ಮಂಡ್ಯ ತಾಲೂಕಿನ ಹೆಚ್. ಮಲ್ಲಿಗೆರೆ ಗ್ರಾಮದ ಶ್ರೀ ಚೆನ್ನಮ್ಮ ಎಜುಕೇಶನ್ ಟ್ರಸ್ಟ್(ರಿ) ನ ಚನ್ನಮ್ಮ ಕಾನ್ವೆಂಟ್, ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ, ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.ಮಕ್ಕಳ ಹಾಡು,ನೃತ್ಯ ಕಾರ್ಯಕ್ರಮ ನೋಡಿದ ಪೋಷಕರು ಮತ್ತು ಅತಿಥಿಗಳು ಸಂತಸ ಪಟ್ಟರು.
ಶಾಲಾ ವಾರ್ಷಿಕೋತ್ಸವಕ್ಕೂ ಮೊದಲು ಮಧ್ಯಾಹ್ನ 2 ಗಂಟೆಗೆ” ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮ್ಮಿಲನ” ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಜರಿದ್ದು ಸಂತೋಷ ಪಟ್ಟರು.ಟ್ರಸ್ಟ್ ನ ವತಿಯಿಂದ ಹಿರಿಯ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಿಗೆ, ಪೋಷಕರಿಗೆ ಮತ್ತು ಮಕ್ಕಳಿಗೆ ಪ್ಲಾಸ್ಟಿಕ್ ಉತ್ಪನ್ನಗಳಿಂದಾಗುವ ಹಾನಿ, ನಿಷೇಧದ ಬಗ್ಗೆ,ಬಟ್ಟೆ ಬ್ಯಾಗ್ ಬಳಕೆಯ ಬಗ್ಗೆ ಪ್ಲಾಸ್ಟಿಕ್ ವಿರೋಧಿ ಪರಿಸರ ಮಿತ್ರ ಜಯಶಂಕರ್ ಅವರು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿನಿ ಅಧಿಕಾರಿಯಾದ ಆಶಾರಾಣಿ ಅವರನ್ನು ಗೌರವಿಸಲಾಯಿತು.
ಜಿ. ಪಂ. ಮಾಜಿ ಸದಸ್ಯರಾದ ಸಿ.ಮಾದಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಏಳೂರಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ವೈ.ಎಂ. ನಾಗರಾಜು, ಎ ಪಿ ಎಂ ಸಿ ಮಾಜಿ ಅಧ್ಯಕ್ಷ ಮಾದೇಗೌಡ,ಗ್ರಾ.ಪಂ. ಪಂಚಾಯಿತಿ ಅಧ್ಯಕ್ಷರಾದ ಪ್ರೇಮ, ಸದಸ್ಯರುಗಳಾದ ವಿವೇಕ್,ಭಾಗ್ಯಮ್ಮ, ವೈ ಎಂ.ರತ್ನ, ಸಂಸ್ಥಾಪಕ ಪರಿಸರ ಮಿತ್ರ ಜಯ ಶಂಕರ್ ಮತ್ತು ಮತ್ತು ನಿವೃತ್ತ ಅಧಿಕಾರಿಗಳಾದ ಶ್ರೀ ಬಿ.ಎಂ. ಆನಂದ ಮೂರ್ತಿ, ಮಾಜಿ ಸೆನೆಟ್ ಸದಸ್ಯ ಕೀಲಾರ ಜೈರಾಮ್, ನಿವೃತ್ತ ಉಪನ್ಯಾಸಕ ಶಂಕರಗೌಡ, ವಿಶ್ರಾಂತ ಪ್ರಾಂಶುಪಾಲ ತೂಬಿನಕೆರೆ ಲಿಂಗರಾಜು ಮತ್ತಿತರರು ಭಾಗವಹಿಸಿದ್ದರು.




