Saturday, November 21, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ| ಶಿಲ್ಪ ದರ್ಶನ್ ಪುಟ್ಟಣ್ಣಯ್ಯ ಗುಣಮುಖಕ್ಕಾಗಿ ಹೋಮ- ಅನ್ನಸಂತರ್ಪಣೆ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ಧರ್ಮಪತ್ನಿ ಶಿಲ್ಪ ದರ್ಶನ್ ಪುಟ್ಟಣಯ್ಯರವರ ಆರೋಗ್ಯ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಮಂಡ್ಯ ತಾಲೂಕಿನ ಮಲ್ಲನಾಯ ಕನಕಟ್ಟೆ ಗ್ರಾಮದ ಶ್ರೀ ವಿನಾಯಕ ದೇವಾಲಯದಲ್ಲಿ ದುದ್ದ ಹೋಬಳಿಯ 11 ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ರೈತ ಸಂಘ ಮತ್ತು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು “ಮೃತ್ಯುಂಜಯ ಹೋಮ” ಮತ್ತು “ಅನ್ನಸಂತರ್ಪಣೆ” ಕಾರ್ಯಕ್ರಮ ಏರ್ಪಡಿಸಿದರು.

ಬಳಿಕ ಮಾತನಾಡಿದ ರೈತ ಸಂಘದ ನಾಯಕಿ ಸುನೀತಾ ಪುಟ್ಟಣ್ಣಯ್ಯ, ದರ್ಶನ್ ಪುಟ್ಟಣ್ಣಯ್ಯ ಅವರ ಪತ್ನಿ ಶಿಲ್ಪಾ ಅವರ ಆರೋಗ್ಯಕ್ಕೆ ಒಳ್ಳೆಯದಾಗಲಿ ಎಂದು ದುದ್ಧ ಹೋಬಳಿಯ 11 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರು ಮೃತ್ಯುಂಜಯ ಹೋಮ ಏರ್ಪಡಿಸಿದ್ದಾರೆ ಎಂದು ಹೇಳಿದರು.

ಪ್ರತಿಯೊಬ್ಬರು ಅವರ ಕುಟುಂಬದಲ್ಲಿರುವ ಸಮಸ್ಯೆ ಬಗೆಹರಿಸುವುದೇ ಕಷ್ಟ, ಆದರೆ ನಮ್ಮ ಕುಟುಂಬದ ಬಗ್ಗೆ ಪ್ರೀತಿ ಅಭಿಮಾನವಿಟ್ಟು ರೈತ ಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂತಹ ಕಾರ್ಯಕ್ರಮ ಮಾಡಿರುವುದಕ್ಕೆ ನಮ್ಮ ಕುಟುಂಬ ಯಾವಾಗಲೂ ಚಿರಋಣಿಯಾಗಿರುತ್ತದೆ. ದರ್ಶನ್‌ಗೆ ಅಲ್ಲಿ ಸಮಸ್ಯೆ ಇದ್ದರೂ ಕೂಡ ಇಲ್ಲಿ ಬಂದು ಕೆಲಸ ಮಾಡಲಿಕ್ಕೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸವೇ ಅವರಿಗೆ ಶಕ್ತಿ ಬಂದಿದೆ ಎಂದು ಹೇಳಿದರು.

ಕೆಲವರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಬಗ್ಗೆ ಅಪಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ನಮ್ಮ ಕುಟುಂಬದಲ್ಲಿ ಮೋಜು ಮಸ್ತಿ ಇಟ್ಟುಕೊಂಡು ಕೆಲಸ ಮಾಡುವ ಕುಟುಂಬ ನಮ್ಮದಲ್ಲ, ನಮ್ಮದು ಸರ್ವಿಸ್ ಮಾಡುವ ಮನೋಭಾವ ಇರುವ ಕುಟುಂಬ ಎಂದು ಹೇಳಿದರು.

ದರ್ಶನ್ ಪ್ರತಿ ಬಾರಿ ಅಮೇರಿಕಾಕ್ಕೆ ಹೋದಾಗಲೂ ಕಾರಣ ಹೇಳಿ ಹೋಗಲು ಆಗಲ್ಲ, ಇಲ್ಲಿ ಇದ್ದಷ್ಟು ದಿನ ಅವರು ಊಟ ತಿಂಡಿ ಎಲ್ಲವನ್ನು ಲೆಕ್ಕಿಸದೆ ಕ್ಷೇತ್ರದ ಅಭಿವೃದ್ಧಿ ಕೆಲಸದ ಕಡೆ ಗಮನಹರಿಸುತ್ತಾರೆ. ಅವರು ಅಲ್ಲಿಗೆ ಹೋಗಬೇಕಾದ ಪರಿಸ್ಥಿತಿ ಬಂದಾಗ ಅವರ ಪತ್ನಿ ಶಿಲ್ಪಾ ಅವರಿಗೆ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಹಾಗೂ ಆಪರೇಷನ್ ಸಮಸ್ಯೆ ಪರಿಸ್ಥಿತಿ ಇರುವುದರಿಂದ ಅಮೆರಿಕಾಕ್ಕೆ ಹೋಗಿದ್ದಾನೆ, ಇನ್ನು ಮುಂದೆ ಆ ಸಮಸ್ಯೆ ಇನ್ನೂ ಕಡಿಮೆಯಾಗುತ್ತದೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಕುಟುಂಬದ ಮೇಲಿರಲಿ ನಾವು ಶಕ್ತಿಯುತವಾಗಿ ನಿಮ್ಮಗಳ ಜೊತೆ ಇದ್ದು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಮುಖಂಡ ನಂದೀಶ್ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅವರ ಪತ್ನಿಯ ಆರೋಗ್ಯ ಸಮಸ್ಯೆಯ ದೃಷ್ಟಿಯಿಂದ ಅಮೇರಿಕಾಕ್ಕೆ ಹೋಗುತ್ತಿದ್ದಾರೆ. ಜನ ಸಾಮಾನ್ಯರಿಗೆ ಅಪಪ್ರಚಾರ ಮಾಡುವುದು ಬೇಡ, ಅವರ ವೈಯಕ್ತಿಕ ಕಾರಣಗಳನ್ನು ಬಿಂಬಿಸಿ ಎಂದು ಹೇಳಿದರು.

ಶಿಕ್ಷಣ, ಆರೋಗ್ಯ, ರೈತರಿಗೆ ವೈಜ್ಞಾನಿಕ ಬೆಲೆ ಸಿಗಬೇಕು ಎಂಬ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಶಾಸಕರು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಶಾಸಕರು ಇರುವ ಸಂದರ್ಭದಲ್ಲಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಕ್ಯಾತನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಹೊಳಲು ಗ್ರಾಮದ ದೇವಾಲಯದ ತಾಂಡವೇಶ್ವರ ದೇವಾಲಯದ ಅರ್ಚಕ ಮನೋಹರ್ ದೀಕ್ಷಿತ್ ನೇತೃತ್ವದಲ್ಲಿ ಮಲ್ಲನಾಯಕನಕಟ್ಟೆ ಗ್ರಾಮದ ಗಣಪತಿ ದೇವಾಲಯದಲ್ಲಿ ಗಣಪತಿ ಹೋಮ,ನವಗ್ರಹ ಹೋಮ ಸಹಿತವಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಧರ್ಮಪತ್ನಿ ಶಿಲ್ಪದರ್ಶನ್ ಪುಟ್ಟಣ್ಣಯ್ಯ ಅವರ ಆರೋಗ್ಯಕ್ಕೋಸ್ಕರ ಮಹಾ ಮೃತ್ಯುಂಜಯ ಹೋಮ ನೆಡೆಯಿತು.

ಅವರ ಆರೋಗ್ಯ ಪರಿಪೂರ್ಣವಾಗಿ ಎಲ್ಲಾ ಆರೋಗ್ಯ ಸಮಸ್ಯ ನಿವಾರಣೆಯಾಗಲಿ ಎಂದು ಮಹಾ ಮೃತ್ಯುಂಜಯ ಹೋಮ ಶಾಂತವಾಗಿ ನೆರವೇರಿದೆ.ದರ್ಶನ್ ಪುಟ್ಟಣ್ಣಯ್ಯ ಅವರ ಪತ್ನಿ ಶಿಲ್ಪಾ ಅವರು ಶೀಘ್ರ ಗುಣಮುಖರಾಗಿ, ದರ್ಶನ್ ಅವರು ಇನ್ನೂ ಹೆಚ್ಚಿನ ಸೇವೆ ಮಾಡುವ ಅವಕಾಶ ಲಭಿಸಲಿ ಎಂದು ಪೂಜೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ದುದ್ದ ಹೋಬಳಿಯ ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮೃತ್ಯುಂಜಯ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ