Thursday, November 19, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ಶಹಬುದ್ದೀನ್ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಪಾಂಡವಪುರ ಟೌನ್ ವಾಸಿ ಎ.ಶಹಬುದ್ದೀನ್ ಡಿ ಲಕ್ಕಾನ್ ಬಿನ್‌ ಸಲ್ಮಾನ್ ಶರೀಪ್ ಎಂಬಾತನನ್ನು ಕೊಲೆ ಮಾಡಿದ ಇಬ್ಬರಿಗೆ ಶ್ರೀರಂಗಪಟ್ಟಣದಲ್ಲಿ 3 ನೇ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪಾಂಡವಪುರ ಟೌನ್ ಬಸ್ ಡಿಪೋ ಮುಂದಿನ ಗ್ಯಾರೇಜ್ ಬಳಿಯ ಆರೋಪಿಗಳಾದ ಮಹಮದ್‌ ಸುಹೇಲ್ ಬಿನ್ ಲೇಟ್ ಗೌಸ್ ಮಹಮುದ್ದೀನ್‌ ಕಮಾರ್‌, ವಸೀಂಪಾಷ ಬಿನ್ ವಾಜೀದ್ ಪಾಷ ಜೀವಾವಧಿ ಶಿಕ್ಷೆಗೆ ಗುರಿಯಾದವರು.

ತನ್ನ ಮಗ ಎ.ಶಹಬುದ್ದೀನ್ ಡಿ ಲಕ್ಕಾನ್ ನನ್ನು ಕೊಲೆ ಮಾಡಿರುವುದಾಗಿ ಮೃತನ ತಂದೆ ಸಲ್ಮಾನ್ ಶರೀಫ್‌ ಪಾಂಡವಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಮೊ.ನಂ.43/2017 ಕಲಂ 302, 201 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ಕೈಗೊಂಡು ಆರೋಪಿಗಳ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ, ಸರ್ಕಾರಿ ಅಭಿಯೋಜಕರಾಗಿ ಪ್ರಫುಲ್ಲಾ ಎಂ.ಕೆ ವಾದ ಮಂಡಿಸಿದ್ದರು.

ಪ್ರಕರಣದ ತನಿಖಾ ಕಾಲದಲ್ಲಿ ತನಿಖಾಧಿಕಾರಿಯಾಗಿ ದೀಪಕ್ ಎಂ.ಕೆ. ಕರ್ತವ್ಯ ನಿರ್ವಹಿಸಿದ್ದು, ತನಿಖಾ ಸಹಾಯಕರಾಗಿ ಸಿಹೆಚ್’ಸಿ ಸತೀಶ್‌.ಕೆ.ಆರ್. ಕೃಷ್ಣಗೌಡ, ಶ್ರೀನಿವಾಸ್‌ ಮೂರ್ತಿ, ಯೋಗೇಶ್, ಹಫೀಜ್‌ ಪಾಷ, ಪಿ.ಸಿ. ಉಮೇಶ್‌ ಅವರ ತಂಡವು ಆರೋಪಿಗಳ ಪತ್ತೆ ಮತ್ತು ಪ್ರಕರಣದ ತನಿಖಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ