Wednesday, September 18, 2024

ಪ್ರಾಯೋಗಿಕ ಆವೃತ್ತಿ

ಅಕ್ಕಿ ಕಳ್ಳನ ಹೆಸರೇನು?

✍️ ಶಿವಸುಂದರ್

ಅನ್ನವನ್ನು ಕಸಿದು
ಬ್ರಹ್ಮವನು ಬೋಧಿಸುವ
ಅಕ್ಕಿ ಕಳ್ಳನ ಹೆಸರೇನು?

ಹಸಿವಿನ ಸಂಕಟಕ್ಕೆ
ಅಜೀರ್ಣದ ಚೂರ್ಣ ನೀಡುವ
ಫಕೀರನ ಹೆಸರೇನು?

ವಿಶ್ವಾಸದ ವಿಧ್ವಂಸಕ್ಕೆ
ವಿಕಾಸದ ಅತ್ತರು ಪೂಸಿದ
ವಿಶ್ವಗುರುವಿನ ಹೆಸರೇನು ?

ಜನರನ್ನು ಕೊಂದು
ದೇಶವನ್ನು ಕಾಯುವ
ಸೇನಾಧಿಪತಿಯ ಹೆಸರೇನು?

ಸುಟ್ಟ ಕನಸುಗಳ ಕರಕಲಿನಲ್ಲಿ
ಸ್ಫೋಟದ ಸುಳಿವು
ಅರಸುವ ತಿಳಿವಿನ ಹೆಸರೇನು?

ಒಲಿದುಬರುವ ದೇವನ
ಕಲ್ಲ ಮಾಡಿ ಕೂಡಿಸಿದ
ಧರ್ಮದ ಹೆಸರೇನು?

ನೋವಿಗೆ ಕಿವುಡಾದ
ಸತ್ಸಂಗದ ಹೆಸರೇನು?

ನಗರ ಹೊತ್ತು ಉರಿವಾಗ
ನವಿಲಿನೊಂದಿಗಿನ
ನಿಸ್ಸಂಗಕ್ಕೆ ಹೆಸರೇನು?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!