Thursday, September 19, 2024

ಪ್ರಾಯೋಗಿಕ ಆವೃತ್ತಿ

ರೋಹಿಣಿ ಸಿಂಧೂರಿ – ಡಿ. ರೂಪಾಗೆ ರಾಜ್ಯ ಸರ್ಕಾರ ಸೋಟೀಸ್‌ ಜಾರಿ

ಕೆಲದಿನಗಳಿಂದ ಭಾರೀ ಚರ್ಚೆಗೆ ಗುರಿಯಾಗಿರುವ ಮಹಿಳಾ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಡಿ. ರೂಪಾ ಅವರಿಗೆ ಕೊನೆಗೂ ಸರ್ಕಾರ ನೋಟೀಸ್‌ ಜಾರಿ ಮಾಡಿದೆ.

ನಾಗರಿಕ ಸೇವಾ ವರ್ಗದ ನಿಯಮಗಳನ್ನು ಗಮನದಲ್ಲಿಟ್ಟಕೊಳ್ಳದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಇಬ್ಬರು ಅಧಿಕಾರಿಗಳು ತಮ್ಮ ವೈಯಕ್ತಿಕ ವಿಚಾರದ ಕೆಸರೆರೆಚಾಟ ನಡೆಸಿದ್ದಾರೆ. ಈ ನಡವಳಿಕೆಗಳನ್ನು ರಾಜ್ಯದ ಜನರು ನೋಡುತ್ತಿದ್ದು. ಇದನ್ನು ಕೂಡಲೆ ಬಗೆಹರಿಸಬೇಕೆಂದು ಸರ್ಕಾರವನ್ನು ಪ್ರಶ್ನಿಸುತ್ತಿರುವುದು ಕಾರ್ಯಾಂಗಕ್ಕೆ ಮತ್ತು ಸರ್ಕಾರಕ್ಕೆ ಮುಜುಗರ ತಂದಿದೆ. ಈ ಬೆನ್ನಲ್ಲೆ ಕೂಡಲೆ ಇದನ್ನು ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರವು ಇಬ್ಬರಿಗೂ ನೋಟೀಸ್‌ ನೀಡಿದೆ.

ರೋಹಿಣಿ ಸಿಂಧೂರಿ ಮತ್ತು ಡಿ. ರೂಪಾ ಅವರ ನಡುವಿನ ಜಟಾಪಟಿಗೆ ತೆರೆ ಎಳೆಯಲು ಆಡಳಿತ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಜೆಮ್ಸ್‌ ತಾರಕನ್‌, ಬಹಿರಂಗವಾಗಿ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಡಿ ಕೊಳ್ಳದಂತೆ ಸೂಚಿಸಿದ್ದರೆ.

ನಿಮ್ಮ ಕಷ್ಟ ಮತ್ತು ಆಕ್ಷೇಪಣೆಗಳನ್ನು ಆಲಿಸಲು ನಿಮಗೆ ಸೂಕ್ತ ವೇದಿಕೆ ಇದೆ ಆದರೂ ನೀವುಗಳು ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಡಿಕೊಳ್ಳುವುದು ಸರಿಯಾದುದ್ದಲ್ಲ. ಇದು ಭಾರತೀಯ ಸೇವಾ ನಿಯಮಗಳನ್ನು ಗಾಳಿಗೆ ತೂರಿದಂತೆ ಎಂದು ನೋಟೀಸ್‌ ನಲ್ಲಿ ಹೇಳಲಾಗಿದೆ.

ಯಾವುದೇ ರೀತಿಯ ಆರೋಪಗಳು ಇಬ್ಬರ ಮಧ್ಯೆ ಬಂದರೆ ಅದನ್ನು ಪ್ರಾಧಿಕಾರದ ಮುಂದೆ ತನ್ನಿ. ಅಲ್ಲಿ ಅದನ್ನು ಬಗೆಹರಿಕೊಳ್ಳಿ, ಇನ್ನು ಮುಂದೆ ಇವು ಮಾಧ್ಯಮದಮುಂದೆ ಹೋಗಬಾರದು ಎಂದು ಎಚ್ಚರಿಕೆ ನೀಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!