Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ರಂಜಾನ್ ಪ್ರಯುಕ್ತ ಮುಸಲ್ಮಾನ ಬಂಧುಗಳಿಂದ ಸಾಮೂಹಿಕ ಪ್ರಾರ್ಥನೆ

ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಮಂಡ್ಯ ನಗರದ ಹೊಳಲು ರಸ್ತೆಯ ಶಂಕರ ಮಠದಲ್ಲಿರುವ
ಈದ್ಗಾ ಮೈದಾನದಲ್ಲಿ, ಪವಿತ್ರ ಹಬ್ಬ ರಂಜಾನ್ ಪ್ರಯುಕ್ತ ಮುಸಲ್ಮಾನ ಬಂಧುಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಸಾವಿರಾರು ಮುಸಲ್ಮಾನ ಬಾಂಧವರು ಭಕ್ತಿ ಪೂರ್ವಕವಾಗಿ ಸಂಭ್ರಮದಿಂದ ರಂಜಾನ್ ಪ್ರಾರ್ಥನೆ ಮಾಡಿದರು.ಚಿಕ್ಕ ಮಕ್ಕಳು ಸೇರಿದಂತೆ ಎಲ್ಲರೂ ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಈದ್ ಮಬಾರಕ್ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್,ನಾಡಿನ ಎಲ್ಲರಿಗೂ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.ಪ್ರತಿವರ್ಷ ಮುಸಲ್ಮಾನರು ಜೀವನದಲ್ಲಿ ಯಾವುದೇ ಕೆಟ್ಟ ಕೆಲಸ ಮಾಡಿದರೂ ಕೂಡ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳ ಕಾಲ ಉಪವಾಸ ಆಚರಿಸುತ್ತಾರೆ.ಇಂದು ಉಪವಾಸ ಅಂತ್ಯಗೊಂಡು, ಎಲ್ಲರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಉಪವಾಸ ಮುಕ್ತಾಯ ಗೊಳಿಸುತ್ತಾರೆ. ಎಲ್ಲರೂ ಹೊಸ ಬಟ್ಟೆ ಧರಿಸಿ ರುಚಿಯಾದ ಊಟ ಮಾಡುವ ಮೂಲಕ ರಂಜಾನ್ ಹಬ್ಬಕ್ಕೆ ತೆರೆ ಎಳೆಯುತ್ತಾರೆ ಎಂದರು.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ದೇಶದ ಜನರಿಗೆ ಶುಭವಾಗಲಿ.ಎಲ್ಲಾ ಕಡೆ ಮಳೆ,ಬೆಳೆ ಸಮೃದ್ಧವಾಗಲಿ. ಸಂದೇಶವನ್ನು ನೀಡುವ ಹಬ್ಬ ರಂಜಾನ್. ಪ್ರಪಂಚದಲ್ಲಿ ಎಲ್ಲರೂ
ಶಾಂತಿ-ಸಹಬಾಳ್ವೆಯಿಂದ ಬದುಕಲಿ,ಸಮೃದ್ಧ ಭಾರತ ನಿರ್ಮಾಣವಾಗಲಿ ಎಂದು ಶುಭ ಕೋರಿದರು.

ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿಕುಮಾರ್ ಮಾತನಾಡಿ, ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ದಿನವಾದ ಇಂದು ಎಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ.ರಂಜಾನ್ ಹಬ್ಬದ ಕೊನೆಯ ದಿನವಾದ ಇಂದು ಎಲ್ಲರೂ ಸಂತೋಷದಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೀರಿ.ಎಲ್ಲರ ಜೊತೆ ಶಾಂತಿ-ಸಹಬಾಳ್ವೆಯಿಂದ ಬಾಳೋಣ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!