Thursday, September 19, 2024

ಪ್ರಾಯೋಗಿಕ ಆವೃತ್ತಿ

ಸೆರೆಸಿಕ್ಕದ ಚಿರತೆ : ಜನರಲ್ಲಿ ಹೆಚ್ಚಿದ ಆತಂಕ

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ನಲ್ಲಿ ಚಿರತೆ ಹಾವಳಿ ಮುಂದುವರೆದಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. 4 ಕಡೆ ಬೋನ್ ಇಟ್ರೂ ಕೂಡ ಇನ್ನೂ ಸೆರೆ ಸಿಕ್ಕದ ಚಿರತೆಯಿಂದ ಜನರು ಭಯ, ಆತಂಕದಿಂದ ಓಡಾಡುವಂತಾಗಿದೆ.

ಕಳೆದ 20 ದಿನಗಳಿಂದ ಪದೇ ಪದೇ ಪ್ರತ್ಯಕ್ಷವಾಗಿ ಕೆ.ಆರ್.ಎಸ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಲ್ಲೂ ಚಿರತೆ ಭಯ ಮೂಡಿಸಿದೆ. ಬೆಳಿಗ್ಗೆ, ಸಂಜೆ ವಾಕಿಂಗ್ ಗೆ ತೆರಳದಂತೆ ಕೆ.ಆರ್.ಎಸ್ ಸೇರಿದಂತೆ ಸುತ್ತಮುತ್ತಲ ನಿವಾಸಿಗಳಿಗೆ ಗ್ರಾಮ ಪಂಚಾಯಿತಿ ಧ್ವನಿ ವರ್ಧಕದ ಮೂಲಕ ಸೂಚನೆ ನೀಡಿದೆ.

ಚಿರತೆ ಸೆರೆಗೆ ಹೆಚ್ಚಾದ ಒತ್ತಡ

ಚಿರತೆ ಬಂದು 15-20 ದಿನಗಳಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಚಿರತೆ ಸೆರೆ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿದೆ. 4 ಬೋನ್ ಇಟ್ರೂ ಸೆರೆ ಸಿಕ್ಕದಿರೋದ್ರಿಂದ ಕ್ಯಾಮರಾ ಟ್ರ್ಯಾಪ್ ಅಳವಡಿಕೆ ಮಾಡಲಾಗಿದೆ.

ಕ್ಯಾಮರಾ ಟ್ರ್ಯಾಪ್ ಮೊರೆ

ಸಿಸಿಟಿವಿ ಇಲ್ಲದ ಜಾಗಕ್ಕೆ ಕ್ಯಾಮರಾ ಟ್ರ್ಯಾಪ್ ಅಳವಡಿಸಿರುವ ಅರಣ್ಯ ಇಲಾಖೆ, ಚಿರತೆ ಚಲನವಲನ ನೋಡಿಕೊಂಡು ಹೆಚ್ಚುವರಿ ಬೋನ್ ಹಾಗೂ ಕಾರ್ಯಾಚರಣೆ ನಡೆಸಲು ಯೋಜನೆ ಹಾಕಿಕೊಡಿದೆ.

ರಾತ್ರಿ ವೇಳೆಯೂ ಸಿಬ್ಬಂದಿ ನಿಯೋಜನೆ

ಮತ್ತೊಂದೆಡೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೂ ಸಾಕಷ್ಟು ಮುನ್ನೆಚ್ಚರಿಕೆ ನೀಡಿದ್ದು,
ಬೆಳೆದು ನಿಂತಿದ್ದ ಗಿಡ ಗಂಟೆ ತೆರವುಗೊಳಿಸುವ ಕಾರ್ಯ ಆರಂಭಿಸಿ ಚಿರತೆ ಸೆರೆಗೆ ಮುಂದಾಗಿದ್ದಾರೆ. ಕೆ.ಆರ್.ಎಸ್ ಸುತ್ತಮುತ್ತಾ ರಾತ್ರಿ ವೇಳೆಯೂ ಭದ್ರತೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!