Tuesday, September 17, 2024

ಪ್ರಾಯೋಗಿಕ ಆವೃತ್ತಿ

ಷೇರುದಾರರಿಗೆ ನಂಬಿಕೆ ಹುಟ್ಟಿಸಿ ನಷ್ಟ ಮಾಡಿದ ಮೋದಿಜೀ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ, ಸಟ್ಟಾ ಆಡುವ ಮಿಡ್ಲ್ ಕ್ಲಾಸ್ ಜನರು ಪ್ರತಿ ಊರು, ಪ್ರತಿ ತಾಲ್ಲೂಕು, ‌ಪ್ರತಿ ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಗುತ್ತಾರೆ, ಇವರುಗಳು ತಮ್ಮದೇ ಲೆಕ್ಕಾಚಾರದ ಮೇಲೆ ಹಣ ಹೂಡಿಕೆ ಮಾಡಿ ಲಾಭವನ್ನು ಮಾಡುತ್ತಾರೆ,‌ಅದೇ ರೀತಿ ನಷ್ಟವನ್ನು ಹೊಂದುತ್ತಾರೆ.

ಆದರೆ ದೇಶದ ಯಾವ ಚುನಾವಣೆಯಲ್ಲಿಯೂ ಸಹ ನೇರವಾಗಿ ವೇದಿಕೆಗಳಿಂದ ಮೈಕ್ ಮುಂದೆ ನಿಂತು ಯಾವುದೇ ರಾಷ್ಟ್ರ ನಾಯಕರು ಜೂನ್ 4 ನೇ ತಾರೀಖು ಷೇರು ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತೆ ಎಂದು ಷೇರುದಾರರನ್ನು ಹುಬ್ಬಿಸಿರಲಿಲ್ಲ.

ದೇಶದ ಇತಿಹಾಸದಲ್ಲಿ‌ ಮೊದಲ ಬಾರಿಗೆ ಮೋದಿಜೀ ಮತ್ತು ಅಮಿತ್ ಶಾ ಅವರು ಸಾರ್ವಜನಿಕ ವೇದಿಕೆಗಳಲ್ಲಿ‌ ಷೇರು ಮಾರುಕಟ್ಟೆಯಲ್ಲಿ ನಮ್ಮ ಸರಕಾರ ಬರುವುದರಿಂದ ಮಾರುಕಟ್ಟೆ ಅಥವಾ ಸೆನ್ಸೆಕ್ಸ್ ಬಾರಿ ಏರಿಕೆ ಯಾಗುತ್ತೆ ಎಂದು ಷೇರುದಾರರಲ್ಲಿ ಹೂಡಿಕೆದಾರರಲ್ಲಿ ಆಸೆ ಹುಟ್ಟಿಸಿದ ಕಾರಣ ಮತ್ತು ಎಗ್ಸಿಟ್ ಪೋಲ್ ಗಳಲ್ಲಿ ಅತಿ ಹೆಚ್ಚು ಗೆಲುವಿನೊಂದಿಗೆ ಬಿಜೆಪಿ ಸರ್ಕಾರ ರಚಿಸಬಹುದು ಎಂದು ಅಂಕಿ-ಅಂಶಗಳನ್ನು ಕೆಲವು ಮಾಧ್ಯಮಗಳು ಬಿಂಬಿಸಿದ್ದರಿಂದ,  ಸಣ್ಣ ಪುಟ್ಟ ಹೂಡಿಕೆದಾರರು ತಮ್ಮ ಜೀವಮಾನದ ಸಂಪಾದನೆಯನ್ನು ಇವರುಗಳ ಮಾತು ನಂಬಿ ಹೂಡಿಕೆ ಮಾಡಿದ್ದು ಈಗ ಮಾರುಕಟ್ಟೆ ಸಂಪೂರ್ಣ ಕುಸಿದು ಸೆನ್ಸೆಕ್ಸ್ ಪಾತಾಳ ಸೇರಿದ್ದು ಮೋದಿಜೀ ಈ ದೇಶದ ಸಣ್ಣ ಹೂಡಿಕೆದಾರರ ಜೀವನದ ಜೊತೆಗೆ ಚಲ್ಲಾಟವಾಡಿದ್ದಾರೆ ಎನ್ನುವ ಚರ್ಚೆ ಪ್ರಾರಂಭವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!