Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ‘ಭೌತಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು’ ಕುರಿತು ಕಾರ್ಯಾಗಾರ ಯಶಸ್ವಿ

ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಭೌತಶಾಸ್ತ್ರ ವಿಭಾಗವು “ಭೌತಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು” ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ರೂಸಾ 2.0 ಅಡಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಮಹಾರಾಣಿ ಮಹಿಳಾ ಕಾಲೇಜು ಮೈಸೂರಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಶಿವಲಿಂಗಸ್ವಾಮಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಉತ್ತಮವಾದ ತಂತ್ರಜ್ಞಾನವನ್ನ ಒಳಗೊಂಡಿದೆ. ಇದು ಬಾಹ್ಯಾಕಾಶದ ಗ್ರಹಗಳು ನಕ್ಷತ್ರಗಳ ಉಗಮ ಕಪ್ಪುಕುಳಿ ಕಪ್ಪು, ದ್ರವ್ಯ, ಕಪ್ಪು ಶಕ್ತಿಯ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕ್ರಯೋಜನಿಕ ತಂತ್ರಜ್ಞಾನದ ಬಳಕೆಯು ಹಲವಾರು ಕ್ಷೇತ್ರಗಳಲ್ಲಿ ಪ್ರಯೋಜನಕಾರಿಯಾಗಿದ್ದು ಕ್ರಯೋಜನಿಕ್ ತಂತ್ರವನ್ನು ಖಗೋಳ ವಿಜ್ಞಾನದಲ್ಲಿ ವೈದ್ಯಕೀಯ ಚಿಕಿತ್ಸೆ, ಶಕ್ತಿ ಸಂರಕ್ಷಣಾ ವಿಜ್ಞಾನದಲ್ಲಿ ಹೇಗೆ ಬಳಸುತ್ತಾರೆ ಎಂದು ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ವಿದ್ಯಾರ್ಥಿಗಳಾದವರು ಇಂತಹ ಉನ್ನತ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ರಘು ಎ ಮಾತನಾಡಿ, ಲೇಸರ್ ಬಳಸಿ ಅಣುಗಳ ಕುಶಲತೆ, ಸೂರ್ಯನ ವಿಕಿರಣವು ಭೂಮಿಯ ವಾತಾವರಣದಲ್ಲಿರುವ ಕಣಗಳ ಮೇಲೆ ಒಂದು ನಿರ್ದಿಷ್ಟ ಬಲವನ್ನು ಬೀರುತ್ತದೆ. ಈ ಬಲವು ಬೆಳಕಿನ ಶಕ್ತಿಯನ್ನು ಅವಲಂಬಿಸಿರುತ್ತದೆ. ಆದರೆ ಇದು ತರಂಗಂತರದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿಕೊಟ್ಟರು.

ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ.ಗುರುರಾಜ ಪ್ರಭು ಮಾತನಾಡಿ, ಮನುಷ್ಯ ವೈಜ್ಞಾನಿಕತೆಯ ವೃತ್ತಿ ಉಳ್ಳ ವ್ಯಕ್ತಿ. ಭಾರತದ ಸಿಂಧೂ ಕಣಿವೆ, ಈಜಿಪ್ಟ್ ಮತ್ತು ಇತರೆ ನಾಗರಿಕತೆಗಳ ಸೃಷ್ಟಿಗೆ ಇವನ ವೈಜ್ಞಾನಿಕ ಮನೋಧರ್ಮ ಕಾರಣ. ಇತಿಹಾಸ ಮತ್ತು ಭೌತಶಾಸ್ತ್ರ ಒಂದಕ್ಕೊಂದು ಸಂಬಂಧಿಸಿದ ವಿಷಯವಾಗಿವೆ. ಎಂದರು.

ಮನುಷ್ಯನ ಇತಿಹಾಸ ಆರಂಭದೊಂದಿಗೆ ವೈಜ್ಞಾನಿಕ ಸಂಶೋಧನೆ ಆವಿಷ್ಕಾರ ಅನ್ವೇಷಣೆಗಳ ಮೂಲಕ ನಾವು ಇಂದಿನ ಆಧುನಿಕ ತಂತ್ರಜ್ಞಾನದವರವಿಗೂ ಬಂದು ನಿಂತಿದ್ದೇವೆ, ವಿದ್ಯಾರ್ಥಿಗಳಾದವರು ಇಂತಹ ಕಾರ್ಯಗಾರದಲ್ಲಿ ಹೆಚ್ಚಿನ ಜ್ಞಾನವನ್ನು ವೃದ್ಧಿಸಿಕೊಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಮಧುಕೇಶ್ವರ್ ಆರ್ ಎಸ್, ಕಾರ್ಯಾಗಾರದ ಸಂಚಾಲಕಿ ಡಾ.ಹೇಮಲತಾ ಕೆ., ಸಹ ಸಂಚಾಲಕಿ ಲತಾ ಎ ಎಲ್,. ಇತಿಹಾಸ ಪ್ರಾಧ್ಯಾಪಕ ಡಾ. ಕೃಷ್ಣೇಗೌಡ ಮುಂತಾದವರು ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ