ್ತು ಜೈಪುರ ಎಂಬ ಏಳು ವಿಮಾನ ನಿಲ್ದಾಣಗಳನ್ನು ಅಂಬಾನಿ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ತಮ್ಮ ‘ಟೆಂಪೋ ಫ್ರೆಂಡ್‌’ಗೆ ಎಲ್ಲಾ ವಿಮಾನ ನಿಲ್ದಾಣಗಳನ್ನು ಹಸ್ತಾಂತರಿಸಿದರು. ದೇಶದ ಆಸ್ತಿಯನ್ನು ಟೆಂಪೋಗಳಿಗೆ ಹಸ್ತಾಂತರಿಸಲಾಗಿದೆ ಎಂದು ನರೇಂದ್ರ ಮೋದಿ ಸಾರ್ವಜನಿಕರಿಗೆ ಹೇಳುವರೇ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ತೆರಿಗೆದಾರರ ಹಣದಿಂದ ನಿರ್ಮಿಸಲಾದ ಏಳು ವಿಮಾನ ನಿಲ್ದಾಣಗಳನ್ನು 2020 ಮತ್ತು 2021 ರ ನಡುವೆ ಗೌತಮ್ ಭಾಯಿಗೆ ಹಸ್ತಾಂತರಿಸಲಾಗಿದೆ. ಇದಕ್ಕಾಗಿ ಎಷ್ಟು ಟೆಂಪೋಗಳನ್ನು ತೆಗೆದುಕೊಂಡಿತು ಎಂದು ನಮಗೆ ತಿಳಿಸಿ. ಈ ತನಿಖೆ ಯಾವಾಗ ಪ್ರಾರಂಭವಾಗುತ್ತದೆ? ಐದಾರು ದಿನಗಳ ಹಿಂದೆ ಅದಾನಿ ಮತ್ತು ಅಂಬಾನಿ ಕಪ್ಪುಹಣ ನೀಡಿದ್ದಾರೆ ಎಂದು ಹೇಳಿದ್ದೀರಿ. ಸಿಬಿಐ ಮತ್ತು ಇಡಿಯನ್ನು ಕಳುಹಿಸಿ, ಆದಷ್ಟು ಬೇಗ ಕಳಿಸಿ ಎಂದು ರಾಹುಲ್ ಸವಾಲು ಹಾಕಿದ್ಧಾರೆ.

ಲಕ್ನೋ ವಿಮಾನ ನಿಲ್ದಾಣದಲ್ಲಿ ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್‌ನ ಜಾಹೀರಾತನ್ನೂ ಅವರು ಸೂಚಿಸಿ, ಇಂತಹವರಿಂದ ಸಾರ್ವಜನಿಕ ಆಸ್ತಿ ಅಭಿವೃದ್ಧಿ ಆಗುತ್ತದೆಯೇ ಎಂದು ಪ್ರಶ್ನೆ ಮಾಡುವ ಮೂಲಕ ತಮ್ಮ ಮೇಲೆ ಅದಾನಿ-ಅಂಬಾನಿ‌ ಟೆಂಪೋಗಳಲ್ಲಿ ಹಣ ನೀಡಿದ್ದಾರೆ ಎಂದು ಹೇಳಿದ ಮೋದಿ ವಿರುದ್ದ ನಿರಂತರ ವಾಗ್ದಾಳಿ ಮುಂದುವರೆಸುವ ಮೂಲಕ ಮೋದಿಯವರಿಗೆ ಸವಾಲು ಹಾಕುತ್ತಾ ದೇಶದ ಜನರಿಗೆ ವಾಸ್ತವ ಸತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿಮನೆಗಳಲ್ಲಿ ಹಾಗೂ ರಾಜಕೀಯ ಪಡಸಾಲೆಯಲ್ಲಿ‌ ಗಂಭೀರ ಚರ್ಚೆ ನಡೆಯುತ್ತಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ