Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಕಾರ್ಪ್ ಡೇ ಆಚರಣೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ಜಿಲ್ಲಾ ಸಂಸ್ಥೆ, ಮಂಡ್ಯ ತಾಲ್ಲೂಕು ದಕ್ಷಿಣ ವಲಯ ಸ್ಥಳೀಯ ಸಂಸ್ಥೆ ಹಾಗೂ ಅಕ್ಕಮಹಾದೇವಿ ಗೈಡ್ ಕಂಪನಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ತಾಲ್ಲೂಕಿನ ಬೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಕಾರ್ಫ್ ಡೇ ಆಚರಿಸಲಾಯಿತು.

ಸ್ಕಾರ್ಫ್ ಗಳು ವಿವಿಧ ಬಣ್ಣಗಳನ್ನು ಹೊಂದಿದ್ದು ಪ್ರತಿ ಬಣ್ಣವು ನಿರ್ದಿಷ್ಟ ರ್‍ಯಾಂಕ್ ಅಥವಾ ವಿಭಾಗವನ್ನು ಸೂಚಿಸುತ್ತದೆ. ಸ್ಕಾರ್ಫ್ ಪದವನ್ನು ಕನ್ನಡದಲ್ಲಿ ಕಂಠವಸ್ತ್ರ ಅಥವಾ ಪದಕ ಎಂದು ಸಹ ಹೇಳಬಹುದು.ಭಾರತ್ ಸ್ಕೌಟ್ಸ್ ಮತ್ತು ಗೈಡ್ ಕಂಠವಸ್ತ್ರ ದಿನ ಅಥವಾ ಪದಕ ದಿನ ಎಂದು ಅರ್ಥೈಸಬಹುದು. ಸ್ಕಾರ್ಫ್ ಎಂಬ ಪದವನ್ನು ಸಾಮಾನ್ಯವಾಗಿ ಕನ್ನಡದಲ್ಲಿಯೂ ಬಳಸಲಾಗುತ್ತದೆ. ಎಂದು ಗೈಡ್ ಕ್ಯಾಪ್ಟನ್ ಉಷಾರಾಣಿ ತಿಳಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಕಾರ್ಫ್ ಡೇ ಅನ್ನು ಕನ್ನಡದಲ್ಲಿ ಬಿಎಸ್’ಜಿ ಸ್ಕಾರ್ಫ್ ದಿನ ಎಂದು ಹೇಳಲಾಗುತ್ತದೆ. ಇದು ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯಲ್ಲಿ ಸ್ಕಾರ್ಫ್ ಧರಿಸುವ ದಿನವನ್ನು ಸೂಚಿಸುತ್ತದೆ. ಈ ದಿನದಂದು ಸ್ಕೌಟ್ಸ್ ಮತ್ತು ಗೈಡ್ಸ್ ಗಳು ತಮ್ಮ ಸ್ಕಾರ್ಫ್ ಗಳನ್ನು ಧರಿಸಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರ ಕೆ. ಎಂ ಅವರು ಹಾಗೂ ಶಿಕ್ಷಕ ವರ್ಗದವರು, A E T ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು, ಪೋಷಕರು, ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ