Sunday, May 19, 2024

ಪ್ರಾಯೋಗಿಕ ಆವೃತ್ತಿ

ಲೈಂಗಿಕ ಕಿರುಕುಳ | ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ದ ಪೋಕ್ಸೋ ಪ್ರಕರಣ ದಾಖಲು

ಬಿಜೆಪಿ ಸಂಸದ ಹಾಗು ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ದ ಲೈಂಗಿಕ ಕಿರುಕುಳದ ಆಧಾರದ ಮೇಲೆ ಶುಕ್ರವಾರ ಎರಡು ಎಫ್ ಐಆರ್ ಸೇರಿದಂತೆ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಆರು ವಾರಗಳಿಂದ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಾದ ವಿನೇಶಾ ಪೋಗಟ್ ಮತ್ತು ಸಾಕ್ಷಿ ಮಲ್ಲಿಕ್ ರಿಗೆ ಮೊದಲ ಹಂತದ ಜಯ ಸಿಕ್ಕಿದೆ. ಆದರೂ ಕುಸ್ತಿ ಪಟುಗಳು ನಿರಂತರ ಧರಣಿ ನಡೆಸುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಮಗೆ ದೆಹಲಿ ಪೋಲೀಸರ ಮೇಲೆ ನಂಬಿಕೆ ಇಲ್ಲ. ಎಫ್ ಐಆರ್ ನಲ್ಲಿ ನಮ್ಮ ಆರೋಪಗಳಿಗೆ ಸಂಭಂದಿಸಿದಂತೆ ಏನಿದೆ ಎಂಬುದನ್ನು ನಾವು ನೂಡಬೇಕು. ಅಲ್ಲದೆ ಅವರನ್ನು ಈ ವರೆಗೂ ಬಂದಿಸದೇ ಇರುವುದಕ್ಕೆ ಪೂರಕವಾಗಿಯೂ ಆ ಎಫ್ ಐಆರ್ ನಲ್ಲಿ ಇರಬಹುದು. ಆ ಆರೋಪಿಯನ್ನು ಬಂದಿಸುವವರೆಗೂ ನಾವು ಹೋರಾಡುತ್ತೇವೆ ಎಂದಿದ್ದಾರೆ

ಅನೇಕ ಕ್ರೀಡಾಪಟುಗಳು ಬೆಂಬಲ
ಚಾಂಪಿಯನ್ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಒಳಗೊಂಡಂತೆ ದೇಶದ ಅನೇಕ ಮಾಜಿ ಆಟಗಾರರೆಲ್ಲರೂ ನೊಂದ ಕುಸ್ತಿಪಟುಗಳ ಪರ ಬೆಂಬಲ ಸೂಚಿಸಿದ್ದಾರೆ.

ಬಾಕ್ಸರ್ ನಿಕೇತ್ ಜರೀನ್,ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಹಾಕಿ ಆಟಗಾರ್ತಿ ರಾಣಿ ರಾಂಪಾಲ್, ಮಾಜಿ ಕ್ರಿಕೇಟರ್ ವೀರೇಂದ್ರ ಸೇಹ್ವಾಗ್, ಹರಭಜನ್ ಸಿಂಗ್, ಇರ್ಫಾನ್ ಪಠಾಣ್ ನವಜೋತ್ ಸಿಂಗ್ ಮತ್ತು ಅನೇಕರು ಇವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!