Friday, November 20, 2026

ಪ್ರಾಯೋಗಿಕ ಆವೃತ್ತಿ

ಧರ್ಮ ಮತ್ತು ಮನಸ್ಸಿನ ದ್ವಂದ್ವಭಾವ

ಮೂಲ – ಓಶೋ
ಅನುವಾದ: ಹರೀಶ್ ಗಂಗಾಧರ್

ಅವಿಧೇಯನಾದ ಮಗುವನ್ನು ಪ್ರೀತಿಯಿಂದ ಒಲಿಸಿಕೊಳ್ಳಲಾಗದಿದ್ದರೆ, ದಂಡದಿಂದ ಅವನ್ನನು ವಿಧೇಯನನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ. ಕೊಡುಗೆಗಳು ಕೆಲಸ ಮಾಡದಿದ್ದರೆ ಕೋಲು ಕೆಲಸ ಮಾಡುತ್ತದೆ ಎಂಬ ನಂಬಿಕೆ ನಮ್ಮದು. ಹಾಗೆಯೇ ಸ್ವರ್ಗದಿಂದ ಜನರನ್ನ ಪುಸಲಾಯಿಸಲಾಗದಿದ್ದರೆ ನರಕದ ಹೆಸರೇಳಿ ಹೆದರಿಸಿಬಿಡುವುದು. ನಮ್ಮ ಮನಸ್ಸು ಹೀಗೆ ಅಲ್ಲವೇ ಕೆಲಸ ಮಾಡುವುದು. ಅದು ಎರಡೇ ಎರಡು ಸಾಧ್ಯತೆಗಳನ್ನ ಅನುಭವಿಸುತ್ತಿರುತ್ತದೆ. ಇದು ಅಥವಾ ಅದು. ಮೂರನೇ ಸಾಧ್ಯತೆಗೆ ಅಲ್ಲಿ ಅವಕಾಶವೆ ಇರಲ್ಲ. ನಮ್ಮ ಧರ್ಮಗಳು ಅಷ್ಟೇ ನಮ್ಮ ಮನಸ್ಸಿನ ದ್ವಂದ್ವಭಾವವನ್ನ ಮೀರಾಲಾಗದವು.

ನಮ್ಮ ಧರ್ಮಗಳಾದರು ಏನು? ನೀವು ಈಗೇನು ಮಾಡುತ್ತಿದ್ದೀರೋ ಅದಕ್ಕೆ ವಿರುದ್ಧವಾದುದ್ದನ್ನ ಮಾಡಿ ಅದು ಧರ್ಮವಾಗಿಬಿಡತ್ತೆ. ನಿಮಗೆ ಭರಪೂರ ಭೋಜನ ತಿನ್ನುವ ಹಂಬಲವಿದ್ದರೆ, ಧರ್ಮ ಉಪವಾಸ ಮಾಡು ಎನ್ನುತ್ತದೆ. ನಿಮಗೆ ದೈಹಿಕ ಸೌಂದರ್ಯ ಮೇಲೆ ಆಸಕ್ತಿಯಿದ್ದರೆ, ದೇಹ ಕುರೂಪಗೊಂಡು ನಶಿಸಿ ಹೋಗುತ್ತದೆ ಎಂದು ಧರ್ಮ ಪ್ರವಚನ ನೀಡುತ್ತದೆ. ನಿಮಗೆ ಹಣ ಸಂಪಾದಿಸುವ ಹುಚ್ಚು ಇದ್ದರೆ, ತ್ಯಾಗದ ಪಾಠ ಹೇಳಿಕೊಡತ್ತೆ ಧರ್ಮ. ನಿಮಗೆ ಪೋರ್ನೋಗ್ರಫಿ ನೋಡುವ ಹವ್ಯಾಸವಿದ್ದರೆ, ಪಾಪಿ ಮೊದಲು ಪವಿತ್ರ ಗ್ರಂಥ ಓದೋ ಎಂದು ಧರ್ಮ ಕೂಗುತ್ತದೆ. ಅಂಗಡಿಯಲ್ಲಿ ಕೂತು ವ್ಯಾಪಾರ ಮಾಡುತ್ತಿದ್ದರೆ, ಮಂದಿರ, ಮಸೀದಿಗೆ ಮರೆತೆಯ ಮುಠ್ಠಾಳ ಅಂತ ಧರ್ಮ ಎಚ್ಚರಿಸುತ್ತೆ.

ಜೀವನದಲ್ಲಿ ಆನಂದ ಅನುಭವಿಸಬೇಕಾದರೆ ನೀವು ಈಗ ಮಾಡುತ್ತಿರುವುದರ ವಿರುದ್ಧವಾದುದ್ದನ್ನೇ ಮಾಡು ಎಂದು ಮನಸ್ಸು ಹೇಳುತ್ತದೆ. ಧರ್ಮವು ಮನಸ್ಸಿನ ಈ ದ್ವಂದ್ವಭಾವದಲ್ಲೇ ಸಿಕ್ಕಿಕೊಂಡಿದೆ. ಧರ್ಮವೆಂದರೆ ಈಗ ಪ್ರಪಂಚಕ್ಕೆ ವಿಮುಖವಾಗುವುದೇ ಆಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ