Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರತಿ ಮನೆಗೂ ಶುದ್ಧ ಕಾವೇರಿ ನೀರು ಸರಬರಾಜು- ರವಿಕುಮಾರ್

ಮಂಡ್ಯ ತಾಲೂಕಿನ 175 ಹಳ್ಳಿಗಳ ಪ್ರತಿ ಮನೆಗೂ ಶುದ್ಧ ಕಾವೇರಿ ನೀರು ಸರಬರಾಜು ಮಾಡಲಾಗುವುದು ಎಂದು ಶಾಸಕ ರವಿಕುಮಾರ್‌ಗೌಡ ಗಣಿಗ ಹೇಳಿದರು.

ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧೆಡೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರ ವಾಪ್ತಿಯ ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಕೊಳಾಯಿ ಸಂಪರ್ಕ ಕಲ್ಪಿಸಿ, ಮನೆ ಮನೆಗೆ ನೀರೊದಗಿಸುವ (ಜೆಜೆಎಂ)ಕಾಮಗಾರಿಗೆ ಭೂಮಿ ಪೂಜೆ ಮಾಡಿಲಾಗಿದೆ, ಅಂದಾಜು ಮೊತ್ತ 1 ಕೋಟಿ 50 ಲಕ್ಷ ರೂ.ವೆಚ್ಚದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ಕ್ಷೇತ್ರ ವಾಪ್ತಿಯಲ್ಲಿನ ಪ್ರತಿಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಕೊಡಬೇಕಾಗಿದೆ, ಮಹಿಳೆಯರು ದೂರದಿಂದ ನೀರು ತರುವುದನ್ನು ತಪ್ಪಿಸಬೇಕಿದೆ, ಮನೆ ಬಾಗಿಲಿನಲ್ಲೇ ನೀರು ಈಡಿದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಕಾವೇರಿ ನೀರು ಕೊಡುವ ಕಾರ್ಯ ಸಾಗುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕುಂಠಿತವಾಗಿದ್ದ ಕೆಲಸ ಕಾಮಗಾರಿಗಳು ವೇಗಗತಿ ಪಡೆದುಕೊಳ್ಳುತ್ತಿವೆ, 175 ಹಳ್ಳಿಗಳ ಪ್ರತಿ ಮನೆಗೂ ಕಾವೇರಿ ನೀರನ್ನು ಸರಬರಾಜು ಮಾಡಲಾಗುವುದು. ಬಳಿಕ ಕೆರೆಯಂಗಳದಲ್ಲಿ ಜಿಲ್ಲಾ ಪಂಚಾಯತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಆಯೋಜಿಸಿದ್ದ 1 ಎಕರೆ ನಿವೇಶನದಲ್ಲಿ ವಿಷನ್ ವಾತ್ಯಲ್ಯ ಯೋಜನೆಯಡಿ ಬಾಲಮಂದಿರಗಳು, ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಸತಿ ಗೃಹ ನಿರ್ಮಿಸಲು ಅನುವಾಗುವಂತೆ ಖಾಲಿ ನಿವೇಶನಕ್ಕೆ ಕಾಂಪೌಂಡ್ ನಿರ್ಮಾಣ ಕಾಮಗಾರಿಯು 49.50 ಲಕ್ಷ ರೂ.ಗಳಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಇದೇ ಜಾಗದಲ್ಲಿ ಹೊಸ ಬೋರ್‌ವೆಲ್ ನಿರ್ಮಾಣ ಪೈಪ್‌ಲೈನ್ ಹಾಗೂ ನೀರು ಸರಬರಾಜು ಕಾಮಗಾರಿಗೆ ಅಂದಾಜು ಮೊತ್ತ 9.16 ಲಕ್ಷ ರೂ.ಗಳಲ್ಲಿ ನಡೆಯುವುದಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್, ಹೊಸಬೂದನೂರು ಗ್ರಾ.ಪಂ. ಅಧ್ಯಕ್ಷೆ ಮಾನಸ, ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ಕೆಂಪೇಗೌಡ, ಕುಮಾರ್, ಆರ್‌ಎಪಿಸಿಎಂಎಸ್ ಅಧ್ಯಕ್ಷ ಉಮ್ಮಡಹಳ್ಳಿ ಶೇಖರ್, ನಗರಸಭಾ ಸದಸ್ಯ ಜಾಕೀರ್‌ಪಾಷಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಕೆ.ಆರ್.ಐಡಿ.ಎಲ್. ಅಧಿಕಾರಿಗಳು, ನಾಗರಿಕರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!