Friday, November 20, 2026

ಪ್ರಾಯೋಗಿಕ ಆವೃತ್ತಿ

ಮತ್ಸ್ಯ ಸಂಜೀವಿನಿ ಯೋಜನೆ | ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೆರೆ ಗುತ್ತಿಗೆ

ಸ್ವಯಂ ಉದ್ಯೋಗಗಳನ್ನು ಕೈಗೊಳ್ಳುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಸಂಜೀವಿನಿ ತೂಬಿನಕೆರೆ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದಿಂದ ಮತ್ಸ್ಯ ಸಂಜೀವಿನಿ ಯೋಜನೆಯಡಿಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಗುತ್ತಿಗೆ ನೀಡಲಾದ ತಾಲೂಕಿನ ರಾಗಿಮುದ್ದನಹಳ್ಳಿ ಕೆರೆಗೆ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಕೆರೆಗಳನ್ನು ಸ್ರೀಶಕ್ತಿ ಸಂಘಗಳು ಎನ್ಆರ್ ಎಲ್ಎಂ ಘಟಕ ರಚನೆ ಮಾಡಿಕೊಂಡು ಉದ್ಯೋಗ ಕೊಟ್ಟು ಸ್ವಯಂ ಉದ್ಯೋಗದಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಮಹಿಳೆಯರಿಗೆ ಅವಕಾಶ ಕೊಟ್ಟಿದೆ ಎಂದು ತಿಳಿಸಿದರು.

ಸ್ತ್ರೀಶಕ್ತಿ ಗುಂಪುಗಳನ್ನು ರಚನೆ ಮಾಡಿಕೊಂಡು ಕೆರೆಗಳಲ್ಲಿ ಮೀನು ಮರಿ ಬಿಟ್ಟು ಸಾಕಬೇಕು. ಸಂಘಗಳ ಪ್ರತಿಯೊಬ್ಬರು ಎಲ್ಲರು ಇದು ನಮ್ಮ ಜವಾಬ್ದಾರಿ ಎಂದು ತಿಳಿದುಕೊಂಡು ಮೀನು ಸಾಕುವುದರ ಜವಾಬ್ದಾರಿ ಜೊತೆ ಉತ್ಪಾದನೆಯಲ್ಲಿ ಬರುವ ಹಣವನ್ನು ಸಂಘಕ್ಕೆ ಸರಿಯಾಗಿ ಸಮನಾಗಿ ಹಂಚಬೇಕು ಎಲ್ಲರೂ ಸೇರಿದಾಗ ನನ್ನದು ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಮೀನು ಸಾಕಿ ಆದಾಯ ಬರುವ ರೀತಿ ಪಣತೊಟ್ಟು ಸ್ತ್ರೀಶಕ್ತಿಗಳು ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ ಮಾತನಾಡಿ ಎಲ್ಲಾ ಮಹಿಳಾ ಸಂಘಗಳನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಲು ಮೀನು ಸಾಕಾಣಿಕೆಗೆ ಯಾವುದೇ ಬಹಿರಂಗ ಹರಾಜುವಿಲ್ಲದೆ ಉಚಿತವಾಗಿ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಂಡ್ಯ ತಾಲೂಕಿನಲ್ಲಿ ಪ್ರಥಮವಾಗಿ ಒಂದು ಸಂಘಕ್ಕೆ ರಾಗಿಮುದ್ದನಹಳ್ಳಿ ಕೆರೆಗೆ ನೀಡಲಾಗಿದೆ ಎಂದರು.

ಮಹಿಳಾ ಸಂಘಗಳು ಉಚಿತವಾಗಿ ಕೆರೆಯಲ್ಲಿ ಮೀನು ಸಾಕಣೆ ಮಾಡುವುದರ ಮೂಲಕ ದೈನಂದಿನ ಖರ್ಚಿಗೆ ಬರುವ ಆದಾಯವನ್ನು ಸಂಘಗಳು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು.ಈ ವರ್ಷ ಮಂಡ್ಯ ತಾಲೂಕಿನಲ್ಲಿ ಐದು ಸಂಘಗಳಿಗೆ ಪ್ರಾಯೋಗಿಕವಾಗಿ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರ ನಿರ್ದೇಶನದಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತೂಬಿನಕೆರೆ ಗ್ರಾಮ ಪಂಚಾಯಿತಿ ಪಿಡಿಒ ಕಲಾ, ಮೀನುಗಾರಿಕೆ ಇಲಾಖೆಯ ಲೋಕೇಶ್, ಮುಖಂಡರಾದ ಕೆ.ಮಂಜುನಾಥ್, ಪುರುಷೋತ್ತಮ್ ಸೇರಿದಂತೆ ಇತರರು ಭಾಗವಹಿಸಿದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ