Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿ ಭಾಷಣವೂ, ಕಾಣದ ಟೆಲಿಪ್ರಾಂಪ್ಟರೂ

✍️ಗಿರೀಶ್ ತಾಳಿಕಟ್ಟೆ


ಇವತ್ತು ’ಭಕ್ತ’ ಗೆಳೆಯನೊಬ್ಬ ಮಾತಿಗೆ ಸಿಕ್ಕ. ಕಾಶ್ಮೀರ ಕಣಿವೆಯ ಸುರಿಯುವ ಹಿಮದಡಿ ನಿಂತು ಭಾರತ್ ಜೋಡೊ ಯಾತ್ರೆಯ ಸಮಾರೋಪದಲ್ಲಿ ರಾಹುಲ್ ಗಾಂಧಿ ಮಾಡಿದ್ದ ಆ ಹೃದಯ ಕಲಕಲುವ ಭಾಷಣದ ಭಾವುಕ ತೆಕ್ಕೆಯಿಂದ ನಾನಿನ್ನೂ ಆಚೆ ಬಂದಿರಲಿಲ್ಲ. ಗೆಳೆಯನನ್ನು ಕೆಣಕಬೇಕೆನಿಸಿ ಕೇಳಿದೆ, “ನಿನ್ನೆ ರಾಹುಲ್ ಗಾಂಧಿ ಮಾಡಿದ ಭಾಷಣ ಕೇಳಿದೆಯೇನಪ್ಪಾ?”.

“ಅಯ್ಯೋ ಅದೇನ್ ಮಹಾ ಬಿಡ್ರಿ… ಟೆಲಿಪ್ರಾಂಪ್ಟರ್ ಇದ್ದ್ರೆ ಯಾರ್ ಬೇಕಾದ್ರು ಭಾಷಣ ಮಾಡಬಹುದು” ಅಂದ. ಅಲ್ಲಿಗೆ, ರಾಹುಲ್ ಗಾಂಧಿಯ ಭಾಷಣ ತಾಕಬೇಕಾದ ಜಾಗಕ್ಕೆ ತಾಕಿದೆ ಅನ್ನೋದು ಅರ್ಥವಾಯ್ತು.

“ಏನು ಟೆಲಿಪ್ರಾಂಪ್ಟರ್ ಇತ್ತಾ? ನೀನು ನೋಡಿದೆಯಾ?” ಅವನು ಹೇಳುತ್ತಿರೋದು ಸುಳ್ಳು ಅನ್ನೋದು ಗೊತ್ತಿದ್ದರೂ ಪುರಾವೆ ಕೇಳಿದೆ.

“ಕಾಣಂಗೆ ಇಡಕ್ಕೆ ಅದೇನು ಮೈಕೇನ್ರಿ? ಮರೇಲಿ ಇಟ್ಟಿರತಾರೆ. ಬೇಕಾದ್ರೆ ಆ ವೀಡಿಯೊನ ಇನ್ನೊಂದ್ಸಲ ಡೀಟೈಲಾಗಿ ಹುಡುಕಿ, ನಿಮಗೆ ತೋರುಸ್ತೀನಿ ತಾಳಿ” ಎಂದ, ಪಟ್ಟು ಬಿಡಲೊಪ್ಪದೆ.

“ಇಲ್ಲ, ಎಷ್ಟು ಹುಡುಕಿದ್ರೂ ನಿನಗೆ ಅದು ಕಾಣಲ್ಲ ಬಿಡು” ಅಂದೆ.

“ಕಾಣಲ್ವಾ! ಯಾಕೆ?” ಕುತೂಹಲದಿಂದ ಕೇಳಿದ.

“ಯಾಕಂದ್ರೆ…. ಆ ಟೆಲಿಪ್ರಾಂಪ್ಟರ್ ಇರೋದು ರಾಹುಲ್ ಗಾಂಧಿಯ ಎದೆಯೊಳಗೆ!” ಅಂದೆ. ಉಡಾಫೆಯಲ್ಲಿ ನಕ್ಕು ಜಾಗ ಖಾಲಿ ಮಾಡಿದ. ಎದೆ ಇರಿಯುವ ದುಷ್ಟರಿಗೆ, ಎದೆಗಿಳಿಯುವ ಧೈರ್ಯ ಎಲ್ಲಿಂದ ಬರಬೇಕು….

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!