ರಾಜ್ಯ ಸರ್ಕಾರವು 58 ಸಾವಿರ ಖಾಲಿ ಹುದ್ದೆಗಳನ್ನು ಹಳೇ ಮೀಸಲಾತಿಯ ಅನ್ವಯವೇ ಭರ್ತಿ ಮಾಡಲಾಗುವುದು ಎಂದು ನೋಟೀಸ್ ಹೊರಡಿಸಿರುವುದು ಅಕ್ಷರಶಃ ಮಾದಿಗ ಸಮುದಾಯವನ್ನು ಕೆರಳಿಸಿದ್ದು, ಇಡೀ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ದ ತಿರುಗಿ ಬಿದ್ದಿದೆ.
ಬೆಂಗಳೂರಿನದಲ್ಲಿ ನಡೆದ ಮಾದಿಗ ಸಮುದಾಯದ ಸಭೆಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ‘ಎಲ್ಲಾ ಅಧಿಕಾರ ಕಂಡಿದ್ದೇನೆ ನೋಡಿದ್ದೇನೆ, ನಾನು ಇರುವವರೆಗೂ ನನ್ನ ಸಮುದಾಯಕ್ಕೆ ಅನ್ಯಾಯವಾಗಲೂ ಬಿಡುವುದಿಲ್ಲ, ಒಂದು ವೇಳೆ ಒಳ ಮೀಸಲಾತಿ ಜಾರಿ ಮಾಡದೇ ಹೋದರೆ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ನಿಮ್ಮೊಂದಿಗೆ ಹೋರಾಟಕ್ಕೆ ಬರುತ್ತೇನೆ’ ಎಂದು ಘೋಷಣೆ ಮಾಡಿದ್ಧಾರೆ.
ಬೃಹತ್ ಹೋರಾಟ

ಮಂಗಳವಾರ ಬೆಂಗಳೂರಿನ ಮಾದಿಗ ಮಹಾಸಭಾ ಕಚೇರಿಯಲ್ಲಿ ನಡೆದ ಐಕ್ಯತಾ ಸಭೆಯಲ್ಲಿ ಒಳಮೀಸಲಾತಿ ಜಾರಿ ಮಾಡದೇ ಮಾದಿಗ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಘನ ಘೋರ ಅನ್ಯಾಯ ಎಂದು ಸಮುದಾಯದ ಮುಖಂಡರು ಖಂಡಿಸಿದ್ದು, ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಏಕ ಕಾಲದಲ್ಲಿ ಅಂದರೆ ಮಾ.6 ರಂದು ತಾಲ್ಲೂಕು ಬಂದ್ ಮತ್ತು ಇನ್ನಿತರ ರೀತಿಯ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ.
ಮಾ.12 ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್ ಅಲ್ಲಿ ಬೃಹತ್ ಹೋರಾಟದ ಸಮಾವೇಶ ಮಾಡಲು ತೀರ್ಮಾನಿಸಲಾಯಿತು.




