Friday, November 20, 2026

ಪ್ರಾಯೋಗಿಕ ಆವೃತ್ತಿ

ದ್ವಿತೀಯ ಪಿಯುಸಿ ಪರೀಕ್ಷೆ| ವೇಳಾಪಟ್ಟಿ ಪ್ರಕಟ ; ಇಲ್ಲಿದೆ ಸಂಪೂರ್ಣ ಮಾಹಿತಿ….

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು ದ್ವಿತೀಯ ಪಿಯುಸಿ ಪರೀಕ್ಷೆ 2025ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.

ಮಾರ್ಚ್‌ 1ರಿಂದ 19 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಸಮಯ ಸೇರಿದಂತೆ ಸಂಪೂರ್ಣ ವಿವರ ಇಲ್ಲಿದೆ. ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ತನಕ ನಡೆಯಲಿದೆ.

ಮಾರ್ಚ್‌ 1, 2025, ಶನಿವಾರ: ಕನ್ನಡ/ಅರೇಬಿಕ್‌
ಮಾರ್ಚ್‌ 3, 2025, ಸೋಮವಾರ: ಗಣಿತ/ ಶಿಕ್ಷಣ ಶಾಸ್ತ್ರ/ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್‌ 4, 2025, ಮಂಗಳವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌
ಮಾರ್ಚ್‌ 5, 2025, ಬುಧವಾರ: ರಾಜ್ಯಶಾಸ್ತ್ರ/ ಸಂಖ್ಯಾಶಾಸ್ತ್ರ
ಮಾರ್ಚ್‌ 7, 2025: ಶುಕ್ರವಾರ: ಇತಿಹಾಸ, ಭೌತಶಾಸ್ತ್ರ
ಮಾರ್ಚ್‌ 8, 2025 ಶನಿವಾರ: ಹಿಂದಿ
ಮಾರ್ಚ್‌ 10, ಐಚ್ಛಿಕ ಕನ್ನಡ/ ಲೆಕ್ಕಶಾಸ್ತ್ರ/ ಭೂರ್ಗಭಶಾಸ್ತ್ರ/ ಗೃಹ ವಿಜ್ಞಾನ
ಮಾರ್ಚ್‌ 12, ಬುಧವಾರ: ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
ಮಾರ್ಚ್‌ 13, ಗುರುವಾರ: ಅರ್ಥಶಾಸ್ತ್ರ
ಮಾರ್ಚ್‌ 15, 2025, ಶನಿವಾರ: ಇಂಗ್ಲಿಷ್‌
ಮಾರ್ಚ್‌ 17, ಸೋಮವಾರ: ಭೂಗೋಳಶಾಸ್ತ್ರ/ ಜೀವಶಾಸ್ತ್ರ
ಮಾರ್ಚ್‌ 18, ಮಂಗಳವಾರ: ಸಮಾಜಶಾಸ್ತ್ರ/ ವಿದ್ಯುನ್ಮಾನಶಾಸ್ತ್ರ/ ಗಣಕ ವಿಜ್ಞಾನ
ಮಾರ್ಚ್‌19, ಬುಧವಾರ: ಹಿಂದೂಸ್ತಾನಿ ಸಂಗೀತ/ ಮಾಹಿತಿ ತಂತ್ರಜ್ಞಾನ/ ರಿಟೇಲ್‌/ ಆಟೋಮೊಬೈಲ್‌/ ಹೆಲ್ತ್‌ಕೇರ್‌/ ಬ್ಯೂಟಿ ಆಂಡ್‌ ವೆಲ್‌ನೆಸ್‌

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ