Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯ ಅಭಿನವ ಕನಕದಾಸ : ಭೈರತಿ ಸುರೇಶ್ ಬಣ್ಣನೆ

ಬಸವಣ್ಣ, ಕನಕದಾಸರ ಸಮಸಮಾಜ ನಿರ್ಮಾಣದ ದಾರಿಯನ್ನೇ ಅನುಸರಿಸುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಜ ಅರ್ಥದಲ್ಲಿ ಅಭಿನವ ಕನಕದಾಸರಾಗಿದ್ದಾರೆಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹೇಳಿದರು.

ಮಂಡ್ಯನಗರದ ಅಂಬೇಡ್ಕರ್‌ ಭವನದಲ್ಲಿ ಜನಸ್ನೇಹಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ-ಕನಕ ಜಯಂತೋತ್ಸವ, ಡಾ.ಪುನೀತ್‌ರಾಜ್‌ಕುಮಾರ್ ಮತ್ತು ವೀರಯೋಧರಿಗೆ ನಮನ ಕಾರ್ಯಕ್ರಮದ ಪ್ರಯುಕ್ತ ನೂತನ ಟ್ರಸ್ಟ್ ಉದ್ಘಾಟನೆ-ಪದವೀಧರ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣ, 15ನೇ ಶತಮಾನದಲ್ಲಿ ಕೀರ್ತನಕಾರ ಸಂತ ಕನಕದಾಸರು, 19ನೇ ಶತಮಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಾರಿದ ಸಂದೇಶ ಸಮಸಮಾಜ ನಿರ್ಮಾಣದ ತತ್ವವನ್ನು ಸಿದ್ದರಾಮಯ್ಯ ಅವರು ತಮ್ಮ ಜೀವನದಲ್ಲಿ ಅಳವಡಿಕೊಂಡಿದ್ದಾರೆ. ಸಂವಿಧಾನದ ಮೂಲಕ ಎಲ್ಲರೂ ಸಮಾನರು ಎಂದಿರುವ ಕಾನೂನು-ಸೌಲಭ್ಯಗಳನ್ನು ದೊರಕಿಸಲು ಶ್ರಮಿಸುತ್ತಿರುವ ಸಿದ್ದರಾಮಯ್ಯ ಅವರ ಹೋರಾಟ-ತ್ಯಾಗ -ಕೊಡುಗೆ ದೊಡ್ಡದಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜನಸ್ನೇಹಿ ಸೇವಾ ಟ್ರಸ್ಟ್ ಅಧ್ಯಕ್ಷ ಸಾತನೂರು ಎನ್.ಮಹೇಶ್, ಕಾಂಗ್ರೆಸ್ ಮುಖಂಡರಾದ ಡಾ.ಎಚ್.ಕೃಷ್ಣ, ರವಿಕುಮಾರ್‌ಗಣಿಗ, ಚಿದಂಬರ್, ಕರ್ನಾಟಕ ಯುವ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಭರತ್‌ಕುಮಾರ್, ಉದ್ಯಮಿ ದಿವ್ಯ, ಜಿಲ್ಲಾ ಕುರುಬರ ಸಂಘದ ಮಾಜಿ ಕಾರ್ಯದರ್ಶಿ ದೊಡ್ಡಯ್ಯ, ಸಾತನೂರು ಕೃಷ್ಣ , ಟ್ರಸ್ಟ್ನ ಪದಾಧಿಕಾರಿಗಳಾದ ಎಸ್.ಕೃಷ್ಣ, ಎನ್.ಮಹದೇವು, ಅನಂತ್‌ಕುಮಾರ್, ಸಿ.ನಾರಾಯಣಪ್ಪ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ