ಮಂಡ್ಯ ನಗರದ 26ನೇ ವಾರ್ಡ್ ನಲ್ಲಿರುವ ಚಲುವಯ್ಯ ಪಾರ್ಕ್ ಅಭಿವೃದ್ಧಿಗೆ 50 ಲಕ್ಷ ಅನುದಾನ ನೀಡಲಾಗಿದ್ದು, ಪಾರ್ಕಿನ ಒಳಗಡೆ ಜಿಮ್ ಸಲಕರಣೆ ಅಳವಡಿಕೆ ಹಾಗೂ ಮಕ್ಕಳ ಆಟಿಕೆ ಸಲಕರಣೆಗಳನ್ನು ಅಳವಡಿಕೆಗೆ ವಿಶೇಷ ಅನುದಾನದಲ್ಲಿ ಹೆಚ್ಚುವರಿ 1 ಕೋಟಿ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸುದುದಾಗಿ ಶಾಸಕ ರವಿಕುಮಾರ್ ತಿಳಿಸಿದರು.

ಶನಿವಾರ ಅಧಿಕಾರಿಗಳೊಂದಿಗೆ ವಾರ್ಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 26ನೇ ವಾರ್ಡ್ ಗೆ 3.5 ಕೋಟಿಗೂ ಅಧಿಕ ಅನುದಾನ ನೀಡಲಾಗುವುದು, ವಾರ್ಡ್ ನ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ 1 ಕೋಟಿ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಮತ್ತಷ್ಟು ಕಾಮಗಾರಿಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸ್ಥಳೀಯ ಮುಖಂಡರು ಮತ್ತು ಸಾರ್ವಜನಿಕರು ತಮಗೆ ಮನವಿ ಮಾಡಿದ ಸಂದರ್ಭದಲ್ಲಿ ಮತ್ತೊಂದು 1 ಕೋಟೆ ಹೆಚ್ಚುವರಿ ಅನುದಾನ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಧರ್, ಸೌಭಾಗ್ಯ, ಪಂಪಾಶ್ರೀ ಸೇರಿದಂತೆ ಮತ್ತಿತರರಿದ್ದರು.




