Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಲುಬಾಯಿ ಜ್ವರದಿಂದ ಜಾನುವಾರು ರಕ್ಷಿಸಿ- ರವಿಕುಮಾರ್

ಜಾನುವಾರುಗಳಿಗೆ ಮಾರಕವಾಗಲಿರುವ ಕಾಲುಬಾಯಿ ಜ್ವರ ನಿಯಂತ್ರಿಸುವ 4ನೇ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಪಿ.ರವಿಕುಮಾರ್ ಚಾಲನೆ ನೀಡಿದರು.

ಮಂಡ್ಯ ತಾಲ್ಲೂಕಿನ ಕನ್ನಲಿ ಗ್ರಾಮದಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸಿ, ಚುಚ್ಚುಮದ್ದು ನೀಡುವ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯ ತನ್ನ ಸದೃಡ ಆರೋಗ್ಯದತ್ತ ನಿಗಾವಹಿಸುವಂತೆ ತಮ್ಮ ಜೀವನೋಪಾಯಕ್ಕೆ ನೆರವಾಗುವ ಜಾನುವಾರುಗಳ ಆರೋಗ್ಯ ರಕ್ಷಣೆಗೂ ಕಾಳಜಿ ತೋರಬೇಕೆಂದ ಕಿವಿಮಾತು ಹೇಳಿದರು.

ಮೂಢನಂಬಿಕೆಗಳನ್ನು ತ್ಯಜಿಸಿ ಪ್ರತಿಯೊಬ್ಬರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು. ಆ ಮೂಲಕ ಜಾನುವಾರು ಸಂಪತ್ತು ಉಳಿವಿದೆ ನೆರವಾಗಬೇಕೆಂದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಹೆಚ್.ಡಿ.ರಮೇಶ್‌ರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಮಂಡ್ಯ ತಾಲ್ಲೂಕಿನಲ್ಲಿ  84,000 ದನ, ಎಮ್ಮೆ, ಹಂದಿ ಸೇರಿದಂತೆ ಇತರೆ ಜಾನುವಾರುಗಳಿದ್ದು, ಅವುಗಳ ಮಾಲೀಕರು ಲಸಿಕೆ ಹಾಕಿಸಲು ಮುತುವರ್ಜಿ ತೋರಬೇಕೆಂದರು.

ಲಸಿಕೆ ಅಭಿಯಾನ ಕಾರ್ಯಕ್ರಮ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ರಾಜ್ಯ, ಜಿಲ್ಲೆ, ತಾಲ್ಲೂಕಿನಾದ್ಯಂತ ಒಂದು ತಿಂಗಳ ಕಾಲ ಉಚಿತ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ಮನ್ಯುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್‌ ಕಾಲುಬಾಯಿ ರೋಗದ ಅರಿವು ಬಗ್ಗೆ ಮಾತನಾಡಿದರು. ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ವೀಣಾ, ಡಾ.ಹೆಚ್.ಸಿ.ಶಿವಯ್ಯ, ಡಾ.ಗೀತಾ, ಡಾ.ಯೋಗೇಶ್‌ಗೌಡ, ಡಾ.ಮಂಜೇಶ್‌ಗೌಡ, ಡಾ ಹೊಂಬೇಗೌಡ, ಮರಿಸ್ವಾಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!