ಚಿಕ್ಕರಸಿನ ಕೆರೆ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಶಿವಪ್ರಸಾದ್ ಶನಿವಾರ ರಾತ್ರಿ ನಿಧನರಾಗಿದ್ದಾರೆ.
ರಕ್ತದೊತ್ತಡ ಇಳಿಮುಖವಾಗಿ ಚಿಕಿತ್ಸೆ ಫಲಿಸದೆ ಮರಣಹೊಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದು
ಇಂದು ಮದ್ಯಾಹ್ನ ಹನ್ನೆರಡು ಘಂಟೆಗೆ ಚಿಕ್ಕರಸಿನಕೆರೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಮೃತರು ಹೆಂಡತಿ ಮತ್ತು ಒಬ್ಬ ಮಗ ಹಾಗೂ ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ.
ಜಿ.ಮಾದೇಗೌಡರ ಅಪ್ಪಟ ಅಭಿಮಾನಿಯಾಗಿದ್ದ ಶಿವಪ್ರಸಾದ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ,ಕರ್ನಾಟಕ ರಾಜ್ಯ ರೈತಸಂಘದ ಬಗ್ಗೆ ಒಲವಿರಿಸಿಕ್ಕೊಂಡಿದ್ದರು.




