Friday, November 20, 2026

ಪ್ರಾಯೋಗಿಕ ಆವೃತ್ತಿ

ಭತ್ತದ ಬೆಳೆ ಕಳೆ ನಿರ್ವಹಣೆ ಸಾಧನ ಆವಿಷ್ಕಾರ : ಅನಂತರಾವ್

ಭತ್ತದ ಬೆಳೆಯಲ್ಲಿ ಕಳೆ ನಿರ್ವಹಣೆಗೆ ಸರಳ ಸಾಧನವನ್ನು ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತರು ನೂತನವಾಗಿ ಪರಿಚಯಿಸಿದ್ದಾರೆ ಎಂದು ನಿರ್ಮಲ ಭೂಮಾತಾ ಟ್ರಸ್ಟ್ ಅನಂತರಾವ್ ಕೆರಗೋಡು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭತ್ತದ ಬೆಳೆಯಲ್ಲಿ ಕಳೆ ಕೀಳಲು ಹೆಣ್ಣಾಳುಗಳ ಕೊರತೆಯಿದೆ. ಇದರಿಂದ ರೈತರು ಅನಿವಾರ್ಯವಾಗಿ ವಿಷಕಾರಿ ಕಳೆನಾಶಕ ಪ್ರಯೋಗದಿಂದ ಅನಾರೋಗ್ಯಕಾರಕ ಆಹಾರ ಉತ್ಪಾದಿಸಲಾಗುತ್ತಿದೆ ಎಂದರು.

ಭತ್ತದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಕೃಷಿ ಕಾರ್ಮಿಕರ ಅಗತ್ಯವಿದ್ದು, ಉತ್ಪಾದನೆಯ ವೆಚ್ಚ ಹೆಚ್ಚಾಗಲಿದೆ. ಸರಳವಾದ ಸರಪಳಿ ಸಾಧನದಿಂದ ಭತ್ತ ನಾಟಿಯಾದ 8ರಿಂದ 10 ದಿನಗಳ ನಂತರ ಕಳೆ ತೆಗೆಯುವ ಕಾರ್ಯ ಮಾಡಬಹುದಾಗಿದೆ. ಇಂದರಿಂದ ಕಳೆ ನಿವಾರಣೆ, ಅಂತರ ಬೇಸಾಯ ಮತ್ತು ಮಣ್ಣು ಬಗ್ಗಡ ಮಾಡುವ ಮೂರೂ ಕೆಲಸಗಳು ಒಮ್ಮೆಲೆ ಪೂರ್ಣ ಮಾಡಬಹುದಾಗಿದೆ ಎಂದರು.

ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಜಗದೀಶ್ ಮತ್ತು ಸೊಳ್ಳೆಪುರ ಚಂದ್ರಶೇಖರ್ ಸಾಧನವನ್ನು ಅಭಿವೃದ್ಧಿ ಪಡಿಸಿದ್ದು, ಸೆ.28ರಂದು ಇದೇ ಕೃಷಿ ಪದ್ಧತಿ ಅಳವಡಿಸಿಕೊಂಡ ಗದ್ದೆಯಲ್ಲಿ ರೈತರ ಸಮ್ಮುಖದಲ್ಲಿ ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದೆ. ಈ ಸಾಧನವು ಅತ್ಯಂತ ಉಪಯೋಗಕರ ಎಂದು ರುಜುವಾತಾಗಿದೆ ಎಂದು ನುಡಿದರು.

ಈ ಸಾಧನವನ್ನು 5 ಅಡಿ ಉದ್ದದ 2.5 ಇಂಚಿನ ಪಿವಿಸಿ ಪೈಪು, 5 ಅಡಿ ಉದ್ದದ ಕಬ್ಬಿಣದ ರಾಡಿಗೆ 2 ಇಂಚು ಅಂತರದಲ್ಲಿ 2.5 ಇಂಚಿನ ಕಬ್ಬಿಣದ ಸರಳು, ಅದರಡಿಗೆ ನೆಟ್ಟು-ಬೋಲ್ಟನ್ನು ಅಳವಡಿಸಿ ತಯಾರಿಸಲಾಗಿದ್ದು, ಸುಮಾರು 16 ಕೆ.ಜಿ ತೂಗಲಿದೆ. ಇದೇ ಸಾಧನವನ್ನು 3 ಅಡಿ ಉದ್ದದ ಅಳತೆಯಲ್ಲಿ ಮಾಡಿಕೊಂಡಲ್ಲಿ 8 ಕೆ.ಜಿಗೆ ತೂಕವನ್ನು ಇಳಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸುಭಾಷ್ ಪಾಳೇಕಾರ್ ಕೃಷಿ ಪದ್ಧತಿ ಹಾಗೂ ಇತರೆ ವಿಷಮುಕ್ತ ಕೃಷಿ ಪದ್ಧತಿ ಅನುಸರಿಸಿ ಭತ್ತ ಬೆಳೆಯುವ ರೈತರಿಗೆ ಅನುಕೂಲವಾಗಲದೆಂದು ಒದಗಿಸುವ ದೃಷ್ಠಿಯಿಂದ ಈ ಸಾಧನಕ್ಕೆ 5 ಸಾವಿರ ರೂ. ನಿಗದಿ ಮಾಡಲಾಗಿದೆ. ಆಸಕ್ತ ರೈತರು 9743171659 ಸಂಖ್ಯೆಗೆ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿ, ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸೊಳ್ಳೇಪುರ ಚಂದ್ರಶೇಖರ್, ಚಂದನ್‌ಗೌಡ, ಹನಿಯಂಬಾಡಿ ಸೋಮಶೇಖರ್, ದೊಡ್ಡಮಲಗೂಡು ಮಂಜು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ