Thursday, November 19, 2026

ಪ್ರಾಯೋಗಿಕ ಆವೃತ್ತಿ

ಒಂದು ಸಾವನ್ನು ಯಾಕೆ ನೆನಪಿಡಬೇಕು

ಒಂದು ಸಾವನ್ನು ಯಾಕೆ ನೆನಪಿಡಬೇಕು?
ಯಾಕೆಂದರೆ ಅದು ಸಹಜ ಸಾವಾಗಿರಲಿಲ್ಲ.
ಅದು ಉಸಿರು ನಿಲ್ಲಿಸುವ ಸಂಚಾಗಿತ್ತು,
ಅದು ಚಿಂತನೆಯ ಬೆದರಿಸುವುದಾಗಿತ್ತು.
ಹಂಚಿಕಡ್ಡಿಯಂಥಾ ದೇಹದೊಳಗಿನ
ದೈತ್ಯ ಚೈತನ್ಯಕ್ಕೆ ಬೆದರಿದವರ ಹೇಡಿ ಕೃತ್ಯವಾಗಿತ್ತು
ಉಳಿದವರ ಬೆದರಿಸುವ ತಂತ್ರವೂ ಆಗಿತ್ತು

ಎಷ್ಟೋ ದನಿಗಳು,
ಈ ಹರಿದ ನೆತ್ತರ
ಓಕುಳಿಗೆ
ಒಣಗಿ ಹೋಗಿರಬಹುದು.
ಆದರೆ ಆ ನೆತ್ತರು
ಇನ್ನೆಷ್ಟೋ ದನಿಗಳಿಗೆ ಒತ್ತಾಸೆ ನೀಡಿದೆ
ಎಂಬ ಪುರಾವೆಗಾದರೂ
ಒಂದು ಸಾವನ್ನು ನೆನಪಿಡಬೇಕು.
ಹಸಿಯಾಗಿಡಬೇಕು

– ಸುರೇಶ್ ಕಂಜರ್ಪಣೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ