Friday, September 20, 2024

ಪ್ರಾಯೋಗಿಕ ಆವೃತ್ತಿ

ಲೋಕಸಭೆಯಲ್ಲಿ ಭದ್ರತಾ ಲೋಪ : ಒಳ ನುಗ್ಗಿದ ಇಬ್ಬರು ವ್ಯಕ್ತಿಗಳು

ದೆಹಲಿಯ ಸಂಸತ್ ಭವನದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಲೋಕಸಭೆಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಬಣ್ಣದ ಸ್ಪ್ರೇ ಮಾಡಿ ಆತಂಕ ಸೃಷ್ಟಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಸಂಸತ್ ಭವನದ ಒಳಗೆ ನುಗ್ಗಿದ ವ್ಯಕ್ತಿಗಳು ಪೈಕಿ ಓರ್ವ ಕರ್ನಾಟಕದ ಮೈಸೂರು ನಗರದ ವಿಜಯನಗರ ನಿವಾಸಿ ದೇವರಾಜೇಗೌಡ ಅವರ ಪುತ್ರ ಮನೋರಂಜನ್ ಎಂದು ಗುರುತಿಸಲಾಗಿದ್ದು,ಮತ್ತೋರ್ವನ ಹೆಸರು ಸಾಗರ್ ಶರ್ಮ ಎಂದು ಗುರುತಿಸಲಾಗಿದೆ‌.

“>

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಸದನಕ್ಕೆ ಧುಮುಕಿ ಅಶ್ರುವಾಯು ಮಾದರಿಯ ಅನಿಲ ಇದ್ದ ಕ್ಯಾನ್‌ಗಳನ್ನು ಸಿಡಿಸಿದ್ದರಿಂದ ಲೋಕಸಭೆಯ ಒಳಗೆ ಅಯೋಮಯ ಪರಿಸ್ಥಿತಿ ಸೃಷ್ಟಿಯಾಗಿ, ಸಂಸತ್ ಸದಸ್ಯರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ್ದಾರೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮೂಲಕ ಪಾಸ್ ಪಡೆದು ಪ್ರೇಕ್ಷಕರ ಗ್ಯಾಲರಿಗೆ ಪ್ರವೇಶ ಪಡೆದ ಇವರಿಬ್ಬರು ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಕ್ಕೆ ಜಿಗಿದು ಬೆಂಚ್‌,ಮೇಜುಗಳ ಮೇಲೆ ಓಡಾಡಿದ್ದಾರೆ. ಇವರಿಬ್ಬರು ಅಶ್ರುವಾಯು ತುಂಬಿದ ಡಬ್ಬಿಗಳನ್ನು ಸದನದ ಒಳಗೆ ಎಸೆದರು. ಇದರಿಂದ ಸದನದಲ್ಲಿ ಅಶ್ರುವಾಯು ತುಂಬಿಕೊಂಡಿತ್ತು,ಸರ್ವಾಧಿಕಾರ ನಡೆಯಲ್ಲ ಎಂದು ಘೋಷಣೆ ಕೂಗುತ್ತಾ ಸಭಾಧ್ಯಕರ ಪೀಠದತ್ತ ನುಗ್ಗಲು ಪ್ರಯತ್ನ ನಡೆಸಿದ ಇಬ್ಬರನ್ನೂ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ.

ಹೊಸ ಸಂಸತ್ ಭವನದಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳಿದ್ದರೂ ಭದ್ರತಾ ಲೋಪ ವ್ಯಕ್ತವಾಗಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

“>

ತಕ್ಷಣವೇ ಭದ್ರತಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.22 ವರ್ಷಗಳ ಹಿಂದೆ ಡಿ.13 ರಂದು ರಾಜಧಾನಿ ದೆಹಲಿಯ ಸಂಸತ್ ಭವನದ ಮೇಲೆ ಭಯೋತ್ಪಾದಕರು ಗುಂಡಿನ ಸುರಿಮಳೆಗೈದು ವಿಧ್ವಂಸಕ ಕೃತ್ಯ ನಡೆಸಿದ್ದರು.ಈ ಘಟನೆ ಸಂಭವಿಸುತ್ತಿದ್ದಂತೆಯೇ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದ್ದಾರೆ.
ಹಾಗೆಯೇ ಸಂಸತ್ತಿನ ಹೊರಗೆ ಸರ್ವಾಧಿಕಾರ ನಡೆಯಲ್ಲ ಎಂದು ಘೋಷಣೆ ಕೂಗುತ್ತಿದ್ದ ನೀಲಂಕೌರ್ ಹಾಗೂ ಅಮೋಲ್ ಶಿಂಧೆ ಎಂಬ ಇಬ್ಬರನ್ನು ಕೂಡ ಬಂಧಿಸಿರುವ ಪೋಲೀಸರು ವಿಚಾರಣೆ ನಡೆಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!