Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದವನಿಗೆ 8 ವರ್ಷ ಜೈಲು

16 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ ಪೋಕ್ಸೊ ಕಾಯ್ದೆಯಡಿ ಒಟ್ಟು 8 ವರ್ಷ ಜೈಲು ಶಿಕ್ಷೆ ಹಾಗೂ 80 ಸಾವಿರ ರೂ. ದಂಡ ವಿಧಿಸಿ ಮಂಡ್ಯದ ಅಧಿಕ ಜಿಲ್ಲಾ ಮತ್ತು ಸತ್ರ 1ನೇ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.

ಶ್ರೀರಂಗಪಟ್ಟಣ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಆರೋಪಿ ಸುನೀಲ್ ಕುಮಾರ್.ಎಸ್.ಕೆ. ಅಲಿಯಾಸ್ ಗುಡ್ಡಪ್ಪ ಶಿಕ್ಷೆಗೆ ಒಳಗಾದವನು. ಈತನಿಗೆ ಕಲಂ.326 ರ ಅಡಿಯಲ್ಲಿ 2 ವರ್ಷಗಳ ಸಾದಾ ಸಜೆ, ಪೋಕ್ಸೋ ಕಾಯಿದೆ ಕಲಂ.10 ರ ಅಪರಾಧಕ್ಕೆ 5 ವರ್ಷ ಸಜೆ ಹಾಗೂ ಪೋಕ್ಸೋ ಕಾಯಿದೆ ಕಲಂ.12 ರ ಅಡಿಯಲ್ಲಿ 1 ವರ್ಷ ಸಜೆ ಹಾಗೂ 80,000 ಸಾವಿರ ರೂ.ಗಳ ದಂಡ ವಿಧಿಸಿ ಮಂಡ್ಯದ ಅಧಿಕ ಜಿಲ್ಲಾ ಮತ್ತು ಸತ್ರ 1ನೇ ತ್ವರಿತಗತಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಶಬಾನಾ ಬೇಗಂ ಲಾಡ್ ಖಾನ್ ತೀರ್ಪು ನೀಡಿದ್ದಾರೆ.

ಅಪಾದಿತ ವ್ಯಕ್ತಿಯು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಅಪ್ರಾಪ್ತ ಬಾಲಕ ತನ್ನ ಮರ್ಮಾಂಗವನ್ನು ಕೊಯ್ದು ಕೊಳ್ಳುವಂತೆ ದುಷ್ಪ್ರೇರಣೆ ನೀಡಿರುವ ಕೃತ್ಯವು ಸಾಬೀತಾಗಿದೆ. ಸರ್ಕಾರಿ ಆಭಿಯೋಜಕ ಎ.ಪಿ.ಫಿರೋಜ್ ಖಾನ್ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಜೆ.ಪೂರ್ಣಿಮಾ ಸಂತ್ರಸ್ಥ ಬಾಲಕನ ಪರವಾಗಿ ವಾದ ಮಂಡಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!