Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿದ್ದಪ್ಪಾಜಿ ಕಂಡಾಯದ ಮೆರವಣಿಗೆ : ಅನ್ನಸಂತರ್ಪಣೆ

ಎಂಟನೇ ಶತಮಾನದ ಹಿಂದೆ ಧರೆಗೆ ದೊಡ್ಡವರು ಮಂಟೇಸ್ವಾಮಿ ಅವರ ಶಿಷ್ಯನಾಗಿ ಸಮಾನತೆ ಸಾರಿದ ಐತಿಹಾಸಿಕ ಮಹಾಪುರುಷ ಚಿಕ್ಕಲೂರು ಘನನೀಲಿ ಸಿದ್ದಪ್ಪಾಜಿ ಜಾತ್ರೆಯ ಅಂಗವಾಗಿ ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ಸಿದ್ದಪ್ಪಾಜಿ ಅವರ ಕಂಡಾಯ ಮೆರವಣಿಗೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಭಕ್ತಿಪ್ರದಾನವಾಗಿ ವಿಜೃಂಭಣೆಯಿಂದ ನಡೆಯಿತು

ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಜಾತ್ರೆಯ ವಿಶೇಷ ಅಂದರೆ ಭಾಗವಹಿಸುವವರೆಲ್ಲ ಬಹುತೇಕ ರೈತರೇ ಆಗಿದ್ದು, ಜಾತಿ ಪದ್ದತಿ, ಪಂಕ್ತಿ ಸೇವೆ ತಾರತಮ್ಯಗಳ ವಿರುದ್ಧ ಹೋರಾಟ ಮಾಡಿದ ರಾಚಪ್ಪಜೀ ಅವರು ಉತ್ತರದಿಂದ ದಕ್ಷಿಣಾಭಿಮುಕವಾಗಿ ಬಂದರು. ಅವರ ಶಿಷ್ಯರೇ ನೀಲಗಾರ ಸಿದ್ದಪ್ಪಾಜಿ. ಜಾತಿ ಭೇದ ದಿಕ್ಕರಿಸಿ ಎಲ್ಲರೂ ಸಹಪಂಕ್ತಿಯಲ್ಲಿ ಊಟ ಮಾಡಬೇಕು ಎಂಬ ಕಲ್ಪನೆಯೊಂದಿಗೆ ಚಿಕ್ಕಲ್ಲೂರಿನಲ್ಲಿ ನೆಲೆಸಿದರು.

ಅವರ ಐಕ್ಯವಾದ ನಂತರ ವರ್ಷದ ಮೊದಲ ಹುಣ್ಣಿಮೆ ದಿನದಿಂದ ಐದು ದಿನಗಳ ಕಾಲ ಜಾತ್ರೆ ನಡೆಯುತ್ತದೆ, ಸಮಾಜದಲ್ಲಿ ಇದ್ದ ಮೇಲು ಕೀಳು, ಆಹಾರ ಪದ್ದತಿಯ ತಾರಮ್ಯದ ವಿರುದ್ಧ ಸಿಡಿದೆದ್ದು ಪಂಕ್ತಿ ಬೋಜನದ ಮೂಲಕ ನಾವೇಲ್ಲರೂ ಮನುಷ್ಯರು ಎಂದು ಸಿದ್ದಪ್ಪಾಜಿ ಸಾರಿದ ಹಿನ್ನೆಲೆಯಲ್ಲಿ ಹುಣ್ಣಿಮೆಯ ಮೂರನೇ ದಿನವಾದ ಈ ಪಂಕ್ತಿ ಸೇವೆಯಲ್ಲಿ ಮಾಂಸಾಹಾರ, ಸಸ್ಯಾಹಾರದ ಭೋಜನ ತಯಾರಿಸಿ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದರು.

ಇದರ ಮುಂದುವರೆದ ಭಾಗವಾಗಿ ಚಿಕ್ಕಲ್ಲೂರು ಸಿದ್ದಪ್ಪಾಜಿ ಸನ್ನಿದಾನದಲ್ಲಿ ನಡೆಯುವ ಪಂಕ್ತಿ ಸೇವೆ ಅಂಗವಾಗಿ ಶೆಟ್ಟಹಳ್ಳಿ ಗ್ರಾಮದಲ್ಲಿ ಸಿದ್ದಪ್ಪಾಜಿ ಉತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಭಾಗವಹಿಸುವುದರ ಮೂಲಕ ಪೂಜಾ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು.

ಶೆಟ್ಟಹಳ್ಳಿ ಗ್ರಾಮದಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ದಪ್ಪಾಜಿ ಕಂಡಾಯ, ಮಹದೇಶ್ವರ, ಕಾಲಭೈರೇಶ್ವರ ಹಾಗೂ ವೆಂಕಟೇಶ್ವರ ನೀಲಗಾರರ ಮೆರವಣಿಗೆ ನಡೆಸಲಾಯಿತು. ಮನೆ ಮುಂದೆ ಬಂದ ದೇವರಿಗೆ ಮಹಿಳೆಯರು ಪೂಜೆ ಸಲ್ಲಿಸಿದ ಧನ್ಯತೆ ಮೆರದರು.

ಹೊನಲು ಬೆಳಕಿನಲ್ಲಿ ವಿವಿಧ ಗ್ರಾಮಗಳಿಂದ ಬಂದ ಸಾವಿರಾರು ಭಕ್ತರು ಮಾಂಸಾಹಾರದ ಪ್ರಸಾದ ಸ್ವೀಕರಿಸಿದರು. ಕಂಡಾಯದ ಮೆರವಣಿಗೆ ಅಂಗವಾಗಿ ಶೆಟ್ಟಹಳ್ಳಿ ಗ್ರಾಮವನ್ನು ವಿದ್ಯುತ್ ದೀಪಾಲಾಂಕಾರದಿಂದ ಮಧುನವಗಿತ್ತಿಯಂತೆ ಶೃಂಗರಿಸಲಾಗಿತ್ತು, ಗ್ರಾಮದ ಮುಖಂಡರು ಹಾಗೂ ಯುವಕರು ಒಗ್ಗಟ್ಟಿನಿಂದ ಶ್ರಮಿಸಿದ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮವು ಸಾರಾಗವಾಗಿ ನೆರವೇರಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!