Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಕಿಗೆ ಲೈಂಗಿಕ ಕಿರುಕುಳ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಾಥಮಿಕ ಶಾಲಾ ಶಿಕ್ಷಕಿ ಕನ್ನಿಕಾ ಪರಮೇಶ್ವರಿ ಅವರಿಗೆ ಉದ್ದೇಶ ಪೂರ್ವಕವಾಗಿ ಅವಹೇಳನ ಮಾಡಿ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿರುವ ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮತ್ತು ಇ.ಸಿ.ಓ.ಸಿದ್ದರಾಜು, ಅಧೀಕ್ಷಕ ಕುಮಾರಸ್ವಾಮಿ ಹಾಗೂ ನಲ್ಲಿಗೆರೆಯ ಮುಖ್ಯ ಶಿಕ್ಷಕಿ ಸುವರ್ಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ  ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಪತ್ರಿಭಟನೆ ನಡೆಸಿದರು.

ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಶಿಕ್ಷಕಿಗೆ ಕಿರುಕುಳ ನೀಡಿರುವ ಬಗ್ಗೆ ಹಾಗೂ ಕಿರುಗಾವಲು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಕೂಡಲೇ ಅಮಾನತು ಪಡಿಸಿ, ನ್ಯಾಯಾಂಗ ವಿಚಾರಣೆ ನಡೆಸಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.

ಮುಖ್ಯ ಶಿಕ್ಷಕ ಎಂ.ಸಿ.ಪ್ರಭುಸ್ವಾಮಿ ಸಹ ಶಿಕ್ಷಕಿ ಕನ್ನಿಕಾ ಪರಮೇಶ್ವರಿ ಅವರ ಜೊತೆಯಲ್ಲಿ ಅತ್ಯಂತ ಅಸಭ್ಯವಾಗಿ ನಡೆದು ಕೊಂಡಿದ್ದು, ಕರ್ತವ್ಯದ ವೇಳೆಯಲ್ಲಿ ಆಕೆಗೆ ಕಣ್ಣು ಹೊಡೆಯುವುದು, ಕೈಸನ್ನೆ ಮಾಡುವುದು, ಕೆನ್ನೆಗೆ ಮುತ್ತು ಕೊಡಲು ಬರುವುದು ಹೀಗೆ ಲೈಗಿಂಕ ಕಿರುಕುಳ ನೀಡಿದ್ಧಾರೆ.

ಅಲ್ಲದೇ ಬಿ.ಇ.ಓ ಚಿನ್ನಸ್ವಾಮಿ ಅವರ  ಬಳಿ ಸಹ ಶಿಕ್ಷಕಿ ಬಗ್ಗೆ ಕೆಟ್ಟ ನಡವಳಿ ಸೃಷ್ಟಿಯಾಗುವಂತೆ ಪ್ರೇರೆಪಿಸುವ ಕೆಲಸ ಮಾಡಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ಚಿಕ್ಕಸ್ವಾಮಿ ಅವರು ರಸ್ತೆಯಲ್ಲಿಯೇ ಶಿಕ್ಷಕಿಯಾದ ಕನ್ನಿಕಾ ಮತ್ತು ಅವರ ಯಜಮಾನ ಎಂ.ಸಿ.ಶ್ರೀಕಂಠಸ್ವಾಮಿ ಅವರನ್ನು ಜಾತಿ ಹೆಸರಿಡಿದು ನಿಂದಿಸಿದ್ಧಾರೆ, ಇತಂಹ ನೀಚ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಬಾಳೆಹೊನ್ನಿಗ ಕುಮಾರ್, ಡಾ.ಬಾಬು ಜಗಜೀವನ ರಾಂ ಒಕ್ಕೂಟಗಳ ಸಂಘದ ಅಧ್ಯಕ್ಷ ಎನ್.ಆರ್.ಚಂದ್ರಶೇಖರ್, ಟಿ.ಡಿ.ನಾಗರಾಜು, ರಮಾನಂದ, ಪೂರ್ಣಚಂದ್ರ, ಅಜ್ವದ್ ಪಾಷ, ಸುರೇಶ್ ಮತ್ತಿತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!