Friday, April 19, 2024

ಪ್ರಾಯೋಗಿಕ ಆವೃತ್ತಿ

ಮಳೆಯಿಂದ ಮನೆಗೆ ಹಾನಿ : ಸಂತ್ರಸ್ತರಿಗೆ ಸಚ್ಚಿದಾನಂದ ನೆರವು

ಕಳೆದ ಕೆಲದಿನಗಳಿಂದ ಸುರಿದ ಭಾರೀ ಮಳೆಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳು ಹಾನಿಗೊಳಗಾಗಿದ್ದು,ಇಂದು ಮನೆ ಕುಸಿತವಾಗಿರುವ ಗ್ರಾಮಗಳಿಗೆ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಭೇಟಿ ಮಾಡಿ ಸಮಾಧಾನ ಹೇಳಿ ಪರಿಹಾರ ವಿತರಿಸಿದರು.

ಇಂಡುವಾಳು ಗ್ರಾಮದ ಯಶೋಧ, ಮಂಜುಳಾ, ಈಶ್ವರಾಚಾರಿ ಹಾಗೂ ವೈ.ಯರಹಳ್ಳಿ ಗ್ರಾಮದ ಹನುಮಂತುರವರ ಮನೆ ಗೋಡೆ ಕುಸಿದು ತೀವ್ರ ಹಾನಿಯಾಗಿತ್ತು.ಅಲ್ಲಿಗೆ ತೆರಳಿದ ಸಚ್ಚಿದಾನಂದ ಸಂತ್ರಸ್ತರಿಗೆ ಸಮಾಧಾನ ಹೇಳಿ,ಎಲ್ಲರಿಗೂ ಪರಿಹಾರ ಧನ ವಿತರಿಸಿದರು. ಮಳೆಯಿಂದ ಹಲವು ಗ್ರಾಮಗಳಲ್ಲಿ ಸಾಕಷ್ಟು ಮನೆಗಳ ಗೋಡೆ ಕುಸಿದಿದೆ.

ಎಲ್ಲರಿಗೂ ನನ್ನ ಕೈಲಾದ ಮಟ್ಟಿಗೆ ಆರ್ಥಿಕ ನೆರವು ನೀಡಿದ್ದೇನೆ.ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮಳೆ ಹಾನಿಯಿಂದ ಸಂತ್ರಸ್ತರಾದವರಿಗೆ ಇನ್ನೂ ಹೆಚ್ಚಿನ ನೆರವು ನೀಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಬಳಿಕ ವೈ.ಯರಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಅನಾರೋಗ್ಯದಿಂದ ಮೃತಪಟ್ಟ ಹನುಮೇಶ್ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಜೊತೆಗೆ ಪರಿಹಾರ ವಿತರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ನಿತ್ಯಾನಂದ, ಶ್ರೀಧರ್, ಗೋಪಾಲ್, ಕುಮಾರ್, ಶ್ರೀನಿವಾಸ್,ಗ್ರಾ.ಪಂ ಸದಸ್ಯರಾದ ತ್ರಿಲೋಕ್, ಸತ್ಯ, ಸುಂದರ್, ತಮ್ಮಯ್ಯ, ರಮೇಶ್, ವೈ.ಯರಹಳ್ಳಿ ಗ್ರಾ. ಪಂ ಮಾಜಿ ಸದಸ್ಯರಾದ ಶ್ರೀನಿವಾಸ್, ಕಾಂತರಾಜು, ಮಧು, ದರ್ಶನ್, ರಾಘು, ಹನುಮೇಶ್, ಆದರ್ಶ್, ಯಲಿಯೂರು ಆತ್ಮಾನಂದ, ಕಾಳೇನಹಳ್ಳಿ ಬೋರೇಗೌಡ್ರು ಹಾಗೂ ಯುವಕ ಮಿತ್ರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!