Friday, June 14, 2024

ಪ್ರಾಯೋಗಿಕ ಆವೃತ್ತಿ

ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ

ಪ್ರಪಂಚದಲ್ಲಿ ಸಾಕಷ್ಟು ಆವಿಷ್ಕಾರಗಳಾದರೂ,ರಕ್ತಕ್ಕೆ ರಕ್ತವೇ ಪರ್ಯಾಯ. ಯಾವುದೇ ಒತ್ತಾಯವಿಲ್ಲದೇ ಸ್ವಯಂ ಪ್ರೇರಿತರಾಗಿ ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡಬೇಕು ಎಂದು ಆರ್.ಸಿ.ಹೆಚ್. ಹಾಗೂ ನೋಡಲ್ ಅಧಿಕಾರಿ ಡಾ. ಅನಿಲ್‌ಕುಮಾರ್ ಎಂ. ರವರು ತಿಳಿಸಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನ ಮಾಡುವ ಪ್ರಯತ್ನಕ್ಕೆ ಕೈ ಜೋಡಿಸಿ ಜೀವ ಉಳಿಸೋಣ ಎಂಬ ಘೋಷವಾಕ್ಯ ದೊಂದಿಗೆ ಆಚರಿಸಲಾಯಿತು.

ಜನ ಸಾಮಾನ್ಯರಲ್ಲಿ ರಕ್ತ ದಾನದ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲಿ ರಕ್ತ ದಾನ ಮಾಡುವುದು ಸಹ ಒಂದು ಜಾಗೃತಿ ಕಾರ್ಯಕ್ರಮವಾಗಿದೆ ಎಂದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಲೋಕೇಶ್ ಟಿ. ಕೆ ರವರು ಮಾತನಾಡಿ, ರಕ್ತದಾನಿಗಳು ದೇವರಿಗೆ ಸಮಾನ. ಯಾವುದೇ ಸಮಯದಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಬಂದು ರಕ್ತದಾನ ಮಾಡುವವರು ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಜನರಿದ್ದಾರೆ ಎಂದರು.

ಯಾವುದೇ ಜಾತಿ, ಧರ್ಮದ ತಾರತಮ್ಯ ಮಾಡದೆ ರಕ್ತದ ಅವಶ್ಯಕತೆ ಇರುವವರೆಗೆ ರಕ್ತದಾನಿಗಳು ಬಂದು ರಕ್ತ ನೀಡುವುದು ಶ್ಲಾಘನೀಯ ಎಂದರು .

ದಾನಿಗಳು ವಿಶ್ವಮಾನವರು. ಏಕೆಂದರೆ ರಕ್ತದಾನ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಯಾರಿಗೆ ಸಿಕ್ಕಿದೆಯೋ ಅವರ ಅದೃಷ್ಟ. ನಿರಂತರವಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವುದರಿಂದ ಕೆಲವರ ಜೀವವನ್ನು ಉಳಿಸಬಹುದು. ವರ್ಷದಲ್ಲಿ ನಾಲ್ಕು ಬಾರಿ ರಕ್ತದಾನವನ್ನು ಮಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಧನಂಜಯ, ಟಿ.ಎ.ಪಿ.ಸಿ.ಯು ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಆಶಾಲತಾ ಎಂ.ಎನ್.ಆಡಳಿತ ವೈದ್ಯಾಧಿಕಾರಿ ಡಾ. ಆರ್, ಶಶಿಕಲಾ,ಕೃಷಿಕ ಲಯನ್ಸ್ ಆಡಳಿತಾಧಿಕಾರಿ ಕೆ.ಟಿ. ಹನುಮಂತು, ಕೃಷಿಕ ಲಯನ್ಸ್ ಉಪಾಧ್ಯಕ್ಷರು ಮೋಹನ್‌ ಕುಮಾ‌ರ, ನಗರಸಭಾ ಸದಸ್ಯರು ಕುಮಾರ್‌ , ಮಂಗಳಮ್ಮ, ಅನುಪಮ ಶಶಾಂಕ್, ಜಯರಾಮ್, ಡಾ. ವೀಣಾ, ಕಾರಾಗೃಹದ ಶಿಕ್ಷಕರು ಶಿವಲಿಂಗಯ್ಯ, ರಫಿ ಅಹಮದ್, ರವಿಕುಮಾರ್ ಬಜಂತ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!