ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆ ಗ್ರಾಮದಿಂದ ಶಿವಮಲ್ಲಯ್ಯ ಎಂಬುವರು ಕಾಣೆಯಾಗಿದ್ದು, ಈ ಬಗ್ಗೆ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳಿದ್ದು, ಮಿಕ್ಕೆರೆ ಗ್ರಾಮದಲ್ಲಿ ವಾಸವಾಗಿದ್ದರು. ನಿತ್ಯ ಮಿಕ್ಕೆರೆ ಗ್ರಾಮದ ಸರ್ಕಲ್ ಬಳಿ ಟೀ ಅಂಗಡಿ ಇಟ್ಟುಕೊಂಡು 12 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದರು. ಕಳೆದ ಮಾ.2ರಂದು ಟೀ ಅಂಗಡಿಯಲ್ಲಿ ವ್ಯಾಪಾರಕ್ಕಾಗಿ ಅಂಗಡಿಗ ಹೋದವರು ಮರಳಿ ಬಂದಿಲ್ಲವೆಂದು ಅವರ ಮಗ ಸಿದ್ದರಾಜು ದೂರು ನೀಡಿದ್ದಾರೆ.
ಸಂಬಂದಿಕರು ಹಾಗೂ ಇತರೆ ಎಲ್ಲಾ ಕಡೆ ಹುಡುಕಲಾಗಿ ನಮ್ಮ ತಂದೆಯವರು ಪತ್ತೆಯಾಗಿರುವುದಿಲ್ಲ. ನಮ್ಮ ತಂದೆಯವರು ಆರೋಗ್ಯವಾಗಿದ್ದು ಯಾವುದೆ ರೀತಿಯಲ್ಲಿ ತೊಂದರೆಗಳಿರುವುದಿಲ್ಲ. ಆದ್ದರಿಂದ ಕಾಣಿಯಾಗಿರುವ ಶಿವಮಲ್ಲಯ್ಯರವರ ಬಗ್ಗೆ ಸುಳಿವು ಸಿಕ್ಕರೆ ಕಿರುಗಾವಲು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.




