Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿ ಮಣಿಪುರಕ್ಕೆ, ಮೋದಿಜೀ ರಷ್ಯಾಗೆ : ಉಲ್ಟಾ ಪಲ್ಟಾ

ದೇಶದ ಬಿಜೆಪಿ ಪ್ರೇರಿತ ಗೋಧಿ ಮೋಡಿಯಾಗಳು ಸಾರ್ವತ್ರಿಕ ಲೋಕಸಭಾ ಚುನಾವಣೆ ಮುಗಿದ ಕೂಡಲೇ ರಾಹುಲ್ ಗಾಂಧಿ ವಿಶ್ರಾಂತಿ ಪಡೆಯಲು ಮೋಜು ಮಸ್ತಿ ಮಾಡಲು ವಿದೇಶಕ್ಕೆ ಹೋಗುತ್ತಾರೆ ಎನ್ನುವ ನರೆಟೀವ್ ಕಟ್ಟಿದ್ದರು.

ಆದರೆ ರಾಹುಲ್ ಗಾಂಧಿ ವಿದೇಶಕ್ಕೆ ಹೋಗದೆ ಗಾರೆ ಕೆಲಸ ಮಾಡುವ ಕಾರ್ಮಿಕರ ಬಳಿಗೆ, ರೈಲು ಚಾಲಕರಾದ ಲೋಕೋ ಪೈಲಟ್ ಗಳ ಬಳಿಗೆ ,ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಕಾಲ್ತುಳಿತದಿಂದ ಮೃತಪಟ್ಟವರ ಬಳಿಗೆ, ಅಸ್ಸಾಮಿನ ನೆರೆ ಸಂತ್ರಸ್ತರ‌ ಬಳಿಗೆ, ಮೃತ‌ಪಟ್ಟ ಆಗ್ನಿವೀರ್ ಕುಟುಂಬದ ಬಳಿಗೆ ಎಲ್ಲಕ್ಕಿಂತ ಹೆಚ್ಚಾಗಿ ಮಣಿಪುರದ ಜನರ ಬಳಿಗೆ ಹೋಗಿ ನಿಮ್ಮ ಕಷ್ಟದಲ್ಲಿ ನಾನು ಜೊತೆಗಿದ್ದೇನೆ ಎಂಬ ಭರವಸೆ ತುಂಬಿ ಧೈರ್ಯ ಹೇಳುತ್ತಿದ್ದಾರೆ.

ಆದರೆ ಇದಕ್ಕೆ ಬದಲಾಗಿ ಮೋದಿಜೀ ಚುನಾವಣೆ ಮುಗಿದ ಕೂಡಲೇ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಬೋಲೆಬಾಬಾನ ಪ್ರವಚನದಲ್ಲಿ ಕಾಲ್ತುಳಿತದಿಂದ 121 ಜನರು ಮೃತ ಪಟ್ಟಿರುವುದು ರಾಷ್ಟ್ರೀಯ ದುರಂತ. ದೇಶದ ಪ್ರಧಾನಿ ಮೋದಿಯವರು ಹತ್ರಾಸ್ ಗೆ ತೆರಳಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಬೇಕಿತ್ತು. ಆದರೆ ಮೋದಿಯವರು ಹತ್ರಾಸ್ ನಲ್ಲಿ ಸತ್ತ ಬಡ ಜನರ ಕುಟುಂಬದವರಿಗೆ ಸಾಂತ್ವನ ಹೇಳಲು ಹೋಗದೆ ರಷ್ಯಾ ಟೂರ್ ಮಾಡುತ್ತಿದ್ದಾರೆ.

ಹಾಗೆಯೇ ಮಣಿಪುರ ಕಳೆದೊಂದು ವರ್ಷದಿಂದ ಜನಾಂಗೀಯ ಸಂಘರ್ಷದಿಂದ ನಲುಗುತ್ತಾ,ನೂರಾರು ಜನರು ಬಲಿಯಾದರೂ ಮೋದಿಯವರು ಅಲ್ಲಿಗೆ ತೆರಳುವುದಿರಲಿ ಸಂಸತ್ತಿನಲ್ಲಿ ಎಷ್ಟೋ ತಿಂಗಳುಗಳ ಕಾಲ ಮಾತೇ ಆಡಲಿಲ್ಲ.ಆದರೆ ರಾಹುಲ್ ಗಾಂಧಿಯವರು ಮೂರನೇ ಬಾರಿ ಮಣಿಪುರಕ್ಕೆ ತೆರಳಿ ಅಲ್ಲಿಯ ಜನರೊಂದಿಗೆ ಕುಂತು ನಿಮ್ಮೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ.ರಾಹುಲ್ ಗಾಂಧಿಯ ಮಣಿಪುರ ಭೇಟಿ ಬಗ್ಗೆ ಗೋದಿ ಮೋದ್ಯಮಗಳು ಇದೊಂದು ರಾಜಕೀಯ ಸ್ಟಂಟ್ ಎಂದೆಲ್ಲಾ ಮಾತನಾಡುವ ಮೂಲಕ ಸಮಾಜದ ಮುಂದೆ ಬೆತ್ತಲಾಗಿವೆ.ಮಣಿಪುರಕ್ಕೆ ಇನ್ನೂ ಭೇಟಿ ನೀಡದ ಮೋದಿಯವರ ಬಗ್ಗೆ ಪ್ರಶ್ನೆ ಮಾಡದ ಗೋದಿ ಪತ್ರಕರ್ತರು ರಾಹುಲ್ ಗಾಂಧಿಯ ನಡೆಯನ್ನು ರಾಜಕೀಯ ಸ್ಟಂಟ್ ಎನ್ನವುದು ಪತ್ರಿಕೋದ್ಯಮದ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ.

ಒಟ್ಟಿನಲ್ಲಿ ರಾಹುಲ್ ಗಾಂಧಿ ಇಷ್ಟು ದೊಡ್ಡ ಮಟ್ಟದಲ್ಲಿ ಜನರ ಬಳಿಗೆ ತೆರಳಿ ಜನರ ಸಮಸ್ಯೆಗಳ ಜೊತೆಗೆ ಒಂದಾಗುತ್ತಿರುವುದು ಬಿಜೆಪಿಗೂ ತಲೆ ನೋವಾಗಿ ಪರಿಣಮಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!