ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ವಿವಿಧ ಇಲಾಖೆಗಳಾದ ಪಿಡಬ್ಲ್ಯೂಡಿ, ಜಿಲ್ಲಾ ಪಂಚಾಯತ್, ಗ್ರಾಮೀಣ ಅಭಿವೃದ್ದಿ, ನೀರಾವರಿ, ಮುಂತಾದ ಇಲಾಖೆಗಳಲ್ಲಿ ನಡೆದಿರುವ ಕಾಮಗಾರಿಗಳ ಬಾಕಿ ಬಿಲ್ ಸರಿ ಸುಮಾರು 500 ಕೋಟಿಯಿಂದ 700 ಕೋಟಿಗಳಷ್ಟು ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಬಾಕಿ ಇರುತ್ತದೆ ಎಂದು ಕೆಲವು ಮೂಲಗಳು ಧೃಢೀಕರಿಸಿವೆ.
ಈ ಮೇಲ್ಕಂಡ ಇಲಾಖೆಗಳಲ್ಲಿ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರುಗಳಲ್ಲಿ ಕ್ಲಾಸ್ 1 ದರ್ಜೆಯ ಗುತ್ತಿಗೆದಾರರು ಪ್ರತಿ ತಾಲ್ಲೂಕಿಗೆ 8-10 ಜನರು ಇದ್ದು ಜಿಲ್ಲೆಯಲ್ಲಿ ಸರಿ ಸುಮಾರು 100 ಜನ ಗುತ್ತಿಗೆದಾರರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಡಿಯಲ್ಲಿ ಕೆಲಸ ಮಾಡಿರುತ್ತಾರೆ.
ಈ ಗುತ್ತಿಗೆದಾರರುಗಳಲ್ಲಿ ಕೆಲವು ಬೆರಳೆಣಿಕೆಯಷ್ಟು ಗುತ್ತಿಗೆದಾರರುಗಳು ಹೆಚ್ಚಿನ ಪ್ರಮಾಣದ ಬಡ್ಡಿಗೆ ಸಾಲ ತಂದು ಕಾಮಗಾರಿಗಳನ್ನು ನಡೆಸಿದ್ದು ಜೊತೆಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರಕ್ಕೆ ಬಿಡ್ ಸಲ್ಲಿಸಿ ಸಮಸ್ಯೆಗೆ ಸಿಲುಕಿಕೊಂಡಿರುತ್ತಾರೆ.
ಸರ್ಕಾರ ತಕ್ಷಣ ಮಂಡ್ಯ ಜಿಲ್ಲೆಯ ಗುತ್ತಿಗೆದಾರರ ಬಿಲ್ ಹಣವನ್ನು ಮಂಜೂರು ಮಾಡದೆ ಹೋದರೆ ಮಂಡ್ಯ ಜಿಲ್ಲೆಯ ಕೆಲವು ಗುತ್ತಿಗೆದಾರರಾದರೂ ಸಹ ಸಂತೋಷ್ ಪಾಟೀಲ್ ಹಾದಿಯಲ್ಲಿಯೇ ಆತ್ಮಹತ್ಯೆಗೆ ಮುಂದಾಗಬಹುದಾದ ಸಾಧ್ಯತೆಗಳು ನಿಶ್ಚಳವಾಗಿದೆ.
ಇದನ್ನೂ ಓದಿ : ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ 1.24 ಕೋಟಿ ಮೌಲ್ಯದ ಆಭರಣ ಲೂಟಿ