Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನರ ಸೇವೆಗೆ ನನ್ನ ಮೊದಲ ಆದ್ಯತೆ: ಕದಲೂರು ಉದಯ್

ಜನರ ಸೇವೆಗೆ ನನ್ನ ಮೊದಲ ಆದ್ಯತೆ.ದೇವರು ನನಗೆ ಕೊಟ್ಟಿರುವ ಹಣದಲ್ಲಿ ಜನರ ಸೇವೆಗಾಗಿ ಮೀಸಲಿಟ್ಟಿದ್ದೇನೆ ಎಂದು ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರದ ತೊರೆಬೊಮ್ಮನಹಳ್ಳಿಯಲ್ಲಿ ಉದಯ್ ಅಭಿಮಾನಿಗಳ ಸಂಘ ಉದ್ಘಾಟಸಿ ಅವರು ಮಾತನಾಡಿದರು.

ನಾನು ಸರ್ಕಾರಿ ಶಾಲೆಯಲ್ಲಿ ಓದಿ, ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿ ಉದ್ಯಮ ಸ್ಥಾಪಿಸಿ ದುಡಿದ ಹಣದಲ್ಲಿ ನನ್ನ ಕ್ಷೇತ್ರಕ್ಕೆ ಏನಾದರೂ ಮಾಡಲೇ ಬೇಕು ಎಂದು ಬಂದಿದ್ದೇನೆ.

ಡಾ.ರಾಜ್ ಕುಮಾರ್ ಅವರು ಅಭಿಮಾನಿಗಳೇ ನನ್ನ ದೇವರೆಂದು ಹೇಳಿದರು.ಆದರೆ ನಾನು ಯಾವ ನಟನೂ ಅಲ್ಲ, ನನ್ನ ಸಮಾಜ ಸೇವೆ ನೋಡಿ ಅಭಿಮಾನಿಗಳು ಸಂಘ ಸ್ಥಾಪನೆ ಮಾಡುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ದೇವರು ನನಗೆ ಏನು ಕೊಟ್ಟಿದ್ದಾನೋ ಅದರಲ್ಲಿ ಒಂದಷ್ಟು ಭಾಗವನ್ನು ನನ್ನದೇ ಟ್ರಸ್ಟ್ ಮೂಲಕ ಸಮಾಜ ಸೇವೆಗೆ ಮುಡುಪಾಗಿಟ್ಟಿದ್ದೇನೆ.ನನ್ನ ಸಮಾಜಮುಖಿ ಕೆಲಸಗಳಿಂದ ನನ್ನನ್ನು ನಿಮ್ಮ ಮನೆ ಮಗನಂತೆ ನೋಡುತ್ತಿದ್ದೀರಿ ಎಂದು ಭಾವುಕರಾದರು.

ಈ ರೀತಿ ನನ್ನ ಹೆಸರಿನಲ್ಲಿ ಅಭಿಮಾನಿಗಳ ಸಂಘ ಕಟ್ಟಿ ಸಮಾಜ ಸೇವೆ ಮಾಡಲು ಹೊರಟಿರುವುದು ತುಂಬಾ ಸಂತಸ ತಂದಿದೆ ಎಂದರು.

ಮುಂದಿನ ದಿನಗಳಲ್ಲಿ ಈ ನಮ್ಮ ಸಂಘದ ಹೆಸರಿನಲ್ಲಿ ಮುಂದೆ ಹಲವು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇನೆ.
ಮದ್ದೂರು ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಉಚಿತ ನೇತ್ರಾ ಚಿಕಿತ್ಸೆ, ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತೇವೆ ಎಂದರು.

ನಿಮ್ಮ ಸೇವೆಯಿಂದ ನನ್ನ ಬದುಕು ಸಾರ್ಥಕವಾಗಿದೆ.ಈ ಸಾಮಾಜಿಕ ಕಾರ್ಯವನ್ನು ಕ್ಷೇತ್ರದ ಎಲ್ಲಾ ಭಾಗಕ್ಕೂ ವಿಸ್ತರಿಸುವ ಆಶಯ ವ್ಯಕ್ತಪಡಿಸಿದರು.

ಈ ನನ್ನ ಕ್ಷೇತ್ರದ ಜನತೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಹಾಗೂ ನನ್ನ ಮನೆ, ಮನಸ್ಸು ಯಾವಾಗಲೂ ತೆರೆದಿರುತ್ತದೆ ಎಂದರು.

ಸಿಪಾಯಿ ಶ್ರೀನಿವಾಸ್ ಅವರು ಮಾತನಾಡಿ, ಉದಯಣ್ಣನವರ ಹೆಸರಿನಲ್ಲಿ ಯುವಕರು ಸಂಘವನ್ನು ಸ್ಥಾಪಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ‌.ನಡೆಯೋ ದಾರಿ ನಿಯತ್ತಾಗಿದ್ದರೆ ತಡೆಯೊ ತಾಕತ್ ಯಾರಿಗೂ ಇಲ್ಲ ಅನ್ನುವ ಹಾಗೇ ಉದಯಣ್ಣನವರು ಬಾಳುತ್ತಿದ್ದಾರೆ.ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಗಾದೆಯ ಹಾಗೇ ಅವರು ಕ್ಷೇತ್ರದಲ್ಲಿ ಮಾಡದ ಸಮಾಜ ಮುಖಿ ಸೇವೆಗಳಿಲ್ಲ ಎಂದರು .

ಸಂಘದ ಅಧ್ಯಕ್ಷ ಅಭಿಷೇಕ್ ಗೌಡ ಟಿ.ಎಸ್. ಮಾತನಾಡಿ, ಅವರ ಸಮಾಜ ಮುಖಿ ಸೇವೆ ನೋಡಿ ಸಂಘ ಸ್ಥಾಪಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅವರ ಸಹಸ್ತ್ರಾರು ಅಭಿಮಾನಿಗಳು ರಾಜಕೀಯಕ್ಕೆ ಬರಬೇಕು, ಮುಂದಿನ ನಮ್ಮ ನಾಯಕ ಉದಯಣ್ಣ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು ಮೊದಲು ಸೇವೆ, ಮುಂದಿನ ದಿನಗಳಲ್ಲಿ ನೋಡೊಣ ಎಂದು ಮುಗುಳ್ನಕ್ಕರು.

ಸಂಘದ ಉದ್ಘಾಟನೆಗೂ ಮೊದಲು ನೂರಾರು ಅಭಿಮಾನಿಗಳು ಬೃಹತ್ ಬೈಕ್ ರ‍್ಯಾಲಿ ಮೂಲಕ ಉದಯ್ ಅವರನ್ನು ಗ್ರಾಮಕ್ಕೆ ಮೆರವಣಿಗೆಯಲ್ಲಿ ಕರೆತಂದರು.ಅಲ್ಲದೆ ತಮ್ಮ ನಾಯಕ ಕದಲೂರು ಉದಯ್ ಅವರಿಗೆ ಕ್ರೇನ್ ಮುಖಾಂತರ ಬೃಹತ್ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕದಲೂರು ತಿಮ್ಮೇಗೌಡ,ಯತೀಶ್, ವೆಂಕಟೇಶ್,ಮುತ್ತರಾಜು,ವಿನೋದ್,ರಮೇಶ್,ಸೊಸೈಟಿ ನಿರ್ದೆಶಕರಾದ ಕೆ.ಸಿ.ರಮೇಶ್,ರಂಗಸ್ವಾಮಿ ಮತ್ತಿತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!